ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೪
ಗೌರ್ಮೆಂಟ್ ಬ್ರಾಹ್ಮಣ


ಗೌರ್ಮೆಂಟ್ ಬ್ರಾಮ್ಮಣ


ಕೃತಿಯ ಬಗ್ಗೆ ಆಯ್ದ ಅಭಿಪ್ರಾಯಗಳು:

ಈ ಕೃತಿಯನ್ನು ಕುರಿತು ಪತ್ರಿಕೆಗಳಲ್ಲಿ ಸಾಕಷ್ಷು ವಿಮರ್ಶೆಗಳು ಬಂದಂತೆ ಪತ್ರಗಳೂ
ರಾಶಿಯಂತೆ ಬಂದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಆಯ್ಕೆ ಮಾಡಿ ಕೊಡಲಾಗಿದೆ.ಇದರಿಂದ
ಓದುಗರಿಗೆ ಒಂದಲ್ಲೊಂದು ರೀತಿಯಲ್ಲಿ ಸಹಾಯವಾಗಬಹುದೆಂಬ ನಂಬಿಕೆ.

◼ ಈ ಶತಮಾನದ ಕೊನೆಯ ಮುಖ್ಯ ಬರಹದ ದಿಕ್ಕು:

ಅರವಿಂದ ಮಾಲಗತ್ತಿ ಅವರ 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡದಲ್ಲಿ
ಪ್ರಕಟವಾಗುತ್ತಿರುವ ಮೊಟ್ಟ ಮೊದಲ ದಲಿತ ಬದುಕಿನ ಆತ್ಮ ಕಥೆ. ಈ ಕೃತಿಯು ನೀಡುವ
ತಾಜಾ ಅನುಭವ ಮತ್ತು ದಲಿತ ರೂಪಕ ಶಕ್ತಿ ಅಸೀಮವಾದುದು.

ಅರವಿಂದ ಮಾಲಗತ್ತಿ ಅವರು ತಮ್ಮ ಅನುಭವವನ್ನು ಬಿಡಿ ಬಿಡಿಯಾದ ಆಕಾರದಲ್ಲಿ
ಕಟ್ಟಿ ಕೊಟ್ಟಿದ್ದಾರೆ. ಈ ಆಕಾರವು ತನಗೆ ತಾನೇ ಸ್ವಯಂಪೂರ್ಣ... ಇವು ಬಿಡಿಯಾದ
ಕಥೆಗಳಂತೆಯೂ ಆತ್ಮ ಕಥೆಯಂತೆಯೂ ಭಾವಿಸಲು ಅರ್ಹವಾಗಿವೆ. ಕತೆ,ಪ್ರಬಂಧ ಮತ್ತು
ಆತ್ಮ ಕಥೆಗಳಲ್ಲಿ ಇರುವ ಅಂತರದ ಸೂಕ್ಷ್ಮ ಸಂಬಂಧಗಳನ್ನು ಬರಹಗಾರ ತನ್ನ
ಜೀವಾಳದಿಂದಲೇ ಅದನ್ನು ಬೇರ್ಪಡಿಸಬೇಕಾಗುತ್ತದೆ. ತನ್ನ ವೈಯಕ್ತಿಕ ಅನುಭವ ತೀವ್ರ
ಸಂವೇದ ಶೈಲಿಗೆ ಪ್ರಾಪ್ತವಾದಾಗ ಮಾತ್ರ 'ಆತ್ಮ ಕಥೆ'ಗೆ ಬೆಂಕಿ ಬಿದ್ದಂತೆ ಆಗುತ್ತದೆ. ಅದು
ಒಂದು ರೀತಿಯಲ್ಲಿ ಉರಿಯುವ ಕಂಡವಾಗುತ್ತದೆ. ಅದು ನಿಗಿನಿಗಿ ಪ್ರಜ್ವಲಿಸುವ ಬೆಂಕಿ
ಹೊಳೆ,ಸಹಸ್ರ ವರ್ಷಗಳ ನಿಗಿನಿಗಿ ಕೆಂಡವು ತನ್ನ ಒಳಗೇ ಸುರಿಯುವ ಬದುಕಾಗಿ
ಪರಿಣಮಿಸುತ್ತದೆ...


ನನಗೆ ಅನಿಸುವಂತೆ ತುಸು ಚಂದದ ಬರಹದ ಕಡೆ ವಾಲುತ್ತ ಆ ಒರಟು
ಅನುಭವವನ್ನು ಮರೆಮಾಸುತ್ತಾರೆ... ಇಲ್ಲಿನ ಬಿಡಿ ಬರಹಗಳು ಏಕ ಘಟಕದಲ್ಲಿ
ಏಕಾತ್ಮಕವಾಗಿ ಎರಕ ಹೊಯ್ಯುವುದಿಲ್ಲ. ಒಂದು ಘನ ಸ್ಥಿತಿಯ ಬೆಳಕು
ಬಂಡೆಯಾಗದಿರುವುದಕ್ಕೆ ಇದೂ ಒಂದು ಕಾರಣವಿರಬಹುದೆಂದು ನನಗೆ ತೋರುತ್ತದೆ.