ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨೯

◼ Conclusion ಅಷ್ಟಾಗಿ ಒಪ್ಪುದಿಲ್ಲ:

ಗೌರ್ಮೆಂಟ್ ಬ್ರಾಹ್ಮಣ ಓದಿದೆ. ಕೊನೆಯ ಎರಡು ಘಟನೆಗಳು ತುಂಬಾ ಹಿಡಿಸಿದವು... ಎಲ್ಲಾ ಪ್ರಕರಣಗಳಲ್ಲಿ ನಿಮ್ಮ ವಿದ್ವತ್ತಿನಿಂದ Conclusion ನೀಡಿರುವುದು ಅಷ್ಟಾಗಿ ಒಪ್ಪುದಿಲ್ಲ. ಪ್ರಕರಣಗಳ ವಾಸ್ತವ ರೀತಿಯೇ Originality ಮೌಲ್ಯ.

ಡಿ. ಈರೇಶ್ ನಗರ್ಲೆ

ಬೆಂಗಳೂರು, ೧೯.೧೨.೯೬

◼ ನನ್ನ ನೆನಪುಗಳು ತಾಜಾ ಆದವು:

ನಾನು ಹುಟ್ಟಿನಿಂದ ಬ್ರಾಹ್ಮಣನಾದವನು.. ಗೌರ್ಮೆಂಟ್ ಬ್ರಾಹ್ಮಣ ಓದಿ ನನ್ನ ಮನಸ್ಸು ಚಿಂತನೆಗೆ ಒಳಗಾಯಿತು. ನನ್ನ ಬದುಕಿನ ಹಲವಾರು ನೆನಪುಗಳು ತಾಜಾತನದಿಂದ ನಳನಳಿಸಿದವು....

ಮೋಹನ ಭಟ್

ಶಿರಸಿ, ೨೮.೧.೯೫

◼ ಎರಡನೇ ಕಂತಿನ ಕೃತಿಯ ನಿರೀಕ್ಷೆ

'ಮಾನವೀಯ ಮೌಲ್ಯ'ಕ್ಕಾಗಿ ನಡೆಸಿದ ವಿಶಿಷ್ಟ ಶೋಧನೆ ನಿಜಕ್ಕೂ ಪರಿಣಾಮಕಾರಿ. ನನ್ನ ಮನಸ್ಸಿನೊಳಗೆ ಹಲವು ಬಗೆಯಲ್ಲಿ ಹೊಸ ಚೈತನ್ಯ ನೂತನ ವಿಚಾರ ಮೂಡಿಸಿವೆ. ನಿಮ್ಮ 'ಎದೆಗಾರಿಕೆ' ಹಾಗೂ ಪ್ರಾಮಾಣಿಕ ಪ್ರಯತ್ನಕ್ಕೆ ಈ ಓದುಗನ ತುಂಬು ಹೃದಯದ ಅಭಿನಂದನೆಗಳು. ಎರಡನೇ ಕಂತಿನ ಕೃತಿಯ ನಿರೀಕ್ಷೆಯಲ್ಲಿರುವೆ.

ನೀ, ಗೂ, ರಮೇಶ್

೨೦.೮.೯

◼ ಈ ಪುಸ್ತಕ ಏಕೆ ನಿನ್ನ ಹತ್ತಿರ?

... ಸಮುದಾಯ ಎಸ್.ಎಫ್.ಆಯ್ ಹಮಾಲರ ಸಂಘ ಕಟ್ಟಿಕೊಂಡು ಓಡಾಡುವ ನನ್ನಂಥವನನ್ನು ಸಾಮಾಜಿಕ ಕ್ಷೇತ್ರದಲ್ಲಿ ಇನ್ನಷ್ಟು ಎದೆಗಾರಿಕೆಯಿಂದ ಎಚ್ಚರಿಕೆಯಿಂದ ದುಡಿಯಲು ಪ್ರೇರೇಪಿಸಿದೆ.