ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಓದುವ ಮುನ್ನ ಓದುಗರೊಂದಿಗೆ


ಗಮನದಲ್ಲಿಟ್ಟುಕೊಂಡು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೂ ಮೇಲೆ ಹೇಳಿದ ಉತ್ತರವೇ ಅನ್ವಯವಾಗುತ್ತದೆ. ಒಬ್ಬೊಬ್ಬರ ಅನುಭವಗಳೂ ವಿಶಿಷ್ಟವಾದವು. ತಮ್ಮ ತಮ್ಮ ಅನುಭವಗಳ ಹಿನ್ನಲೆಯಲ್ಲಿ ಬದುಕಿನ ಮಾರ್ಗವನ್ನು ರೂಪಿಸಿಕೊಳ್ಳುತ್ತಾರೆ. ಹಾಗೆಯೇ ನನ್ನದೂ ಕೂಡ ಅವರ ಪ್ರಶ್ನೆ ಕೇವಲ ಪ್ರಶ್ನೆಯಾಗಿ ಹೊರಬಂದಿದ್ದರೆ ದುಡುಕಿನ ಮಾತಿಗೆ ಅವಕಾಶವೇ ಇರುವುದಿಲ್ಲ. ಆದರೆ ವ್ಯಂಗ್ಯ ನಗೆ ಮತ್ತು ವಕ್ರ ನೋಟದೊಂದಿಗೆ ಪ್ರಶ್ನೆ ಎದುರಾದಾಗ ನಾನೂ ಅಷ್ಟೇ ನಿಷ್ಟುರವಾಗಿ ಅವರಿಗೆ ಮರುಪ್ರಶ್ನೆ ಹಾಕಿದ್ದೇನೆ. "ನಿವ್ಯಾಕ್ರಿ ಹಾಗಿಲ್ಲ? ಅವರ ಹಾಗೆ ನೀವೂ ಇರಬಹುದಲ್ಲ..... ಇವತ್ತು ಹೀಂಗ ಕೇಳ್ಳಿರಿ, ನಾಳೆ ಗಾಂಧೀಜಿಯ್ಯಂಗ ನೀವು ಯಾಕ ಒಂದು ಲಂಗಟಾ ಹಾಕ್ಕೊಂಡು ಇರಬಾರದು? ಅಂಥ ಕೇಳವ್ರು ನೀವು. ನನಗ ಲಂಗಟಾ ಹಾಕ್ಕೊಂಡು 'ಮಹಾತ್ಮ' ಅನಿಸಿಕೊಳ್ಳೋ ಹಂಬಲ ಇಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಇರಬೇಕಾದ ಗುಣಾಯಲ್ಲಾ ನನ್ನಲದಾವು ಅಂತ ತಿಳಕೊಳ್ಳಿ. ಆದರೆ ಉಪದೇಶ ಮಾಡೋದು ಬೇಡ' ಎಂದಾಗ, ಉಗುಳು ನುಂಗಿದವರು ಮತ್ತೆ ಕೆದಕುವ ಗೊಡವೆಗೆ ಬಂದಿಲ್ಲ. ಬೆನ್ನ ಹಿಂದೆ ಧಾರಾಳವಾಗಿ ಮಾತನಾಡಿಕೊಳ್ಳುತ್ತಿರಬಹುದು.

ಬಾಲ್ಯದಲ್ಲಿ ಒಡನಾಡಿಯಾಗಿ ಮಾಗದರ್ಶಕಿಯಾಗಿ, ರಕ್ಷಕಳಾಗಿ ಹೆಜ್ಜೆ ಹೆಜ್ಜೆಗೂ ನನ್ನೊಂದಿಗೆ, ನಮ್ಮ ಸಹೋದರರೊಂದಿಗೆ "ಆಯಿ" (ಅಜ್ಜಿ)ಯೇ ಬಂದಿದ್ದಾಳೆ. "ಅವಳಿಲ್ಲದಿದ್ದರೆ ನಮ್ಮ ಬಾಲ್ಯದ ದಿನಗಳಿಗೆ ಅಸ್ತಿತ್ವವೇ ಇಲ್ಲ' ಎನ್ನುವಂತೆ ಬಾಲ್ಯದ ಬದುಕಿನಲ್ಲಿ ಹಾಸು ಹೊಕ್ಕಿದ್ದಾಳೆ ನಮಗೆ ಉಣಿಸುವ ತಿನಿಸುವ ಬೆಳೆಸುವ ಎಲ್ಲ ಹೊಣೆಗಾರಿಕೆಯಲ್ಲೂ, ತಂದೆ ತಾಯಿಗಳಿಗಿಂತ ಅಯಿಯ ಸ್ಥಾನ ಹಿರಿದು. ನಾನು ಉದ್ಯೋಗಕ್ಕೆ ಸೇರಿದಾಗಲೂ ಅವಳ ತೊಡೆಗಳನ್ನು ತಲೆದಿಂಬಾಗಿಸಿಕೊಂಡು ಮಲಗಿ, ಅವಳ ಅನುಭವಗಳನ್ನು ಕೆದಕಿ ಕೆದಕಿ ಕೇಳಿದ್ದೇನೆ. ಮುದುಕಿಯಾದರೂ ಹೆಣ್ಣನದ ಸಹಜ ಸ್ವಭಾವ ಮರೆಯದೆ ಒಮ್ಮೆ ನಾಚುತ್ತ, ಮತ್ತೊಮ್ಮೆ ಸಿಡುಕಿನಿಂದ, ಇನ್ನೊಮ್ಮೆ ಅಷ್ಟೇ ಸಿಟ್ಟಿನಿಂದ ಅನುಭವದ ಸವಿಯೊಂದಿಗೆ ಬೆರೆತು ಹೇಳುತ್ತ, ನನ್ನನ್ನೂ ಮೂಗನಾಗಿಸಿ ಬಿಡುತ್ತಿದ್ದಳು. ಅವಳ ಬಹುಮುಖ ವ್ಯಕ್ತಿತ್ವ, ನನ್ನನ್ನು ಚಿಂದಿಯಾಗಿಸಿದೆ. ಅವಳನ್ನು ಕಂಡಾಗಲೆಲ್ಲ ಅವಳ ಮೇಲಿದ್ದ ಗೌರವ ಇಮ್ಮಡಿಯಾಗುತ್ತಿತ್ತು. ಅವಳನ್ನು ನಾನು ಕಳೆದುಕೊಳ್ಳುತ್ತೇನೆ" ಎನ್ನುವ ದಿನಗಳು ಬರುವ ಮುನ್ನವೇ ಅವಳನ್ನು ಕಳೆದುಕೊಂಡಿದ್ದು ನನಗೆ ತುಂಬಲಾರದ ನಷ್ಟವೆನಿಸಿತು. ಏನೆಲ್ಲ ಕೇಳಬೇಕೆಂದಿದ್ದೆ, ಹೇಳಬೇಕೆಂದಿದ್ದೆ, ಅವೆಲ್ಲ ಒಗಟಾಗಿಯೇ, ನನ್ನ ಮತ್ತು ಅವಳ ಎದೆಯಲ್ಲಿಯೇ ಉಳಿದುಬಿಟ್ಟವು. ಅವಳ ಕಠೋರವಾದ ಅನುಭವಗಳ ಎದುರಿಗೆ ನಾನು ಹೇಳ ಹೆಸರಿಲ್ಲದ ತರಗಲೆಯಾಗಿ ಹಾರಿ ಹೋಗುವವ. "ನನಗೆ ನಾಚಿಪ್ಪತ್ತ ವರ ಆಯ್ತು, ಇನ್ನಾ ಇಪ್ಪತ್ತ ವರ ಬದರೀನಿ' ಎಂದು ಹೇಳುತ್ತಿದ್ದಳು.