ವಿಷಯಕ್ಕೆ ಹೋಗು

ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಣ್ಣು, ತಾಯಿಗೆ ಸಿಟ್ಟು ತರಿಸುತ್ತಿತ್ತು. ಕಲ್ಲಿನಿಂದ ತಿಕ್ಕುವಾಗ ನನ್ನ ಮೈ ಉರಿದು ರೋದನೆ
ಹೆಚ್ಚಿದಾಗ ಸಿಟ್ಟು ಹೆಚ್ಚಿ ಕೈಯಲ್ಲಿರುವ ಕಲ್ಲಿಂದಲೇ ಪೂಜೆಯಾಗುತ್ತಿತ್ತು. ನನ್ನ ಕಪ್ಪನೆಯ
ಬಣ್ಣ ಬೆಳ್ಳಗಾಗಿಸಲು ಪ್ರಯತ್ನಿಸಿ ನನ್ನವ್ವ ಸೋಲುತ್ತಿದ್ದಳು. ಮೈ ತೊಳೆದಾಗ ಸ್ವಲ್ಪು
ಬೆಳ್ಳಗೆ ಕಾಣುತ್ತಿದ್ದೆ. ನಂತರ ಮೂಲ ಬಣ್ಣ ಪ್ರತ್ಯಕ್ಷವಾಗುತ್ತಿತ್ತು. ಕೊನೆಗೂ ನಾನು
ಬೆಳ್ಳಗಾಗಲಿಲ್ಲ. ಆ ಕಲ್ಲಿನ ತಿಕ್ಕುವಿಕೆಯ ಪರಿಣಾಮವಾಗಿ ಕೈ ಕಾಲು ಮೈ ಮೇಲೆಲ್ಲ
ಕಪ್ಪನೆಯ ಬಿರುಸಾದ ಉದ್ದ ಕೂದಲುಗಳು ಬೆಳೆದುವೇ ವಿನಃ ನಾನೇನೂ ಬೆಳ್ಳಗಾಗಲಿಲ್ಲ.

ಆ ಕೊಳ್ಳದ ನೀರು ಎಲ್ಲೆಲ್ಲಿಂದ ಸಂಗ್ರಹಿಸಿಕೊಂಡು ಹರಿಯುತ್ತಿತ್ತು ಎನ್ನುವುದು