"ಯಾಕ್ರಿಯಪ್ಪಾ ಏನಾಯಿತು?" ಅತ್ತಿಯ ಮಾತು.
ಏನಾಯಿತಾ? ಎಲೈದಾನು ಅವನು? ಬಂದ ಮ್ಯಾಲ ಕೇಳು ಹೇಳುತಾನ ಎಂದರು. ಅತ್ತೆ ನನ್ನ ಮುಖ ನೋಡಿದಳು, ನಾನು ಮುಖ ಕೆಳಕ್ಕೆ ಹಾಕಿ ಮನೆಗೆ ಓಡಿದೆ. ಅಷ್ಟರಲ್ಲಿಯೇ ಹೊರಗಡೆ ಹೋದ ಮಾವ ಬಂದ. ಗಲಾಟೆ ಹೆಚ್ಚಾಯಿತು. ಅವರೆಲ್ಲ ಅಲ್ಲಿಂದ ಹೊರಟು ಹೋಗುವವರೆಗೆ ನಾನೇನು ಹೊರಕ್ಕೆ ಬರಲಿಲ್ಲ.
ಚಕ್ಕುಲಿ ಕೊಡಿಸಿದ ವ್ಯಕ್ತಿಯ ಆಡು ಕಳೆದು ಹೋಗಿದೆ. ಆತ ಸಂದೇಹ ಬಂದು ಇಲ್ಲಿಗೆ ಬಂದ. ಮನೆಯಲ್ಲಿ ಅಂದು ಪಾಲು ಹಾಕಿದ ಆಡು ಅವರದೇ ಎನ್ನುವದರಲ್ಲಿ ಸಂದೇಹವೇ ಇರಲಿಲ್ಲ. ಕದ್ದು ತಂದವರು ಯಾರು? ನಮ್ಮ ಮಾವ? ಅಲ್ಲಾ ಆತ ಕೇವಲ ಸತ್ತ ಕುರಿಗಳನ್ನು ಕೊಂಡು ಮಾರುವವ. ಮನೆಗೆ ಒಬ್ಬಾತ ಬಂದಿದ್ದ. ಆತ ಗುಡ್ಡದಲ್ಲಿ
"ಈ ಆಡಿನ ಕುತ್ತಿಗೆಗೆ ತೋಳ ಹಿಡಿದು ಸತ್ತು ಹೋಗಿದೆ" ಎಂದು ಹೇಳಿ ಹಣಕ್ಕೆ ಮಾರಾಟ
ಮಾಡಿ ಹೋಗಿದ್ದ.
"ನೋಡ್ರಿ, ತಂದವ್ರು ಯಾರು ಅನ್ನೋ ಹೆಸರು ನನಗೆ ಗೊತ್ತಿಲ್ಲ" ಎಂದ ಮಾವ.
ಊರ ವಾಲೀಕಾರನೇ ಅಲ್ಲಿ ಬಂದಿರುವುದರಿಂದ ಅಂದು ನಮ್ಮ ಚಂದಪ್ಪ ಮಾವನ ಚಿಂದಾಬಂಧಿ ಹೇಳಲಸದಳವಾದುದು. ಗರುಡನ ಕಾಲಿಗೆ ಸಿಕ್ಕ ಇಲಿಯಂತಾಗಿದ್ದ. ಇಲಿಯ ಕಾಲಿಗೆ ಕಟ್ಟಿಕೊಂಡ ಕಪ್ಪೆಯಂತೆ ಕುರಿ ತಂದು ಕೊಟ್ಟ ವ್ಯಕ್ತಿಯ ರೀತಿಯಾಗಿದ್ದರೂ ಮಾವ ಕೊನೆಯವರೆಗೆ ಬಾಯಿ ಬಿಡಲಿಲ್ಲ. ಆದರೆ ಅವರಿಗೆ ದಂಡ ತೆತ್ತನೆಂದು ತೋರುತ್ತದೆ.
೧
೧