ಪುಟ:ಗೌರ್ಮೆಂಟ್ ಬ್ರಾಹ್ಮಣ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಗೌರ್ಮೆಂಟ್ ಬ್ರಾಹ್ಮಣ


ನನ್ನ ಎದೆಯ ಬಡಿದಂತೆ ಉಳಿದುಕೊಂಡಿದೆ. ರಾಘವೇಂದ್ರನ ಭಕ್ತಿಗೀತೆ ಕೇಳಿದಾಗಲೊಮ್ಮೆ, ಆತನ ಭಾವ ಚಿತ್ರಗಳು ಕಂಡಾಗಲೊಮ್ಮೆ ಮತ್ತು ರಾಘವೇಂದ್ರನ ಮಠದ ಎದುರಿಗೆ ಹಾದು ಹೋಗುವಾಗ ಥಟ್ಟನೆ ನೆನಪಾಗಿ, ಎದೆಗೆ ಬಡಿದ ಆ ಮೊಳೆಯನ್ನೇ ಹಿಡಿದು ಅಲುಗಾಡಿಸಿದಂತಾಗುತ್ತದೆ. ಆದರೆ ಆ ಭಕ್ತಿಯ ಭಾವ ಈಗ ಶೂನ್ಯದಿಂದ ನಿಶೂನ್ಯವಾಗಿದೆ.