ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮೂರನೆಯ ಪ್ರಕರಣ.
೧೭

ಹಾಗೆ ಕಾಣಿಸುತ್ತಿಲ್ಲವಾದುದರಿಂದ ಆತನು ರೂಪವಿಲ್ಲದವನೆಂದೇ ನಾವು ಊಹಿಸಬೇಕು. ಅಣುಮೊದಲ್ಗೊಂಡು ಬ್ರಹ್ಮಾಂಡದವರೆಗಿರುವ ಸಮಸ್ತ ಪದಾರ್ಥಗಳೂ, ಅನೇಕಗಳಾದ ಸೂರ್ಯಚಂದ್ರಾದಿಗೊಳಗಳೂ ಪರಸ್ಪರ ಸಂಬಂಧವನ್ನು ಹೊಂದಿರುವುದರಿಂದಲೂ, ಪ್ರತಿ ಒಂದು ವಸ್ತುವೂ ಆವುದೋ ಒಂದು ಪ್ರಯೋಜನವನ್ನು ಉದ್ದೇಶಿಸಿಯೇ ಆಲೋಚನೆಮಾಡಿ ನಿರ್ಮಿತವಾಗಿರುವಂತೆ ತೋರುತ್ತಿರುವುದರಿಂದಲೂ, ಸಮಸ್ತ ಸೃಷ್ಟಿಯನ್ನೂ ಮಾಡಿದವನೊಬ್ಬನೇ ಎಂಬುದೂ, ಆತನು ಆತ್ಮಸ್ವರೂಪನೆಂಬುದೂ ಸ್ಪಷ್ಟವಾಗುವುದು. ರೂಪವಿಲ್ಲದ ವಸ್ತುವು ಆವಾಗಲೂ ನಾಶವನ್ನು ಹೊಂದದಾದುದರಿಂದ ಆತನು ನಾಶರಹಿತನು; ಆದುದರಿಂದಲೇ ಶಾಶ್ವತನೆನಿಸಿಕೊಂಡನು. ಸೃಷ್ಟಿಯ ಧರ್ಮಗಳು ಸೃಷ್ಟಿಕರ್ತನಿಗೆ ತಿಳಿಯದಿರವಾದುದರಿಂದ ಆತನು ಸತ್ವಜ್ಞನೆಂದೂ, ಎಲ್ಲೆಡೆಯಲ್ಲಿಯೂ ಒಬ್ಬನೇ ಇದ್ದು ನಡೆಯಿಸುವಂತೆ ಸೃಷ್ಟಿಯೆಲ್ಲವೂ ಎಲ್ಲೆಲ್ಲಿಯೂ ಕ್ರಮವಾಗಿ ನಡೆಯುತ್ತಿರುವುದರಿಂದ ಸರ್ವಶಕ್ತನೆಂದೂ, ಸುಲಭವಾಗಿ ತಿಳಿದುಕೊಳ್ಳಬಹುದು. ಸೃಷ್ಟಿಯಲ್ಲಿರುವ ಆವ ವಸ್ತುವನ್ನು ನೋಡಿದರೂ, ಸೃಷ್ಟಿಕರ್ತನ ಬುದ್ದಿಯೂ ತಿಳಿವೂ ಪ್ರಕಾಶಿಸುತ್ತಿರುವುವಾದುದರಿಂದ, ಆತನು ಅಪರಿಮಿತಬುದ್ದಿಯುಳ್ಳವನೆಂದೂ, ಜ್ಞಾನ ಸ್ವರೂಪನೆಂದೂ, ತಿಳಿದುಕೊಳ್ಳಬಹುದು. ಸೃಷ್ಟಿಯಲ್ಲಿರುವ ಸಮಸ್ತ ಜೀವ ರಾಶಿಗಳೂ ಸಾಧಾರಣವಾಗಿ ಸೌಖ್ಯವನ್ನೇ ಅನುಭವಿಸುತ್ತಿರುವುದರಿಂದಲೂ, ಎಂದಾದರೂ ದುಃಖವುಂಟಾದಪಕ್ಷದಲ್ಲಿ ಅದು ನಮ್ಮ ಲೋಪದಿಂದಲೋ ಇತರರ ದೋಷದಿಂದ ಉಂಟಾಗುವುದಾದುದರಿಂದಲೂ, ಸೃಷ್ಟಿಕರ್ತನು ಜೀವಕಾರುಣ್ಯವುಳ್ಳವನೆಂದೂ, ದಯಾಸ್ವರೂಪನೆಂದೂ ವಿಶದವಾಗಿ ತಿಳಿಯುವುದು. ಸ್ವಭಾವವಾಗಿ ಒಂದು ಜಂತುವಿಗೆ ದುಃಖವೂ, ಒ೦ದು ಜಂತುವಿಗೆ ಸಂತೋಷವೂ ಉಂಟಾಗಲಾರದಾದುದರಿಂದ ಪರಮೇಶ್ವರನು ಪಕ್ಷಪಾತವಿಲ್ಲದವನೆಂದೂ ವ್ಯಕ್ತವಾಗುವುದು. ಲೋಕದಲ್ಲಿ ಆರಾದರೂ ದುಷ್ಕಾರ್ಯಗಳನ್ನು ಮಾಡಿದರೆ ಅದಕ್ಕೆ ಭೀತಿಯೋ, ಶಕ್ತಿಹೀನತೆಯೋ, ಭ್ರಮೆಯೋ, ಪ್ರಮಾದವೋ, ಆವುದೋ ಕಾರಣವಾಗಿರುವುದು. ಭಗವಂತನಲ್ಲಿ ಅಂತಹ ಲೋಪವಾವುದೂ ಇಲ್ಲವಾದುದರಿಂದ, ಆತನಲ್ಲಿ ನೀಚಗುಣಗಳಾವುವೂ ಇಲ್ಲ. ಆದುದರಿಂದ ಆತನು ಪರಿಶುದ್ದನೆಂದೂ, ಸಮಸ್ತಸದ್ಗುಣ