ಪುಟ:ಚಂದ್ರಮತಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪ್ರಕರಣ, ೨೧


ಸರಿ, ನಾವು ಪರಲೋಕದಲ್ಲಿರಬೇಕಾದ ಕಾಲವಾದರೋ ಪರಿಮಿತಿಯಿಲ್ಲದು ದಾಗಿರುವುದು. ನಾವು ಇರುವಂತೆಯೇ ಇದು ಯಾವಾಗಲೋ ಈ ಲೋಕ ವನ್ನು ಬಿಟ್ಟು ಪರಲೋಕವನ್ನು ಸೇರತಕ್ಕವರಾಗಿರುವೆವು. ಪರಲೋಕ ದಲ್ಲಿ ನಿತ್ಯಸುಖವನ್ನನುಭವಿಸಬೇಕಾದರೆ ಧರ್ಮವೊಂದೇ ನಮಗೆ ಸಾಧಕ ವಾದುದಲ್ಲದೆ ಮತ್ತೊಂದಿಲ್ಲವು. ನಾವು ಶಾಶ್ವತವಾದ ಪರಲೋಕಸುಖ ವನ್ನು ಅಪೇಕ್ಷಿಸುವೆವಾದರೆ ಈ ಲೋಕದಲ್ಲಿರುವ ತುಚ್ಛಗಳಾದ ನಿಮಿಷ ಸೌಖ್ಯಗಳಿಗೆ ಆಶೆಪಡದೆ ಎಂತಹ ಕಷ್ಟಗಳು ಸಂಭವಿಸಿದರೂ ಸೈರಿಸಿಕೊಂಡು ಧರ್ಮಮಾರ್ಗವನ್ನನುಸರಿಸಿ ನಡೆಯಬೇಕು.


ಚಂದ್ರ-ನಮಗೆ ಶಾಶ್ವತಸುಖವುಂಟಾಗುವಂತೆ ಸಹಾಯಕಗಳಾ ಗುವ ಧರ್ಮಗಳಾವುವೋ ಅವುಗಳನ್ನಾಚರಿಸುವ ಬಗೆ ಹೇಗೋ ಇವುಗಳ ನ್ನೆಲ್ಲಾ ನನ್ನಲ್ಲಿ ಅನುಗ್ರಹವಿಟ್ಟು ತಿಳಿಸಬೇಕು.

ಗುರು-ಧರ್ಮಸ್ವರೂಪನಾದ ಭಗವಂತನು ನಮಗೆ ಹೀಗೆಯೇ ನಡೆದುಕೊಳ್ಳಬೇಕೆಂದು ಉದ್ದೇಶಿಸಿ ವಿಧಿಸಿರುವ ಆಜ್ಞೆಗಳೇ ಧರ್ಮಗಳು. ಅಂತಹ ಧರ್ಮಗಳನ್ನು ಅನುಸರಿಸುವುದರಿಂದ ಸೌಖ್ಯವೂ, ಮಾರುವುದ ರಿಂದ ದುಃಖವೂ ಸಂಭವಿಸುವುವು. ನಾವು ಅನುಸರಿಸಬೇಕಾದ ಧರ್ಮ ಗಳೆಲ್ಲವೂ ನಾಲ್ಕು ಬಗೆಯಾಗಿರುವುದೆಂದು ಹೇಳಬಹುದು. ಮೊದಲನೆಯ ಬಗೆಯವು-ಸೃಷ್ಟಿಕರ್ತನಾದ ಪರಮೇಶ್ವರನ ವಿಷಯದಲ್ಲಿ ನಡೆದುಕೊಳ್ಳ ಬೇಕಾದ ಕ್ರಮಗಳು, ಎರಡನೆಯಬಗೆಯವು-ನಮ್ಮ ದೇಹರಕ್ಷಣಾದಿ ಗಳಿಗೋಸುಗ ಸ್ವವಿಷಯವಾಗಿ ನಡೆದುಕೊಳ್ಳಬೇಕಾದ ಕ್ರಮಗಳು. ಮೂರನೆಯಬಗೆಯವು- ಭಗವತ್ಕುಟುಂಬದಲ್ಲಿ ನಮಗೆ ಸಹಜಾತಸಮಾನ ರಾಗಿರುವ ಮನುಜರ ವಿಷಯದಲ್ಲಿ ನಡೆದುಕೊಳ್ಳಬೇಕಾದ ಕ್ರಮಗಳು. ನಾಲ್ಕನೆಯಬಗೆಯವು-ಜೀವದಯಾಪರನಾದ ಈಶ್ವರನಿಂದ ನಿರ್ಮಿತ ಗಳಾದ ಇತರ ಜಂತುಗಳ ವಿಷಯದಲ್ಲಿ ನಾವು ನಡೆದುಕೊಳ್ಳಬೇಕಾದ ಕ್ರಮಗಳು.


ಚಂದ್ರ-ಮೊದಲು ಭಗವಂತನ ವಿಷಯದಲ್ಲಿ ನಾವು ನಡೆದುಕೊಳ್ಳ