ಪುಟ:ಚಂದ್ರಮತಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾಲ್ಕನೆಯ ಪ್ರಕರಣ, ಪುಣ್ಯಪಾಪಗಳನ್ನು ಪರಿಶೀಲಿಸಿ ನ್ಯಾಯವನ್ನು ನಿರ್ಣಯಿಸಿ ಸುಖವನ್ನುಂಟು ಮಾಡತಕ್ಕ ಆ ಮೋಕ್ಷದಾತನಿಗೆ ನಾವು ಪರಮವಿಧೇಯರಾಗಿ ನಡೆದು ಕೊಳ್ಳಬೇಕೆಂದು ಮತ್ತೊಂದು ಬಾರಿ ಹೇಳಬೇಕೆ ? ನಾವು ಯಾವಾಗಲೂ ನಿರ್ದೋಷವಾಗಿ ನಡೆದುಕೊಳ್ಳಲಾರೆವಾದುದರಿಂದ ನಮ್ಮ ಅಪರಾಧಗಳನ್ನು ಕ್ಷಮಿಸುವುದಕ್ಕೋಸುಗವೂ, ನಮಗೆ ಬೇಕಾದುವುಗಳನ್ನು ದಯಪಾಲಿಸುವ ದಕ್ಕೋಸುಗವೂ, ನಮ್ಮ ಆಪದಗಳನ್ನು ಪರಿಹರಿಸುವುದಕ್ಕೋಸುಗವೂ ಸರ್ವಶಕ್ತನಾದ ಆ ಈಶ್ವರನನ್ನು ಗೌರವಪೂರ್ವಕವಾಗಿಯೂ, ನಿಶ್ಚಲಭಕ್ತಿ ಯೊಡನೆಯೂ ಪ್ರತಿದಿನವೂ ಪ್ರಾರ್ಥಿಸುತ್ತಿರಬೇಕು. ಇದೇ ನಾವು ಭಗ ವಂತನ ವಿಷಯದಲ್ಲಿ ನಡೆದುಕೊಳ್ಳಬೇಕಾದ ಮುಖ್ಯಧರ್ಮಗಳು ಚಂದ್ರ-ಈರೀತಿಯಾಗಿ ನಾವು ಭಗವಂತನ ವಿಷಯದಲ್ಲಿ ನಡೆದು ಕೊಳ್ಳದಿರುವ ಪಕ್ಷದಲ್ಲಿ ನಮ್ಮನ್ನು ಆತನು ಶಿಕ್ಷಿಸುವನೆ ? - ಗುರು--ಭಗವಂತನು ಆತ್ಮಸ್ತುತಿಗೆ ಸಂತೋಷಪಡತಕ್ಕವನಲ್ಲ. ದೂಷಣೆಗೆ ಕೋಪಿಸತಕ್ಕವನೂ ಅಲ್ಲ ; ಆದುದರಿಂದ ನಾವು ಈ ವಿಷಯದಲ್ಲಿ ಪ್ರತ್ಯೇಕವಾದ ಶಿಕ್ಷೆಯನ್ನು ಹೊಂದದಿದ್ದರೂ, ನಮಗಿಷ್ಟು ಉಪಕಾರ ಗಳನ್ನು ಮಾಡಿರುವ ಪ್ರೇಮನಿಧಿಯ ವಿಷಯದಲ್ಲಿ ಕೃತಘ್ನರಾಗಿ ವಿಧಾಯಕ ಕೃತ್ಯಗಳನ್ನು ಬಿಟ್ಟು ಉವಕಾರಸ್ಮತಿಯಿಲ್ಲದ ಕಠಿನಾತ್ಮರಾಗುವೆವಾದು ದರಿಂದ ಸಾಮಾನ್ಯ ಜನರ ವಿಷಯದಲ್ಲಿಯೂ ಸಂಪೂರ್ಣವಾದ ದುಷವ ರ್ತನವುಳ್ಳವರಾಗುವೆವಾದುದರಿಂದ ಹಾಳಾಗುವೆವು. ಅದುಕಾರಣ ಶಿಕ್ಷೆ ಯನ್ನು ಹೊಂದುವೆವು. ಚ೦ದ್ರ-ದುಮಾರ್ಗದಲ್ಲಿ ಪ್ರವರ್ತಿಸದೆ ಸೂಕ್ತವಾದ ಮಾರ್ಗದಲ್ಲಿ ಪ್ರವರ್ತಿಸುವವರಿಗೆ ಭಗವದ್ಘಾನಾದಿಗಳಿಂದ ಪ್ರಯೋಜನವಿಲ್ಲವೆ ? - ಗುರು-ಬೇಕಾದಷ್ಟು ಪ್ರಯೋಜನವಿರುವುದು. ಈಶ್ವರಧ್ಯಾನದಿಂದ ನಮ್ಮ ಮನಸ್ಸಿಗೆ ಆನಂದವುಂಟಾಗುವುದು ಮಾತ್ರವಲ್ಲದೆ, ಸತ್ಕಾಲ್ಯಾ ಚರಣೆಯಲ್ಲಿ ಪ್ರೋತ್ಸಾಹವೂ ದುಷ್ಕಾರಗಳಲ್ಲಿ ವಿರಕ್ತಿಯೂ ಉಂಟಾಗುವುವು. ಆದುದರಿಂದ ಸಕಲವಿಧವಾದ ಶ್ರೇಯಸ್ಕೂ ನಮಗೆ ಕರಗತವಾಗುವುದು,