ಪುಟ:ಚಂದ್ರಮತಿ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಐದನೆಯ ಪ್ರಕರಣ. ೨೫ ನೀನು ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿದ್ದುದರಿಂದಲೇ ಈಗ ನಿನ್ನ ಬೆರಲಮೇಲೆ ಕಜ್ಜಿಯೆದ್ದಿರುವುದು. ಭಗವಂತನ ಆಜ್ಞಾರೂಪಗಳಾದ ಯಾವ ಧರ್ಮಗಳನ್ನು ಮಾರಿದರೂ, ಅದಕ್ಕೆ ಅನುಸಾರವಾಗಿ ತಕ್ಕ ಶಿಕ್ಷೆ ಗಳುಂಟಾಗದಿರವು. ಚಂದ್ರ-ಓದುವುದರಲ್ಲಿ ಯೇ ಆಸಕ್ತಿಯಾಗಿ ನಾನು ಇಂದಿನ ದಿನ ಗಳಲ್ಲಿ ನನ್ನ ದೇಹಸೌಖ್ಯವನ್ನು ಕುರಿತು ಅಷ್ಟು ಶ್ರದ್ಧೆಯನ್ನು ವಹಿಸಲಿಲ್ಲ. ಆದರೆ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳದಿರುವುದೂ ಧರ್ಮಾತಿಕ್ರಮಣ ವೆನಿಸಿಕೊಳ್ಳುವುದೇ ? ಗುರು-- ನಾವು ಶುಚಿಯಾಗಿರಬೇಕಾದುದೂ ನಮಗೆ ವಿಧಾಯಕವಾದ ಕೃತ್ಯವೇ ಅಹುದು, ಇದರಲ್ಲಿ ಸಂಶಯವಿಲ್ಲ. ನೆನ್ನೆಯದಿನ ನಾನು ನಿನ್ನೊ ಡನೆ ಎರಡನೆಯ ಧರ್ಮವೆಂದು ತಿಳಿಸಿದ ಸ್ವವಿಷಯಿಕವಾದ ಧರ್ಮಗಳಲ್ಲಿ ಇದೊಂದಾಗಿರುವುದು. ಓದುವುದರಲ್ಲಿ ಶ್ರದ್ಧೆಯನ್ನು ವಹಿಸುವುದು ಮುಖ್ಯವೇ ಆದರೂ, ಅದಕ್ಕೋಸುಗ ದೇಹಾರೋಗ್ಯವನ್ನು ಕೆಡಿಸಿಕೊಳ್ಳ ಬಾರದು. - ಚಂದ್ರ-ಹಾಗಾದರೆ ಸ್ವವಿಷಯದಲ್ಲಿ ಪ್ರವರ್ತಿಸಬೇಕಾದ ಧರ್ಮ ಗಳಾವುವೋ ಅವುಗಳನ್ನ ತಿಕ್ರಮಿಸುವುದರಿ೦ದ ಆವಕೇಡುಗಳುಂಟಾಗು ವುವೋ, ಅದನ್ನೆಲ್ಲ ನನ್ನಲ್ಲಿ ಅನುಗ್ರಹವಿಟ್ಟು ವಿವರಿಸಿರಿ ಗುರು- ಶರೀರಸಂರಕ್ಷಣೆಗೋಸುಗ ನಾವು ಆಚರಿಸಬೇಕಾಗಿರುವ ಕೃತ್ಯವೆಲ್ಲ ಸ್ವವಿಷಯಕವಾದ ಧರ್ಮವೇ, ಅವುಗಳನ್ನು ಮಾರಿ ನಡೆಯುವುದ ರಿಂದ ಹಲವು ಬಗೆಯ ವ್ಯಾಧಿಗಳು ಸಂಭವಿಸಿ ಬಹುಬಾಧೆಯುಂಟಾಗುವುದು. ದೇಹವು ಆರೋಗ್ಯದಶೆಯಲ್ಲಿ ರುವವರೆಗೆ ಮಾತ್ರವೇ ನಾವು ಆವ ಧರ್ಮ ಕಾರ್ಯವನ್ನಾದರೂ ಮಾಡುವುದಕ್ಕೆ ಸಮರ್ಥರಾಗಿರುವೆವು. ಅದಕ್ಕೆ ಸ್ವಲ್ಪ ವಿಘಾತವುಂಟಾಗುವ ಪಕ್ಷದಲ್ಲಿ, ಸಮಸ್ತಧರ್ಮಗಳೂ ತ್ಯಜಿಸಲ್ಪಡುವುವು. ಆದುದರಿಂದ ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಸೌಖ್ಯವನ್ನು ನೋಡಿ ಕೊಂಡು ದೇಹವನ್ನು ಕಾಪಾಡಿಕೊಳ್ಳುತ್ತಿರಬೇಕು. ದೇಹಾರೋಗ್ಯಕ್ಕೆ ಶುದ್ದ ವಾಯುವೂ, ನಿರ್ಮಲೋದಕವೂ, ಯುಕ್ತಾಹಾರವೂ, ಶುಭ್ರವಸ್ತ್ರ