ಪುಟ:ಚಂದ್ರಮತಿ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಪ್ರಕರಣ. ಮತ್ತೆ ಕೆಲದಿನಗಳು ಕಳೆದಬಳಿಕ ಚಂದ್ರಮತಿಯೊಂದುದಿನ ಪದ್ಧತಿಯ ಪ್ರಕಾರ ಓದಬೇಕಾದ ಪಾಠಗಳನ್ನೋದಿ ಲೆಕ್ಕಗಳನ್ನು ಮಾಡಿ, ಅಕ್ಷರ ಗಳು ಲಕ್ಷಣಯುಕ್ತವಾಗುವುದಕ್ಕೋಸುಗ ಗುರುವು ಬರೆದ ಮೇಲ್ಪ ಜತ್ತಿಯ ನ್ನನುಸರಿಸಿ ಬರೆಯುತ್ತಿದ್ದಳು. ಅವಳು ಬರೆಯುತ್ತಿದ್ದಾಗ ವಿದ್ಯಾಸಮು ದ್ರನು ಶಿಷ್ಯ ಯನ್ನು ಚೆನ್ನಾಗಿ ದೃಷ್ಟಿಸಿ, ಆಕೆಯ ಮುಖದಲ್ಲಿ ಸ್ವಲ್ಪ ವ್ಯತ್ಯಾಸ ವನ್ನು ಕಂಡು, ಅವಳು ಬರೆದುಮುಗಿಸುವವರೆಗೂ ಸುಮ್ಮನಿದ್ದು “ ಮಗೂ, ನಿನ್ನ ಮುಖವನ್ನು ನೋಡಿದರೆ, ನೀನೇನೋ ಬಹು ವಿಚಾರಗ್ರಸ್ತಳಾಗಿರು ವಂತೆ ತೋರುವುದು. ಇಷ್ಟೇ ಅಲ್ಲದೆ ನಿನ್ನ ಶರೀರವೂ ಮೊದಲಿನಂತೆ ಇಲ್ಲದೆ ಸ್ವಲ್ಪ ಬಡವಾಗಿರುವುದು, ಇದಕ್ಕೆ ಕಾರಣವೇನು? ” ಎಂದು ಕೇಳಿದನು. * ಚಂದ್ರ-ನೆನ್ನೆಯದಿನ ನಮ್ಮ ತಾಯಿಯೂ ನೀವು ಕೇಳಿದಂತೆಯೇ ಕೇಳಿದಳು. ಶರೀರಾರೋಗ್ಯವನ್ನು ಕುರಿತ ಧರ್ಮಗಳನ್ನು ಮೊನ್ನೆ ನೀವು ತಿಳಿಸಿದಾಗಳಿಂದಲೂ ನಾನು ಅನ್ನಪಾನಾದಿಗಳ ವಿಷಯದಲ್ಲಿಯೂ ದೇಹ ಪರಿಶುದ್ದತೆಯ ವಿಷಯದಲ್ಲಿಯೂ ಹೆಚ್ಚಾದ ಶ್ರದ್ಧೆಯನ್ನು ವಹಿಸಿರುವೆನು. ಈಗ ನನ್ನ ಕೈ ಮೇಲಿದ್ದ ಕಜ್ಜಿಯೆಲ್ಲ ಹೋಯಿತು. ಹೀಗಿದ್ದರೂ ಈಗ ನಾನು ಬಡವಾಗಿರುವುದಕ್ಕೆ ಕಾರಣವೇನೆಂಬುದನ್ನು ನಾನೂ ಕಾಣೆನು. - ಗುರು-ನೀನಾವುದಾದರೂ ಮನೋವ್ಯಾಧಿಯಿಂದ ಬಡವಾಗಿರುವೆ ಯೇನೋ? ಚಂದ್ರ-ಈಗ ನೀವು ಆಡಿದ ಮಾತಿಗೆ ಅರ್ಥವೇನೋ ನನಗೆ ತಿಳಿ ಯದು. ಹೊಟ್ಟೆ ತುಂಬುವುದಕ್ಕೆ ಸಾಕಾದಷ್ಟು ಯುಕ್ತವಾದ ಭೋಜನವಿಲ್ಲ ದಿದ್ದರೂ ಕೆಟ್ಟ ಪದಾರ್ಥಗಳನ್ನು ತಿಂದರೂ ದೇಹಕ್ಕೆ ವ್ಯಾಧಿಯುಂಟಾಗುವು ದೆಂದು ನಿಮ್ಮಿಂದಲೇ ಕೇಳಿಬಲ್ಲೆನು; ಆದರೆ ಮನಸ್ಸಿಗೆ ವ್ಯಾಧಿಯು ಏತರಿಂ ದುಂಟಾಗುವುದೋ ಅದು ಹೇಗಿರುವುದೋ ಈ ವಿಷಯವು ಮಾತ್ರ ನನಗೆ ತಿಳಿಯದಿರುವುದು. ನೀವು ಆ ವಿಷಯವನ್ನು ಕುರಿತು ಸ್ವಲ್ಪ ಮಟ್ಟಿಗೆ ತಿಳಿಸಬೇಕು.