ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಎಂಟನೆಯ ಪ್ರಕರಣ
೪೭

ಪ್ರಯತ್ನಗಳಲ್ಲಿ ಯೋಗ್ಯವಾದ ನಡೆನುಡಿಯೂ, ಪತಿಯನ್ನು ಅನುಸರಿಸುವುದೂ ಇವುಗಳೇ ಮುಖ್ಯವಲ್ಲದೆ ವಶ್ಯೌಧಗಳೆಂಬ ಕಂಡಕಂಡ ಕಸಗಳಲ್ಲ. ಈ ಕೆಟ್ಟ ಕಸಗಳಿಂದ ಮಾಡುವ ಔಷಧಗಳಿಂದ ಪತಿಗೆ ಪೂರ್ವದಲ್ಲಿದ್ದ ಪ್ರೇಮವೂ ಹೋಗುವುದಲ್ಲದೆ ಒಂದೊಂದು ವೇಳೆ ಆತನಿಗೆ ಅಪರಿಹಾರ್ಯಗಳಾದ ರೋಗಗಳೂ ಸಂಭವಿಸಬಹುದು. ಆದುದರಿಂದ ಸ್ತ್ರೀಯರು ಯಾವಾಗಲೂ ತಮ್ಮ ಪತಿಗೆ ಮರುಳುಮದ್ದುಗಳನ್ನಿಟ್ಟು ಆತನನ್ನೇ ವಶಪಡಿಸಿಕೊಳ್ಳುವುದಕ್ಕೆ ಕನಸಿನಲ್ಲಾದರೂ ಪ್ರಯತ್ನಿಸಲಾಗದು. ತವರ್ಮನೆಯವರು ಎಷ್ಟು ಧನಿಕರಾಗಿದ್ದರೂ, ಉತ್ತಮಳಾದ ಸ್ತ್ರೀಯು ಪತಿಯನ್ನು ಬಡವನೆಂದು ಅಲ್ಲಗಳೆದು ತನ್ನ ತಂದೆಯ ಮನೆಗೆ ಹೋಗಿರುವುದಕ್ಕೆ ಸಮ್ಮತಿಸಳು. ಸ್ತ್ರೀಗೆ ತವರ್ಮನೆಯಲ್ಲಿಡುವ ಪಂಚಭಕ್ಷ್ಯಗಳಿಗಿಂತ ಗಂಡನ ಮನೆಯಲ್ಲಿ ಕೊಡುವ ತಿಳಿಗಂಜಿಯೇ ಮೇಲಾದುದು. ಸ್ತ್ರೀಯು ತನ್ನ ಮನೆಯ ರಹಸ್ಯವನ್ನಾವಾಗಲೂ ಬಹಿರಂಗಗೊಳಿಸದೆ, ತನ್ನ ಪತಿಯು ಅನುರಾಗಾತಿಶಯದಿಂದ ಹೇಳಿದ ಸಂಗತಿಯನ್ನಾವುದನ್ನೂ ತನ್ನ ಆಪ್ತರೊಡನೆಯಾದರೂ ತಿಳಿಸದೆ ಬಹುರಹಸ್ಯವಾಗಿಡಬೇಕು. ಸಾವಿರವೇಕೆ? ಸಾಧ್ವಿಯಾದ ಸ್ತ್ರೀಯು ಆಲೋಚನೆಗಳನ್ನು ಹೇಳುವಾಗ ಮಂತ್ರಿಯಂತೆಯೂ ಉಪಚರಿಸುವಾಗ ದಾಸಿಯಂತೆಯೂ ಕಷ್ಟಕಾಲಗಳಲ್ಲಿ ಮಿತ್ರನಂತೆಯೂ ಇದ್ದು, ಪತಿಗೆ ಹಿತವಾಗುವಂತೆ ಸಮಸ್ತ ವಿಷಯಗಳಲ್ಲಿಯೂ ಪ್ರವರ್ತಿಸುತ್ತೆ, ಆತನ ವಿಷಯದಲ್ಲಿ ಪ್ರೇಮವೂ ಭಕ್ತಿಯೂ ಉಳ್ಳವಳಾಗಿ ಕುಸುಮದಲ್ಲಿರುವ ಕೇಸರದಂತೆ ಆತನನ್ನು ಬಿಟ್ಟಗಲದಿರಬೇಕು. ಈಗ ತಿಳಿಸಿದ ಸದ್ಗುಣಗಳನ್ನೆಲ್ಲಹೊಂದಿ ಪರಪುರುಷನನ್ನು ಕನಸಿನಲ್ಲಾದರೂ ಸ್ಮರಿಸದೆ ಇರುವಂತಹ ಸ್ತ್ರೀಯೇ ಪತಿವ್ರತೆಯೆನಿಸುವಳು. “ಸಾವಿರ ಚಿತ್ತರವನ್ನೊಂದುಮಸಿ ಮುಟ್ಟಿತು” ಎಂಬಂತೆ ಪುಣ್ಯ ಕಾರ್ಯಗಳನ್ನೆಲ್ಲಾ ಜಾರತ್ವವೊಂದೇ ಕೆಡಿಸಿ ಪಾಪಹೇತುವಾಗುವುದು. ಸ್ತ್ರೀಯರಿಗೆ ವ್ಯಭಿಚಾರಕ್ಕಿಂತ ಪ್ರಬಲವಾದ ದೋಷವು ಮತ್ತೊಂದಿಲ್ಲ. ಆದುದರಿಂದ ಪರಪುರುಷರು ಎಷ್ಟು ಸುಂದರರಾಗಿದ್ದರೂ ಅವರನ್ನು ತೃಣವನ್ನಾಗಿ ಭಾವಿಸಿ ಅವರಮೇಲೆ ಬೀಸುವ ಗಾಳಿಯಾದರೂ ತಮ್ಮಮೇಲೆ ಸೋಕದಂತೆ ಪ್ರವರ್ತಿಸಬೇಕು. ವ್ಯಭಿಚಾರ ಮಾಡುವುದ ರಿಂದ ಪರಲೋಕಹಾನಿಯುಂಟಾಗುವುದು ಮಾತ್ರವೇ ಅಲ್ಲದೆ ಜನರ ಆಡಿ