ಪುಟ:ಚಂದ್ರಮತಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹದಿಮೂರನೆಯ ಪ್ರಕರಣ. ೬೭ ಕೇಳುತ್ತೆ ಸುಮ್ಮನಿದ್ದನು. ಆಗ ಚಂದ್ರಮತಿಯು ಪತಿಗೆ ಧೈರ್ಯವನ್ನು ಹೇಳುತ್ತೆ ಮೃದುವಚನಗಳಿಂದ ಇಂತೆಂದಳು : ಚಂದ್ರ-ಎಲೈ, ಪ್ರಾಣವಲ್ಲಭನೇ ! ನಿಮ್ಮ ಧನನಾದ ನಾನು ಬದು ಕಿರುವಾಗ ನೀವು ಋಣವನ್ನು ತೀರಿಸಲಾರದೆ ಹೀಗೆ ಚಿಂತಿಸುವುದೇಕೆ ? ನನ್ನನ್ನು ಆರಿಗಾದರೂ ವಿಕ್ರಯಿಸಿ ಬಂದ ಹಣದಿಂದ ಋಣವಿಮುಕ್ತರಾಗಿ ಸತ್ಯವನ್ನುಳಿಸಿ ಶಾಶ್ವತವಾದ ಕೀರ್ತಿಯನ್ನು ಹೊಂದಿರಿ. ಹರಿಶ್ಚದ್ರ-ಎಲೆ ಮನೋವಲ್ಲಭೇ ! ಇಂತಹ ಶಲ್ಯನನವಾದ ಮಾತನ್ನು ನನ್ನ ಕಿವಿಗೆ ಸೋಕಿಸಿ ಸಂಕಟಗೊಳಿಸುವುದು ನಿನಗೆ ಧರ್ಮವೇ? ಎಷ್ಟು ಕ್ರೂರಾತ್ಮನಾದರೂ ಸಮಸ್ತ ಕಷ್ಟಗಳನ್ನೂ ಸೈರಿಸಿ ಪತ್ನಿಯನ್ನು ಸಂರ ಕ್ಷಿಸುವುದಕ್ಕೆ ಪ್ರತಿಯಾಗಿ, ಸ್ವಪ್ರಯೋಜನವನ್ನು ಗಮನಿಸಿ ಧರ್ಮಪತ್ನಿ ಯನ್ನು ಮಾರಿಕೊಳ್ಳಲೆಳಸುವನೇ ? ಸಾಲವನ್ನು ಪರಿಹರಿಸಿಕೊಳ್ಳುವುದಕ್ಕೆ ತಕ್ಕ ಉವಾಯವಾವುದೂ ತೋರದೆ ಸಂಕಟಪಡುತ್ತಿದ್ದ ನನ್ನ ಮನಸ್ಸನ್ನು ನೀನು ಮತ್ತಷ್ಟು ನೋಯಿಸುವೆಯಲ್ಲ! ಚಂದ್ರ-ಪ್ರಾಣಕಾಂತನೇ ! ನಿಮ್ಮ ಪಾದದಾಣೆ ! ನನ್ನ ಮಾತಿಗೆ ನೀವು ಪ್ರತಿಯಾಡದೆ ನಡೆಯಿಸಬೇಕು. ಸಮಯವೊದವಿದಾಗ ಪತಿಗೆ ನಾಹಾಯ ವನ್ನು ಮಾಡದ ಪತ್ನಿಯು ಇದ್ದರೇನು ? ಸತ್ತರೇನು ? ನೀವು ಹೇಳದಿದ್ದರೂ ನಾನೇ ಮನಃಪೂರ್ವಕವಾಗಿ ದಾಸಿಯಂತೆ ವಿಕ್ರಯಿಸಲ್ಪಟ್ಟು ಬಂದ ಹಣ ದಿಂದ ನಿಮ್ಮ ಸಾಲವನ್ನು ತೀರಿಸಬೇಕೆಂದಿರುವೆನಾದುದರಿಂದ ನೀವು ಸ್ವಲ್ಪವೂ ಸಂಕೋಚ ಪಡಬೇಕಾದುದಿಲ್ಲ. ಸಾಧನಗಳಾವುವೂ ಇಲ್ಲದಿರುವಾಗ ನಿಮಗೆ ಅಸತ್ಯದೋಷವನ್ನು ಉಂಟುಮಾಡಿಸಿ ಸುಖಪಡುವುದಕ್ಕಿಂತ ದಾಸಿ ಯಾಗಿದ್ದಾದರೂ ನಿಮ್ಮ ಸತ್ಯವನ್ನುಳಿಸುವುದೇ ನನಗೆ ಪರಮಸಮ್ಮತವು. ಹೀಗೆ ಚಂದ್ರಮತಿಯು ಪಲತೆರನಾಗಿ ಒತ್ತಿ ಹೇಳಲು ಹರಿಶ್ಚಂದ್ರನು ಕಟ್ಟ ಕಡೆಗೆ ಹೆಂಡತಿಯ ನಿರ್ಬಂಧವನ್ನು ಸಮ್ಮತಿಸಿ, ಅವಳನ್ನು ಆರಿಗಾದರೂ ದಾಸಿಯನ್ನಾಗಿ ಮಾರುವುದಕ್ಕೊಪ್ಪಿಕೊಂಡು “ ನಿಮಗೆ ದಾಸಿಬೇಕೇ ? ದಾಸಿ ? ” ಎಂದು ಕಾಶೀಪಟ್ಟಣದ ಕೇರಿಕೇರಿಗಳಲ್ಲಿಯೂ ಸಾರತೊಡಗಿ ದನು. ಕೆಲವರು ನಮಗೆ ಬೇಡವೆಂದೂ, ಕೆಲವರು ಅಷ್ಟು ಹಣವನ್ನು ಕೊಡ ಲಾರೆವೆಂದೂ, ಹೇಳಿ ಒಬ್ಬರಾದರೂ ಕೊಳ್ಳದಿದ್ದರು. ಹೀಗೆ ಹಲವರನ್ನು