ಪುಟ:ಚಂದ್ರಮತಿ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚ೦ದ್ರಮತಿ, = = == Ltd. 44 - ಕೇಳಿ ಬೇಸತ್ತು ಹಿಂತಿರುಗಿರಲು ಕಾಲಕೌಶಿಕನೆಂಬ ಬ್ರಾಹ್ಮಣನೊಬ್ಬನು ಇದಿರಾಗಿ ಬಂದನು. ಆತನಾ ಪಟ್ಟಣದ ಪುರೋಹಿತನು; ಲುಬ್ಬಾಗ್ರೇಸರ ಚಕ್ರವರ್ತಿ ; ಹೆಚ್ಚು ಬಡ್ಡಿಗೆ ಹಣವನ್ನು ಕೊಟ್ಟು ನಿಷ್ಕರುಣನಾಗಿ ಮನೆ ಬಾಗಿಲುಗಳನ್ನು ಮಾರಿಸಿ ಹಣವನ್ನು ತೆಗೆದುಕೊಳ್ಳುತ್ತಿದ್ದನು. ಆತನಿಗೆ ಕಲಹಕಂಟಕಿಯೆಂಬ ಭಾರ್ಯೆಯಿದ್ದಳು ; ಲೋಕದಲ್ಲಿರುವ ಸ್ತ್ರೀಯ ರಲ್ಲೆಲ್ಲಿಯೂ ಇಂತಹ ಗಯ್ಯಾಳಿಯು ಹುಟ್ಟಿಯೂ ಇಲ್ಲ, ಹುಟ್ಟುವುದೂ ಅಸಂಭವ. ಕೆಲಸಕಾರ್ಯಗಳಿಲ್ಲದೆ ಮನೆಯಲ್ಲಿ ತಿಂದು ಕುಳಿತು ಗಂಡನನ್ನು ಬಯ್ಯುತ್ತಿದ್ದಳು. ಆತನು ಯಾವ ದಾಸಿಯನ್ನು ಕರೆತಂದರೂ ಅವಳವರನ್ನು ನಿಮಿಷದಲ್ಲಿ ಹೋರಾಡಿ ಓಡಿಸಿಬಿಡುತ್ತಿದ್ದಳಾದುದರಿಂದ ಹೆಂಡತಿಗೆ ಗಂಡನೇ ನಿಕೃಷ್ಟ ಪರಿಚಾರಕನಾಗಿದ್ದನು. ಈಗ ಹರಿಶ್ಚಂದ್ರನು ಹೆಂಡತಿಯನ್ನು ಮಾರುವೆನೆಂದು ಸಾರಲು ಕಾಲಕೌಶಿಕನು ಸಂತೋಷಿಸಿ ಹಣವನ್ನು ಕೊಟ್ಟು ಕೊಂಡಬಳಿಕ ಅವಳು ತನ್ನ ಹೆಂಡತಿಯ ಹಿಂಸೆಯನ್ನೆಲ್ಲ ಸೈರಿಸಿಕೊಂಡು ಕೆಲಸಕಾರ್ಯಗಳನ್ನು ಮಾಡುವಳೆಂದು ನಿಶ್ಚಯಿಸಿ, ಹರಿಶ್ಚಂದ್ರನು ಕೇಳಿ ದಷ್ಟು ಹಣವನ್ನು ಕೊಟ್ಟು ಚಂದ್ರಮತಿಯನ್ನು ದಾಸಿಯನ್ನಾಗಿ ಕೊಂಡನು. ಹಣವನ್ನು ಕೊಟ್ಟ ಬಳಿಕ ಆ ಬ್ರಾಹ್ಮಣನು ಚಂದ್ರಮತಿಯನ್ನು ಕರೆದು ಕೊಂಡು ಹೋಗಲೆಳಸಲು ಹರಿಶ್ಚಂದ್ರನಾಕೆಯನ್ನು ನೋಡಿ ಕಣ್ಣೀರು ತುಂಬಿದನು. ಆ ಬ್ರಾಹ್ಮಣನು ತಾನು ತಿರುಪೆಯೆತ್ತಿ ತಂದಿದ್ದ ಮೂಟೆ ಗಳನ್ನು ಚಂದ್ರಮತಿಯಿಂದ ಹೊರಿಸಿಕೊಂಡು ತನ್ನ ಮನೆಗೆ ಹೋದನು. ಚಂದ್ರಮತಿಯೂ ಗಂಡನನ್ನಗಲಿ ಹೋಗಬೇಕಾಯಿತಲ್ಲಾ ! ಎಂದು ಕಣ್ಣೀ ರ್ಮಳೆಯನ್ನು ಕರೆಯುತ್ತೆ, ಪತಿಯನ್ನು ಸತ್ಯಸಂಧನನ್ನಾಗಿಯೇ ಇಟ್ಟಿರ ಬೇಕೆಂದೂ, ಜಾಗ್ರತೆಯಾಗಿಯೇ ತನಗೆ ಮತ್ತೆ ಪತಿಪಾದಸೇವಾಭಾಗ್ಯವು ಲಭಿಸುವಂತೆ ಮಾಡಬೇಕೆಂದೂ, ಪರಮೇಶ್ವರನನ್ನು ಕುರಿತು ಪ್ರಾರ್ಥಿ ಸುತ್ತೆ ಆ ಬ್ರಾಹ್ಮಣನ ಹಿಂದೆ ಹೊರಟು ಹೋದಳು. ಪರಸ್ಪರ ಅಗಲಿದು ದರಿಂದ ಆ ದಂಪತಿಗಳಿಗೀರ್ವರಿಗೂ ಅಂದಿನಿಂದ ನಿಶ್ಚಯವಾದ ದುಃಖವು ಮೊದಲಾಯಿತು. ಹೀಗೆ ಹೆಂಡತಿಯನ್ನು ಮಾರಿ ಸಂಪಾದಿಸಿದ ಹಣವನ್ನು ಕೈಯಲ್ಲಿ ಟ್ರೊಡನೆಯೇ ನಕ್ಷತ್ರಕನು ಆ ಹಣವೆಲ್ಲ ತನ್ನ ಕೂಲಿಗೂ ಸಾಲದಲ್ಲಿ