ಪುಟ:ಚಂದ್ರಮತಿ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Checked 1965 ಚ೦ದ್ರ ಮ ತಿ . Checkad 1969 ಸದನ ಪ್ರಕರಣ. ಪೂರ್ವಕಾಲದಲ್ಲಿ ಚೇದಿದೇಶಕ್ಕೆ ಪ್ರತಿಷ್ಠಾನವೆಂಬ ನಗರವು ರಾಜ ಧಾನಿಯಾಗಿತ್ತು ಅದನ್ನು ಉಶೀನರನೆಂಬ ರಾಜನು ನವಾಲಿಸುತ್ತಿದನು. ಈತನಿಗೆ ಸುನಂದೆಯೆಂಬ ನಾರೀಮಣಿಯು ನಯಾ -ು. ಈ ದಂಪತಿ ಗಳಗ ಬಹುಕಾಲ ಮಕ್ಕಳೇ ಇಲ್ಲದೆ ಕಡೆಗೆ ಒಂದು ಹೆಣ್ಣು ಮಗುವು ಹುಟ್ಟಿತು. ಉತೀನರನು ಆ ಮಗುವಿಗೆ ಚಂದ್ರಮತಿಯಂದು ನಾನುಕರಣ ಮಾಡಿ, ಲೋಕೈಕನುಂದರಿಯಾಗಿ ಆ ಮಗುವನ್ನು ಬಹು ಪ್ರೀತಿಯಿಂದ ಪೋಷಿಸುತ್ತಿದನು. ಆ ಮಗುವಿನ ಕಾಲಾದರೂ ನೆಲಕ್ಕೆ ಸೋಕದಂತೆ ಮಾತಾಪಿತೃಗಳಿಬ್ಬರೂ ತಮ್ಮ ತೊಡೆಯಮೇಲೆಯೇ ನಿರಂತರವೂ ಅದನ್ನೆ ಕೊಂಡು ಸಾಕುತ್ತೆ, ತಮ್ಮಮುಂದೆ ಮೆಲ್ಲ ಮೆಲ್ಲನೆ ದಟ್ಟ ಡಿಗಳನ್ನಿಟ್ಟು ನಡೆ ವಾಡುವ ಮಗುವನ್ನು ಮನದಣಿಯೆ ನೋಡಿ ನೇತ್ರೋತ್ಸವವನ್ನು ಹೊಂದಿ ಪರಮಾನಂದಭರಿತರಾಗುತ್ತಿದ್ದರು. ಅವಳ ಅಸ್ಪಷ್ಟವಾದ ಮುದ್ದುಮಾತು ದರೋ ತಾಯ್ತಂದೆಗಳ ಕಿವಿಗಳಿಗೆ ಸುಶ್ರಾವ್ಯವಾದ ಸಂಗೀತನಾದ ಕ್ಕಿಂತ ಇ೦ಪಾಗಿದ್ದಿತು. ರೂಪದಲ್ಲಿ ರಂಭೆಗಿ೦ತ ಸು೦ದರಿಯರಾದ ಸ್ತ್ರೀ ಯರೂ ಆ ಚ೦ದ್ರಮತಿಯ ಸೊಬಗನ್ನು ಕಂಡು ತಲೆಬಾಗಿಸುತ್ತಿದ್ದರು. ಸುನಂದೆಯು ತಾನು ವಿದ್ಯಾವತಿಯಾಗಿದ್ದು ದರಿಂದ, ವಿದ್ಯೆಯಿಂದುಂಟಾ