ಪುಟ:ಚಂದ್ರಮತಿ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹದಿನೈದನೆಯ ಪ್ರಕರಣ. ೭ mar songs ಬೆಂಗಾವಲನ್ನಾಗಿ ಕೊಟ್ಟು ವಿಶ್ವಾಮಿತ್ರನೊಡನೆ ಅವರನ್ನು ಅಯೋಧ್ಯಾ ಪುರಕ್ಕೆ ಕಳುಹಿಸಿದನು. ನಾಲ್ಕಾರುದಿನಗಳು ಪ್ರಯಾಣಮಾಡಿ ಅವರೆಲ್ಲರೂ ಅಯೋಧ್ಯಾ ಪುರವನ್ನು ಸುಖವಾಗಿ ಸೇರಿದರು. ಚಂದ್ರಮತಿ ಹರಿಶ್ಚಂದ್ರರು ಬರುತ್ತಿರುವರೆಂಬ ಮಾತನ್ನು ಪೌರರೆಲ್ಲರೂ ಮೊದಲೇ ಕೇಳಿ, ಮೃತರಾದ ತಮ್ಮ ಮುಖ್ಯ ಬಂಧುಗಳು ಮತ್ತೆ ಬದುಕಿಬಂದ೦ತೆಣಿಸಿ ಸಂತೋಷಿಸುತ್ತೆ ಪಟ್ಟಣವನ್ನೆಲ್ಲ ಅಲಂಕರಿಸಿದರು ; ಮಂತ್ರಿಗಳು ಮೊದಲಾದವರೆಲ್ಲರೂ ಪರಮಸಂತೋಷದಿಂದ ಇದಿರ್ಗೊ೦ಡರು. ವಿಶ್ವಾಮಿತ್ರನು ಆ ರಾಜದಂಪತಿ ಗಳನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿ, ಅಲಂಕೃತವಾಗಿದ್ದಾ ಅರ ಮನೆಯಲ್ಲಿ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು, ಸಮಸ್ತ ಮಂತ್ರಿ ಬಾಂಧವನಿಯೋಗಿಜನಗಳಿದಿರಾಗಿ ಹರಿಶ್ಚಂದ್ರನನ್ನು ಮತ್ತೆ ಸಕಲರಾಜ್ಯಕ್ಕೂ ಪಟ್ಟಾಭಿಷಿಕ್ತನನ್ನಾಗಿ ಮಾಡಿದನು. ಈ ಮಹೋತ್ಸವವನ್ನು ಕೇಳಿ ವಸಿಷ್ಠನೂ ಅಲ್ಲಿಗೆ ಬಂದಿದ್ದನು. ವಿಶ್ವಾ– ನಿನ್ನ ಸತ್ಯಶೀಲತೆಯನ್ನು ಪರೀಕ್ಷಿಸಲೋಸುಗ ನಿನ್ನನ್ನೂ, ನಿನ್ನ ಹೆಂಡತಿಯನ್ನೂ ನಾನು ಅನೇಕ ಕಷ್ಟಗಳಿಗೆ ಗುರಿಮಾಡಿದೆನು. ನಿಮ್ಮ ವಿಷಯದಲ್ಲಿ ನಾನು ಮಾಡಿರುವ ಅಪರಾಧಗಳನ್ನೆಲ್ಲ ಮರೆತುಹೋಗಿ ನೀವೀರ್ವರೂ ನನ್ನನ್ನು ಕ್ಷಮಿಸಬೇಕು. ಹರಿ-ನೀವು ನನಗೆ ಮಹೋಪಕಾರವನ್ನೇ ಮಾಡಿರುವಿರಿ. ನಿಮ್ಮಿಂದ ಲೇ ನನಗೆ ಈ ಲೋಕದಲ್ಲಿ ಸತ್ಯಸಂಧನೆಂಬ ಖ್ಯಾತಿಯುಂಟಾಯಿತು. ನೀವು ಮಾಡಿರುವೀ ಉಪಕಾರವನ್ನು ನಾನೆಂದಿಗೂ ಮರೆಯೆನು. ನನಗೆ ಬಾಧೆ ಯನ್ನುಂಟುಮಾಡಿದೆನೆಂದು ನೀವು ಮನಸ್ಸಿನಲ್ಲಿ ಸ್ವಲ್ಪವಾದರೂ ಕಿ೦ಕೃತಿ ಯನ್ನು ಹೊಂದಲಾಗದು. ಎಂದು ಈ ರೀತಿಯಾಗಿ ಈರ್ವರಿಗೂ ಸ್ವಲ್ಪ ಕಾಲ ಉಚಿತಪ್ರಶೋತ್ತರ ಗಳು ನಡೆದ ಬಳಿಕ ವಿಶ್ವಾಮಿತ್ರನು ಮನಸ್ಸಿನಲ್ಲಿ ಸಂಕೋಚವನ್ನುಳಿದು ಸಂತೋಷದಿಂದ ಸಮಸ್ತರ ಇದಿರಾಗಿ, ತನ್ನ ತಪಸ್ಸಿನಲ್ಲಿ ಅರ್ಧ ಭಾಗವನ್ನು ವಸಿಷ್ಠನಿಗೆ ಧಾರೆಯೆರದುಕೊಟ್ಟು ಶಿಷ್ಯರೊಡನೆ ತನ್ನ ಆಶ್ರಮಕ್ಕೆ ಹೊರಟು ಹೋದನು. ತನ್ನ ಮಾತು ಅಸತ್ಯವಾಗದೆ ಗೆದ್ದುದಕ್ಕೋಸುಗ ವಸಿಷ್ಠನು ಪರಮಾನಂದಭರಿತನಾಗಿ ತನ್ನ ತಪೋವನಕ್ಕೆ ಹೊರಟುಹೋದನು. ಹರಿ ಶೃಂದ್ರನು ತನ್ನ ಪ್ರಜೆಗಳೆಲ್ಲರೂ ಅತ್ಯಾನಂದದಿಂದಿರಲು ಬಹುಕಾಲ ರಾಜ್ಯ