ಪುಟ:ಚಂದ್ರಶೇಖರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಪರಿಚ್ಛೇದ. ರಾಮಚರಣನ ಬಿಡುಗಡೆ. - - - ಪನು ಓಡಿಹೋದಮೇಲೆ ರಾಮಚರಣನ ಬಿಡುಗಡೆಯು ಸುಲಭದಲ್ಲಿ ಆಯಿತು, ರಾಮಕರಣನ ಜಂಗಿ ಪರ ಹಡಗಿನಲ್ಲಿ ಕೈದಿಯಾಗಿ ರಲಿಲ್ಲ. ಅವನ ಬಂದೂಕಿನ ಪೆಟ್ಟಿನಿಂದ ಭಾಸ್ಕರನು ಆಧುತನಾ ದನೆಂದೂ ಯಾರಿಗೂ ಗೊತ್ತಿರಲಿಲ್ಲ. ಅವನು ಸಾಮಾನ್ಯವೃತ್ಯ ನೆಂದು ಅವಿಯಟನು ಅವನನ್ನು ಮಾಂಗೀರನಿಂದ ಹೊರಟಾಗಲೆ ಬಿಟ್ಟುಬಿಟ್ಟನು. ಅವನನ್ನು ಹೋಗೆಂದು ಹೇಳಿದಾಗ ಅಮಿರಟನು, ನಿನ್ನ ಯಜಮಾ ನನು ಬಹಳ ಬದಜಾತನು. ಅವನಿಗೆ ಸಜಾ ಕೊಡುವೆವು. ಆದರೆ ನೀನೇನೂ ಇರ ಬೇಕಾದ ಅವಶ್ಯಕವಿಲ್ಲ. ನಿನಗೆ ಇಸ್ಮಬಂದಕಡೆ ಹೋಗಬಹುದೆಂದು ಹೇಳಿದ್ದನು. ಕೇಳ ರಾಮಚರಣನು ಕೈಮುಗಿದುಕೊಂಡು, ನಾನು ಗದ್ದೆಯನ್ನು ಗೇಯುವ ರೈತ. ಮಾತು ಗೊತ್ತಿಲ್ಲ, ಕೊಪವಾಡಕೂಡದು , ನನಗೂ ತಮಗೂ ಸಂಬಂಧವೇನಾ ದರೂ ಉಂಟೋ ? ಎಂದನು. ಆವಿಯಟನಿಗೆ ಇದನ್ನು ತರ್ಜುಮೆ ಮಾಡಿ ತಿಳಿಸಲಾಗಿ ಅವನ, ಏತಕ್ಕೆಂದು ಕೇಳಿದನು, ರಾಮಚರಣ-ಹಾಗಿಲ್ಲದಿದ್ದರೆ ನನ್ನೊಡನೆ ಹಾಸ್ಯಮಾಡೋವೇತಕ್ಕೆ ? ಅಮಿದುಟಿ – ಹಾಸ್ಯವೇನು ? ರಾಮಚರಣ-ನನ್ನ ಕಾಲನ್ನು ಮುರಿದುಹಾಕಿ, ಬೇಕಾದ ಕಡೆ ಹೋಗೆಂದು ಹೇಳು ವುದರಿಂದ ನಿಮ್ಮ ಮನೆಯಲ್ಲಿ ನನಗೆ ಹೆಣ್ಣು ಕೊಟ್ಟಿರುವ ಹಾಗೆ ಕಾಣುತ್ತದೆ. ನಾನು ಗಇಳಿಗರವನು, ಇಂಗ್ಲೀಷರವನ ತಂಗಿಯನ್ನು ಮದುವೆಮಾಡಿಕೊಂಡರೆ ನನ್ನ ಜಾತಿ ಉಳಿಯುವುದಿಲ್ಲ. - ದ್ವಿಭಾಷಿಯು ಈ ಮಾತನ್ನು ಅವಿದುಗೆ ತರ್ಜುಮೆ ಮಾಡಿ ಹೇಳಿದನು, ಆದ ರೂ ಏನೊಂದೂ ಗೊತ್ತಾಗಲಿಲ್ಲ. ಅಮಿಯುಟನು ಮನಸ್ಸಿನಲ್ಲಿ, ನೇಟ5 ಜನರು ಖುಷಾ ವತಿ ಮಾಡುವುದಕ್ಕೋಸ್ಕರ, ತಾಯಿ, ತಂದೆ, ಅಣ್ಣ, ಎಂದು ಮುಂತಾಗಿ ಇಂಗ್ಲೀಷರ ಸಂಬಂಧವನ್ನು ಕಲ್ಪಿಸಿಕೊಂಡು ಮಾತನಾಡುವಹಾಗೆ ಮಾಡುವುದಕ್ಕೋಸ್ಕರ ತನ್ನ ಸಂಗಡ ಸಂಬಂಧವನ್ನು ಕಲ್ಪಿಸಿಕೊಂಡು ಮಾತನಾಡುತ್ತಾ ನೆಂದು ತಿಳಿದುಕೊಂಡು, ಅವನಮೇಲೆ ಕೋಪಮಾಡದೆ, ನಿನಗೆ ಬೇಕಾದುದೇನೆಂದು ಕೇಳಿದನು.