ಪುಟ:ಚಂದ್ರಶೇಖರ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಂಟನೆಯ ಪರಿಚ್ಛೇದ. ಪರ್ವತದ ಮೇಲೆ. ಈ ದಿನ ರಾತ್ರಿ ಆಕಾಶದಲ್ಲಿ ಚಂದ್ರನು ಹುಟ್ಟಿರಲಿಲ್ಲ. ಮೇಘವು ಬಂದು ಚಂದ).ನಕ್ಷತ್ರ.ನೀಹಾರ,ನೀಲಿಮಾ ಮುಂತಾಗಿ ಎಲ್ಲವನ್ನೂ ಮುಚ್ಚಿ ಕೊಂಡಿತ್ತು. ಮೇಘವು ಆದ ಶೂನ್ಯವಾಗಿ ಅನಂತವಾಗಿ ವಿಸ್ತ ರಿಸಿ ಜಂಪೂರ್ಣತೆಯಿಂದ ಧೂಮವರ್ಣವುಳ್ಳದಾಗಿತ್ತು;- ಅದರ ತಲದಲ್ಲಿ ಅನಂತವದ ಅಂಧಕಾರವು ಉಪಕೂಲ, ಉಪಕಲದ ಲ್ಲಿದ್ದ ಪರ್ವತವೂಲೆಗಳು ಇವೆಲ್ಲವನ್ನೂ ಮುಚ್ಚಿಕೊಂಡಿತ್ತು. ಆ ಅಂಧಕಾರದಲ್ಲಿ ಶೈವ ಲಿನಿಯ ಗಿರಿದು ಉಪತ್ರಕೆಯಲ್ಲಿ ಒಬ್ಬಳೇ ಒಬ್ಬಳಾಗಿದ್ದಳು. - ಹಿಂದಿನ ರಾತಿ, ಹಿಂದಟ್ಟಿ ಬಂದ ಇಗ್ಲಿಷರ ಅನುಚರರ ಕೈಗೆ ಸಿಕ್ಕದೆ ವೇಗವಾಗಿ ಎಂದ ಹಡಗು ಬಹಳ ದೂರದಲ್ಲಿ ನದಿಯ ತೀರದಲ್ಲಿ ಕಟ್ಟಲ್ಪಟ್ಟಿತು, ಮಹಾನದಿಗಳ ತೀರದಲ್ಲಿ ನಿವೃತವಾದ ಸ್ಥಳಗಳಿಗೆ ಕಡಮೆ ಇಲ್ಲ. ಹಡಗು ಅಂತಹ ಒಂದು ಸ್ಥಳದಲ್ಲಿ ಕಟ್ಟಲ್ಪಟ್ಟಿತ್ತು. ಆ ಸಮಯದಲ್ಲಿ ಕೈವಲಿನಿಯು ದಾರಿಗೂ ಕಾಣಿಸಿಕೊಳ್ಳದೆ ಹಡಗಿನಿಂ ದಿಳಿದು ಪಲಾಯನವಾದಳು, ಈತಡವೆ ರೈವಲಿನಿಯು ಯಾವ ಕಟ್ಟಅಭಿಪ್ರಾಯದಿಂ ದಲೂ ಓಡಿಹೋಗಲಿಲ್ಲ. ಕಾಡಕಿಚ್ಚು ಬಿದ್ದು ಉರಿಯುವ ಅರಣ್ಯದಿಂದ ಅರಸರು ಗಳು ಯಾವಭಯದಿಂದ ಓಡಿಹೋಗುವುವ, ಶೈವಲಿನಿಯೂ ಅಂತಹ ಭಯದಿಂದ ಪ ತಾ ಪನ ಸಂಸರ್ಗವನ್ನು ಬಿಟ್ಟು ಓಡಿಹೋದಳು. ಪ್ರಾಣಭಯದಿಂದ ಶೈವಲಿನಿಯು ಸುಖ ಸಂದರ್ದುಪ್ರಣಯಾದಿಗಳಿಂದ ಪರಿಪೂರ್ಣವಾದ ಸಂಸಾರದಿಂದ ಓಡಿಹೋದಳು. ಸುಖ, ಸೌಂದರ, ಪ್ರಣಯ, ಪ್ರತಾಪ, ಈ ಎಲ್ಲವುಗಳಲ್ಲಿಯೂ ಶೈವಲಿನಿಗೆ ಇನ್ನು ಅಧಿ ಕಾರವಿಲ್ಲ.-ಆಕೆಯಿಲ್ಲ - ಆಕಾಂಕ್ಷೆಯ ಪರಿಹಾರ-ಹತ್ತಿರದಲ್ಲಿದ್ದರೆ ಆಕಾಂಕ್ಷೆಯನ್ನು ಯಾರುತಾನೇ ಪರಿಹಾರಮಾಡಬಲ್ಲರು ? ಮರುಭೂಮಿಯಲ್ಲಿದ್ದರೆ ತೃತನಾದ ಪಥಿ ಕನು ಸುಶೀತಲವಾದ ಸೃಚ್ಛವಾದ ಸುವಾಸಿತವಾದ ವಾರಿಯನ್ನು ನೋಡಿ ನಾನಮಾಡದೆ ಇರಬಲ್ಲನೆ ? ವಿಕ್ಟರ್‌ಹೂಗೊ ಎಂಬ ಕವಿಯು ಬಸವುದ) ತಲವಾಸಿಯಾದ ರಾಕ್ಷಸ ಸ್ವಭಾವವನ್ನುಳ್ಳ ಭಯಂಕರನಾದವನನ್ನು ವರ್ಣನೆ ಮಾಡಿರುವುದರಲ್ಲಿ, ಲೋಭ ಅಥವಾ ಆಕಾಂಕ್ಷೆಯು ಅವನಿಗೆ ಸ್ವಭಾವಸಿದ್ಧವಾದುದೆಂದು ಹೇಳಿರುವಹಾಗೆ ತೋರುತ್ತದೆ. ಅವನು ಅತಿ ಸೂಕ್ಷ್ಮವಾದ ಸ್ಪಟಿಕದಹಾಗಿದ್ದ ಜಲಮಧ್ಯದಲ್ಲಿ ವಾಸ ಮಾಡುತಲಿದ್ದನು. ಅವನ ವಾಸಗೃಹದಲ್ಲಿ ಮೃದುಳವಾದ ಮನೋಹರವಾದ ಗೈರಕಾದಿಗಳು ಜೈಲಿಸುತಲಿದ್ದವು. ಅವನ ಗೃಹದಲ್ಲಿ ಮಹಾಮೂಲ್ಯವುಳೆ ಮುಕ್ತಾದಿ ನವರತ್ನಗಳು ಶೋಭಿಸುತಲಿದ್ದವು. 13