ಪುಟ:ಚಂದ್ರಶೇಖರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಭಾಗ. ಪ್ರಾಯ. ಮೊದಲನೆಯ ಪರಿಚ್ಛೇದ. ಯಾದಗಿರಿ ಪ್ರತಾಪನು ಏನು ಮಾಡಿದನು ? ತಾಸನು ಒಬ್ಬ ಜಾನದಾರನಾಗಿಯ ಪ್ರತಾಪಶಾಲಿಯಾದ ದಸ್ತುವಾಗಿಯೂ ಇದ್ದನು. ನಾವು ಯಾವ ಕಾಲದ ಕಥೆ ಯನ್ನು ಹೇಳುವೆವೋ ಆ ಕಾಲದಲ್ಲಿ ಅನೇಕ ಜಮಾನುದಾ ರರು ದುಗಳಾಗಿದ್ದರು. ಡಾರ್ವಿ೯ ಎಂಬ ಇಂಗ್ಲಿ ದಾರ್ಶನಿಕ ಪಂಡಿತನೊಬ್ಬನು, ಮಾನವಜಾತಿಯು ವಾನರ ಗಳ ಸನತ್ರರೆಂದು ಹೇಳಿದ್ದಾನೆ. ಈ ಮಾತಿಗೆ ಯಾರೂ ಕೋಪಗೊಳ್ಳದವರಾದರೆ ಯಾವ ಜಮಾನದಾರರೂ ನಮ್ಮ ಮೇಲೆ ಕೋಪಮಾಡಲಾಗದು, ವಾಸ್ತವವಾಗಿ ದಸ್ಸುವಂಶದಲ್ಲಿ ಜನ್ಮ ಹಣ ಮಾಡು ವುದು ಅಗೌರವವೆಂದು ಬೋಧೆಯಾಗುವುದಿಲ್ಲ. ಏತಕ್ಕೆಂದರೆ, ಬೇರೆ ಕಡೆ ನೋಡಿದರೆ ಅನೇಕ ದಸ್ಸುವಂಶದಲ್ಲಿ ಹುಟ್ಟಿದವರೇ ಗೌರವದಲ್ಲಿ ಪ್ರಧಾನರಾಗಿದ್ದಾರೆ. ತೈಮರ ಲಂಗನೆಂಬ ವಿಖ್ಯಾತನಾದ ಕಳ್ಳನ ವಂಶದವರ ಸೃಥಿವಿಯಲ್ಲಿ ವಂಶವರ್ಯಾದೆಯುಳ್ಳ ಶ್ರೇಷ್ಠ ವಂಶದವರಾಗಿದ್ದಾರೆ. ಇಂಗ್ಲೆಂಡಿ ದೇಶದಲ್ಲಿ, ಯಾರು ವಂಶವರ್ಯಾದೆಯುಳ್ಳವ ರೆಂದು ವಿಶೇಷ ಗರ್ವಿತರಾಗಬೇಕೆಂದಿದ್ದಾರೆ, ಅವರು ತಾವು ನಾರ್ಮು್ರ ಅಥವಾ ಸ್ಕಾಂದ ನೇವಿಯದವರಾದ ನಾವಿಕ ದಸ್ಸುಗಳ ವಂಶೋದವರೆಂದು ಹೇಳಿಕೊಳ್ಳುತ್ತಾರೆ. ಪ್ರಾಚೀನ ಭಾರತವರ್ಷದಲ್ಲಿ ಕುರುವಂಶಕ್ಕೆ ವಿಶೇಷ ಮರ್ಯಾದೆ. ಆ ವಂಶದವರು ಗೋವುಗಳ ಕಳ್ಳರಾಗಿದ್ದರು. ರಾಟರಾಯನ ಉತ್ತರ ಗೋಗೃಹದಲ್ಲಿ ಗೋವುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಒಂದೆರಡು ಬಂಗಾಳೆ ಜಾನದಾರರು ಸ್ವಲ್ಪ ಇಂತಹ ವಂಶ ಮರ್ಯಾದೆಯುಳ್ಳವರಾಗಿದ್ದಾರೆ.