ಪುಟ:ಚಂದ್ರಶೇಖರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ಂ ಚಂದ್ರಶೇಖರ. ಉತ್ತರ-ಇದೆ. ಕೈವಲಿನೀ – ಅದು ಯಾವದು ? ಉತ್ತರ-ಮರಣ, ಶೈವಲಿನೀ – ನಾನು ವತನ್ನು ಗ್ರಹಣ ಮಾಡಿದ್ದೇನೆ, ತಾವು ಯಾರು ? ಕೈವಲಿನಿಗೆ ಯಾವ ಉತ್ತರವೂ ಬರಲಿಲ್ಲ. ಆಗವಳ ) ಕಾತರಯಾಗಿ ಪುನಃ, ತಾವು ದಾರೆಂಬುದನ್ನು ಹೇಳಬೇಕಾದ ಅವಶ್ಯಕವಿಲ್ಲ. ತಾವು ಈ ಪರ್ವತದ ದೇವತೆಯೆಂದು ತಿಳಿದು ತಮಗೆ ಪ್ರಣಾಮವನ್ನು ಮಾಡುತ್ತೇನೆ, ತಾವು ಇನ್ನೊಂದು ಪ್ರಶ್ನೆಗೆ ಉತ್ತರ ವನ್ನು ಕೊಡಬೇಕು. ನನ್ನ ಸ್ವಾಮಿಯು ಇರುವುದೆಲ್ಲಿ ? ಹೇಳ ಬೇಕು. ಉತ್ತರ..ಏತಕ್ಕೆ ? ಶೈವಲಿನೀ-ಪುನಃ ಅವರ ದರ್ಶನ ಉಂಟಾಗಲಾರದೆ ? ಉತ್ತರ-ನಿನ್ನ ಪಾ )ಯಶ್ಚಿತ್ರವು ಪೂರೈಸಿದಮೇಲೆ ದರ್ಶನವಾಗುವುದು. ಶೈವಲಿನೀ-ಹನ್ನೆರಡು ವರುಷದಮೇಲೆ ? ಉತ್ತರ-ಹನ್ನೆರಡು ವರುಷದಮೇಲೆ. ಶೈವಲಿನೀ — ಈ ಪ್ರಾಯಶ್ಚಿತ್ರವನ್ನು ಗ್ರಹಣ ಮಾಡಿದವಳು ಎಷ್ಟು ದಿನತಾನೇ ಬದುಕಿರುವಳು ? ಈ ಮಧ್ಯೆ ಸತ್ತು ಹೋದರೆ ? ಉತ್ತರ - ಹಾಗಾದರೆ ಸಾಯುವ ಕಾಲದಲ್ಲಿ ನೋಡುವೆ. ಕೈವಲಿನೀ-ಏನಾದರೂ ಉಪಾಯದಿಂದ ಅದಕ್ಕೆ ಮೊದಲು ನೋಡಲಾರೆನೆ ? ತಾವು ದೇವರಾಗಿರುವ ಕಾರಣ ತಮಗೆ ಅವಶ್ಯಕವಾಗಿ ಗೊತ್ತಿರಬೇಕು. ಉತ್ತರ-ಈಗ ನೀನವನನ್ನು ನೋಡಲೆಳೆಸಿದರೆ ಒಂದು ಸಪ್ತಾಹ ಹಗಲೂ ರಾತ್ರಿ ಈ ಗುಹೆಯಲ್ಲಿ ವಾಸಮಾಡುತಲಿರಬೇಕು. ಈ ಸಪ್ತಾಹ ಹಗಲೂ ರಾತಿನಿನ್ನ ಸಾಮಿ ಯನ್ನೇ ಧ್ಯಾನಮಾಡಬೇಕು, ಮತ್ತಾವ ಚಿಂತೆಗೂ ಮನಸ್ಸಿನಲ್ಲಿ ಸ್ಥಳವನ್ನು ಕೊಡ ಬೇಡ. ಈ ಏಳು ದಿನವೂ ಒಂದು ಸಲ ಸಾಯಂಕಾಲದಲ್ಲಿ ಹೊರಗೆ ಹೋಗಿ ಫಲಮಲ ಗಳನ್ನು ತೆಗೆದುಕೊಂಡು ಬಾ. ಅದನ್ನು ತಿಂದು ಸಂತೋಷಪಡಬೇಡ, ಅರ್ಧಹೊಟ್ಟೆ ಮಾತ) ತಿನ್ನ ಬೇಕು, ಯಾವ ಮನುಷ್ಯನ ಹತ್ತಿರವೂ ಹೋಗಬೇಡ, ಯಾರನ್ನೂ ನೋ ಡಬೇಡ, ನೋಡಿದರೂ ಮಾತನಾಡಬೇಡ. ಈ ಅಂಧಕಾರಮಯವಾದ ಗುಹೆಯಲ್ಲಿ ಸರಳ ಚಿತ್ರವುಳ್ಳವಳಾಗಿ ಸ್ವಾಮಿಯು ಹೊರತು ಮತ್ತಾರನ್ನೂ ಧ್ಯಾನ ಮಾಡದೆ, ಏಳ ದಿನಗಳು ಕಳೆದರೆ, ಆಮೇಲೆ ನಿನ್ನ ಸ್ವಾಮಿಯನ್ನು ನೋಡುವೆ.