ಪುಟ:ಚಂದ್ರಶೇಖರ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂತಹ ಯುದ್ಧದಲ್ಲಿ ಮದ್ದು ಗುಂಡುಗಳ ವೆಚ್ಚ ಹೊರತು ಬೇರೆ ಫಲವೇನೂ ಇಲ್ಲ. ಅನಂತರ ಮುಸಲ್ಮಾನರು ಆಶಯವನ್ನು ಬಿಟ್ಟು, ಕತ್ತಿ, ಭಿ, ಗುರಾಣಿಗಳನ್ನು ಹಿಡಿದು ಚೀತ್ಕಾರ ಮಾಡುತ್ತ ಅಮಿದುಳನ ನಡಾಭಿಮುಖವಾಗಿ ಓಡಿಬಂದರು. ಇದನ್ನು ನೋಡಿ ಸ್ಥಿರವಾದ ಪ್ರತಿಷ್ಠೆಯುಳ್ಳ ಇಂಗ್ಲೀಷರು ಭಯದಿಂದ ಕುಂದಲಿಲ್ಲ. - ಸ್ಥಿರಚಿತ್ತದಿಂದ ಅಮಿರಟೆ, ಗೋಲ್ಡ ರ್ಸ್ಟ, ಜಾನರ್ಸ ಈ ಮೂವರೂ ತಾವೇ ಸ್ವಂತವಾಗಿ ಬಂದೂಕುಗಳನ್ನು ಹಿಡಿದು ಮೇಲಿಂದ ಓಡಿ ಇತಿದು ಬರುತಲಿದ್ದ ಸಿಪಾಯಿ ಗಳಿಗೆ ಗುರಿಯಿಟ್ಟು ಹಡಗಿನೊಳಗಿನಿಂದ ಗುಂಡುಗಳನ್ನು ಹೊಡೆದರು. ಪ್ರತಿಯೊಂದು ಗುಂಡಿಗೂ ಒಬ್ಬೊಬ್ಬ ಯುವನನು ಹತನಾಗಿ ಸೈಕತಶಾಯಿಯಾಗಲಾರಂಭಿಸಿದನು. ಆದರೆ ತರಂಗರಮೇಲೆ ತರಂಗವು ಬಿದ್ದು ಬಂದಹಾಗೆ ಯವನ ಶ್ರೇಣಿಯು ಬಂದರ ಮೇಲೆ ಬಂದು ಬರಲಾರಂಭವಾಯಿತು. ಆಗ ಅಮಿಯಟನು, ಇನ್ನು ನಾವು ಉಳ ಯುವ ಸಂಭವವಿಲ್ಲ-ಬನ್ನಿ ! ನಾವು ಈ ವಿಧರ್ಮಿಗಳನ್ನು ನಿಶಾತವಾಗುತ್ತ ಹೋಗಿ ಪ್ರಾಣತ್ಯಾಗವನ್ನು ಮಾಡಬೇಕೆಂದನು. ಅಷ್ಟು ಹೊತ್ತಿಗೆ ಮುಸಲ್ಮಾನರು ಹೋಗಿ ಅಮಿದುಳಿನ ಹಡಗನ್ನೇರಿದರು. ಆಗ ಮರುಮಂದಿ ಇಂಗ್ಲೀಷರೂ ಒಟ್ಟಾಗಿ ಒಂದೇ ಸಮಯದಲ್ಲಿ ಗುಂಡುಗಳನ್ನು ಹಾರಿಸ ಲಾರಂಭಿಸಿದರು. ತ್ರಿಶೂಲದಿಂದ ಇರಿಯಲ್ಪಟ್ಟವರಹಾಗೆ ನೌಕಾರೂಢರಾಗುತ್ತಿದ್ದ ಯುವ ನರ ಶ್ರೇಣಿಯು ಅನ್ನ ಭಿನ್ನವಾಗಿ ಹಡಗಿನಿಂದ ನೀರಿನಲ್ಲಿ ಬಿಟ್ಟಿತು. ಪುನಃ ಮುಸಲ್ಮಾನರು ಹಡಗಿನಮೇಲೆ ಹತ್ತಿದರು, ಮತ್ತೆ ಕೆಲವು ಮುಸಲ್ಮಾ ನರು ಮುದ್ರಾದಿಗ `ಂದ ಹಡಗಿನ ತಲವನ್ನು ಹೊಡೆಯಲಾರಂಭಿಸಿದರು, ಹಡಗಿನ ತಲದೇಶವು ಒಡೆದು ಕಲಕಲ ಶಬ್ದದಿಂದ ಹಡಗು ಜಲಪೂರ್ಣವಾಗುತ್ತ ಬಂದಿತು. ಅಮಿನಟನು ತನ್ನ ಜತೆಗಾರರನ್ನು ಕುರಿತು, ದನ ಕುರಿಗಳ ಹಾಗೆ ನೀರಿನಲ್ಲಿ ಮು ಣುಗಿ, ಸಾಯಲೇತಕ್ಕೆ ? ಹೊರಗೆ ಬನ್ನಿ, ಧೀರರಹಾಗೆ ಸಾಯಬೇಕೆಂದನು. ಆಗ ೩೦ಗೀಸರು ಮೂವರೂ ನಿರ್ಭಯರಾಗಿ, ಕೈಯಲ್ಲಿ ಕತ್ತಿಗಳನ್ನು ಹಿಡಿ ದು ಆ ಅಗಣಿತರಾದ ಯವನರ ಇದಿರೆಗೆ ಬಂದು ನಿಂತರು. ಯವನರಲ್ಲೊಬ್ಬನು ಅಮಿದುಟಿಗೆ ಸಲಾಂವಾಡಿ, ಸಾಯಲೇತಕ್ಕೆ ? ನನ್ನ ಸಂಗಡ ಬಾ ಯೆಂದು ಹೇಳಿದನು. ಅವಿಯಟ-ಸಾಯುವೆನು, ಇಂದು ಇಲ್ಲಿ ನಾನು ಸತ್ತರೆ ಅದರಿಂದ ಭಾರತವ ರ್ಪದಲ್ಲಿ ಉಂಟಾಗುವ ಬೆಂಕಿಯ ಜ್ವಾಲೆಯಿಂದ ಮುಸಲರ ರಾಜ್ಯವು ಧ್ವಂಸವಾಗುವುದು. ನನ್ನ ರಕ್ಷತಿಂದ ಭೂವಿದು ತೊಯಿ ದರ ಶಿಶೀದು ಜಾರ್ಜಿನ ರಾಜಪತಾಕವು ಅದರಲ್ಲಿ ಸುಲಭವಾಗಿ ರೂಪಿತವಾಗುವುದು. ಇದನ್ನು ಕೇಳಿ ಬಣ್ಯ ಪತಾನನು, ಹಾಗಾದರೆ ಸಾಯಿ ಯೆಂದು ಹೇಳಿ ಕತ್ತಿಯು ಆ ಘಾತದಿಂದ ಅಮಿಂಟನ ಮುಂಡವನ್ನು ಕಡಿದು ಹಾಕಿದನು, ನೋಡಿ ಕ್ಷಿಪ್ರಹಸ್ತದಿಂದ