ಪುಟ:ಚಂದ್ರಶೇಖರ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬದನೆಯ ಭಾಗ. ဂင်္ဂါ ಫಾಸ್ಟರನ ಹಡಗು ಕಣ್ಣಿಗೆ ಕಾಣಿಸದೆ ಹೊರಟುಹೋಯಿತು. ಹಿಂದುಗಡೆ ಎರು ತಲಿದ್ದ ನವಾಬನ ಹಡಗೆಂದು ಹೇಳಿ ಫಾಸ್ಟರನು ದಲಿನಿಯನ್ನು ದಡಕ್ಕೆ ಇಳಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಆ ಹಡಗೂ ಸವಿಾಪಕ್ಕೆ ಬಂದಿತ್ತು, ದನಿಯು ಪ್ರತಿ ಕ್ಷಣದಲ್ಲಿಯ ತನ್ನನ್ನು ಕರೆದುಕೊಂಡು ಹೋಗುವುದಕ್ಕೆ ಹಡಗು ದಡಕ್ಕೆ ಬರುವುದೆಂದು ಯೋಚಿಸು ತಲಿದ್ದಳು. ಆದರೆ ಹಡಗು ದಡಕ್ಕೆ ಬರಲಿಲ್ಲ. ಕಡೆಗೆ ತನ್ನನ್ನು ಹಡಗಿನಲ್ಲಿದ್ದವರು ನೋಡಿರಲಾರರೆಂದು ದಲನಿಯು ತನ್ನ ಸೆರಗನ್ನೆ ತಿ ಬೀಸಿದಳು, ಆದರೂ ಹಡಗು ಹಿಂದಿ ರುಗಲಿಲ್ಲ. ಹಾಗೆಯೇ ಹೊರಟುಹೋಯಿತು. ಆಗ ಮಿಂಚು ಹೊಳೆದಹಾಗೆ ದನಿಯು ಮನಸ್ಸಿನಲ್ಲಿ, ಈ ಹಡಗು ನಿಜಾಮುತ್ತಿಗೆ ಸೇರಿದ್ದೆಂದು ಹೇಗೆತಾನೇ ಸಿದ್ದಾಂತವನ್ನು ಮಾಡಿದೆನು ! ಇತರರಿಗೆ ಸೇರಿರಬಹುದೆಂದು ಊಹಿಸಲಿಲ್ಲವೇತಕ್ಕೆ ! ಹೀಗೆಂದು ಹೊಳೆ ಯುತ್ತಲೆ, ಶುದ್ಧವಾಗಿ ಹುಚ್ಚಿಯಹಾಗಾಗಿ ಹಡಗಿನಲ್ಲಿದ್ದವರನ್ನು ಕುರಿತು, ಉಚ್ಚ ರದಿಂದ ಕೂಗಲಾರಂಭಿಸಿದಳು. ಅವರು ಈ ಹಡಗಿನಲ್ಲಿ ಸ್ಥಳವಿಲ್ಲವೆಂದು ಹೇಳುತ್ತ ಹೊರಟುಹೋದರು. ದನಿಯ ತಲೆಯಮೇಲೆ ವಜ್ಞಾಘಾತವಾದಹಾಗಾಯಿತು. ಅಷ್ಟುಹೊತ್ತಿಗೆ ಫಾಸ್ಟ್ ರನ ಹಡಗು ದೃಷ್ಟಿಗೆ ದೂರವಾಗಿ ಹೊರಟುಹೋಗಿತ್ತು. ಆದರೂ ಅವಳದನ್ನು ಹಿಡಿ ದುವ ಆಸೆಯಿಂದ ದಡದಲ್ಲಿಯೇ ಓಡಿದಳು. ಬಹಳ ದೂರ ಓಡಿದಳು, ಹಡಗು ಸಿಕ್ತ ಲಿಲ್ಲ. ಮೊದಲೇ ಸಂಧ್ಯಾಕಾಲವಾಗಿತ್ತು. ಈಗ ಅಂಧಕಾರವಾಯಿತು. ಗಂಗಾನದಿಯ ಮೇಲೆ ಮತ್ತೇನೂ ಕಾಣಿಸದು. ಅಂಧಕಾರದಲ್ಲಿ ಮಳೆಯ ಹೊಸನೀರಿನಿಂದ ತುಂಬಿದ ಹೊಳೆಯ ಕಲಕಲದನಿಯು ಮಾತ್ರ ಕೇಳಿಸುತಲಿತ್ತ, ಆಗವಳು ಆಕೆಯನ್ನು ತೊರೆ ದವಳಾಗಿ ಬೇರು ಕಳಚಿದ ಸಣ್ಣದಾದ ವೃಕ್ಷದಂತೆ ಕುಳಿತುಕೊಂಡುಬಿಟ್ಟಳು. ಕ್ಷಣಕಾಲದಮೇಲೆ ದಳನಿಯು ಇನ್ನು ಗಂಗೆದು ಗರ್ಭದಲ್ಲಿ ಕೂತು ಫಲವಿಲ್ಲವೆಂದು ತಿಳಿದು ಅಲ್ಲಿಂದೆದ್ದು ಮೆಲ್ಲಮೆಲ್ಲಗೆ ತೀರವನ್ನು ಬಿಟ್ಟು ಮೇಲಕ್ಕೆ ಹೋದಳು. ಅಂಧಕಾ ರದಲ್ಲಿ ಮೇಲಕ್ಕೆ ಹೋಗಲು ಮಾರ್ಗವು ಕಾಣಿಸದು, ಒಂದೆರಡು ತಡವೆ ಬಿಟ್ಟಿದ್ದಳು. ಯಾವ ದಿಕ್ಕಿನಲ್ಲಿಯ ಗ್ರಾಮದ ಚಿಹ್ನೆಯು ಕಾಣಿಸದು. ಅನಂತವಾದ ಪ್ರಾಂತರ ಮತ್ತು ಆ ಕಲಕಲನಾದವುಳ್ಳ ನದಿ, ಮನುಷ್ಯನ ಸೊಲ್ಲೇ ಇಲ್ಲ, ಯಾವ ದಿಕ್ಕು ನೋಡಿ ದರೂ ಬಂದು ಬೆಳಕು ಕಾಣಿಸದು ; ಗಾವು ಕಾಣಿಸದು : ವೃಕ ಕಾಣಿಸದು : ಮಾರ್ಗ ಕಾಣಿಸದು. ನಾಯಿ ನರಿ ಹೊರತು, ಬೇರೆ ಬಂದು ಪ್ರಾಣಿಯೂ ಕಾಣಿಸದು. ಕಲ ನಾದಿಯಾದ ನದಿಯ ಪ್ರವಾಹದಲ್ಲಿ ನಕ್ಷತ್ರವು ಕುಣಿದಾಡುವುದು ಕಾಣಿಸುತಲಿತ್ತು, ದಲ ನಿಯು ಮೃತ್ಯು ವುಂಟಾಗುವುದೇ ನಿಶ್ಚಯ ಮಾಡಿಕೊಂಡಳು. .ಆ ಸ್ಥಳದಲ್ಲಿ ಪಂತರ ಮಧ್ಯದಲ್ಲಿ ನದಿಗೆ ಸ್ವಲ್ಪ ದೂರದಲ್ಲಿ ದಲನಿದು ಕುಳಿತು ಕೊಂಡಳು. ಹತ್ತಿರ ರಲ್ಲಿಯು ಸುಬ್ಬ ಮಾಡುತಲಿತ್ತು ಹತ್ತಿರವೇ ನದಿ ಬು ಕೂಗುತಲಿತ್ತು, ಕ್ರಮವಾಗಿ ರಾತ್ರಿಯು ಗಭೀರವಾಗುತ್ತ ಬಂದಿತು. ಕವನಾಗಿ