ಪುಟ:ಚಂದ್ರಶೇಖರ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಕ ಮಹಕ. - ಬ ಜ ಹೆಚ್ಚು ವೆಚ್ಚಕ್ಕೆ ಮಾರ್ಗವಿಲ್ಲ. ಬಂದುದನ್ನು ಜತನವಾಡಿ ಇಡುವವರಿಲ್ಲ, ಹೀಗೆ ಇರುವ ಸ್ಥಿತಿಯಲ್ಲಿ ವಿವಾಹ ಮಾಡಿಕೊಳ್ಳುವುದೇ ಉತ್ತಮ ಕಲ್ಪನೆಂದು ಯೋಚಿಸಿದನು. ಹೀಗೆ ಯೋಚಿಸಿ, ವಿವಾಹ ಮಾಡಿಕೊಂಡರೆ ಸುಂದರಿಯನ್ನು ಮದುವೆ ಮಾಡಿಕೊಳ ಬಾರದು, ಸುಂದರಿಯನ್ನು ವಿವಾಹ ಮಾಡಿಕೊಂಡರೆ, ಅವಳಲ್ಲಿ ಮುಗ್ಧನಾಗುವ ಸಂಭವ; ತದ್ವಾರಾ ಸಂಸಾರದಲ್ಲಿ ಮುಗ್ಧನಾಗುವ ಸಂಭವ ಹೆಚ್ಚಾದುದರಿಂದ ಸುಂದರಿಯಾದವ ಳನ್ನು ಮದುವೆ ಮಾಡಿಕೊಳ್ಳುವದಿಲ್ಲವೆಂದು ಸಂಕಲ್ಪ ಮಾಡಿಕೊಂಡಿದ್ದನು. ಮನಸ್ಸು ಇಂತಹ ಸಂಕಲ್ಪದಿಂದ ವ್ಯಾಪ್ತವಾಗಿದ್ದ ಸಮಯದಲ್ಲಿ ಚಂದ್ರಶೇಖರನು ಶೈವಲಿನಿಯನ್ನು ನೋಡಿದನು, ಅವಳನ್ನು ನೋಡುತ್ತಲೆ ಅವನ ಮನಸ್ಸಿನ ವತವು ಭಂಗವಾಯಿತು, ಹಾಗೆಯೇ ಯೋಚಿಸಿ, ಚಿಂತಿಸಿ, ಭಾವಿಸಿ, ಹಿಂದುಮುಂದು ನೋಡಿ, ಕಡೆಗೆ ಕೈವಲಿನಿಯನ್ನು ಮದುವೆ ಮಾಡಿಕೊಂಡುಬಿಟ್ಟನು, ಸೌಂದರ್ಯದ ಮೋಹದಿಂದ ಯಾರುತಾನೇ ಮುಗ್ಗರಾಗುವುದಿಲ್ಲ ? ಈ ವಿವಾಹವಾದ ಎಂಟು ವರುಷದ ಮೇಲೆ ಈ ಕಥೆಯು ಆರಂಭವಾಗುವುದು. ರ್ತ...