ಪುಟ:ಚಂದ್ರಶೇಖರ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ೧8 ಚಂದ್ರಶೇಖರ-ಇಲ್ಲ. ರಮಾನಂದಸ್ವಾಮಿ ಹಾಗಾದರೆ ಇಂದು ರಾತ್ರಿ ನಿದೆ) ಮಾಡಬೇಡ-ಅವರಮೇಲೆ ದೃಷ್ಟಿಯಿಟ್ಟರು. ಇಬ್ಬರೂ ಎಚ್ಚರವಾಗಿದ್ದರು, ನೋಡುತ್ತಿದ್ದ ಹಾಗೆ ರಾತ್ರಿಯ ಶೇಪದಲ್ಲಿ ಶೈವಲಿ ನಿಯು ದೋಣಿಯನ್ನು ಬಿಟ್ಟು ಬಂದು, ತೀರದಲ್ಲಿದ್ದ ವನದಲ್ಲಿ ಅದೃಶ್ಯವಾದಳು, ಬಳ ಗಾದರೂ ಹಿಂದಿರುಗಿ ಬರಲಿಲ್ಲ. ಆಗ ರಮಾನಂದಸ್ವಾಮಿದು ಚಂದ್ರಶೇಖರನನ್ನು ಕುರಿ ತು, ಇವಳ ಮನಸ್ಸಿನಲ್ಲಿ ಏನಿದೆಯೋ ಅದು ಗೊತ್ತಾಗುವುದಿಲ್ಲ. ನಡೆ, ಅವಳನ್ನು ಅನುಸರಿಸಬೇಕಂದನು. ಆಗ ಅವರಿಬ್ಬರೂ ಜಾಗರೂಕತೆಯಿಂದ ಶೈವಲಿನಿಯನ್ನು ಅನುಸರಿಸಿ ಹೋದರು. ಸಾಯಂಕಾಲದಮೇಲೆ ಮೇಘಾಡಂಬರವನ್ನು ಕಂಡು ರಮಾನಂದಸ್ವಾಮಿಯು, ನಿನ್ನ ಬಾಹುಗಳಲ್ಲಿ ಬಲವುಂಟೆ ? ಎಂದು ಕೇಳಿದನು. ಚಂದ್ರಶೇಖರನು ನಕ್ಕು, ಒಂದು ದೊಡ್ಡ ಕಲ್ಲುಬಂಡೆಯನ್ನತಿ ದೂರ ಬಿಸುಟನು. ರಮಾನಂದಸ್ವಾಮಿ- ಒಳ್ಳೆಯದು.- ಉತ್ತಮವಾಯಿತು-ಶೈವಲಿನಿಯ ಹತ್ತಿರ ಹೋಗಿ ಅಂತರಾಳದಲ್ಲಿ ಕುಳಿತಿರು - ಶೈವಲಿನಿಯು ಈಗ ಬರುವ ಗಾಳಿ ಮಳೆಯಲ್ಲಿ ಸಹಾಯವಿಲ್ಲದಿದ್ದರೆ ಸ್ತ್ರೀ ಹವಾಗುವುದು- ಹತ್ತಿರ ಬಂದು ಗುಹೆ ಇದೆ- ನನಗೆ ಅದರ ಮಾರ್ಗವು ಗೊತ್ತು, ನಾನು ಹೇಳುತಲೆ, ನೀನು ಕೈವಲಿನಿಯನ್ನು ಎತ್ತಿಕೊಂ ಡು ನನ್ನ ಹಿಂದೆ ಬಾ, ಚಂದ್ರಶೇಖರ-ಈಗಾಗಲೆ ಘೋರತರವಾದ ಅಂಧಕಾರಕ್ಕೆ ಪ್ರಾರಂಭವಾಗಿದೆ ಮಾರ್ಗವನ್ನು ನೋಡುವಬಗೆ ಹೇಗೆ ? ರಮಾನಂದಸ್ವಾಮಿ --ನಾನು ಹತ್ತಿರ ಇರುವನು, ಈ ನನ್ನ ಕೊಲಿನ ಅಗ್ರಭಾ ಗವನ್ನು ನಿನ್ನ ಕೈಗೆ ಕೊಡುವೆನು, ಮತ್ತೊಂದು ಅಗ್ರಭಾಗವು ನನ್ನ ಕೈಯಲ್ಲಿರು ವುದು. ಶೈವಲಿನಿಯನ್ನು ಗುಹೆಯಲ್ಲಿಟ್ಟು, ಚಂದ್ರಶೇಖರನು ಹೊರಗೆ ಬಂದಮೇಲೆ ರವಾ ನಂದಸ್ವಾಮಿಯು ಮನಸ್ಸಿನಲ್ಲಿ, ನಾನು ಇಷ್ಟು ಕಾಲ ಸರ್ವಶಾಸ್ತ್ರ ವನ್ನೂ ಅಧ್ಯಯನ ಮಾಡಿದ್ದೇನೆ-ಸರ್ವಪಕಾರವಾದ ಮನುಷ್ಯರಸಂಗಡ ಆಲಾಪಮಾಡಿದ್ದೇನೆ, ಆದರೆ ಎಲ್ಲಾ ವ್ಯರ್ಥ-ಈ ಹುಡುಗಿಯ ಮನೋಭಿಪ್ರಾಯವನ್ನು ತಿಳಿಯಲಾರದವನಾಗಿದ್ದೇನೆ. ಈ ಸಮುದ್ರಕ್ಕೆ ತಳವೇ ಇಲ್ಲವೆ ? ಎಂದಂದುಕೊಂಡು, ಚಂದ್ರಶೇಖರನನ್ನು ಕುರಿತು, ಹತ್ತಿರ ಬಂದು ಮಠವಿದೆ – ಅಲ್ಲಿ ಹೋಗಿ ಇಂದು ವಿಶಾನವನ್ನು ತೆಗೆದುಕೊ, ಶೈವ ಲಿನಿಯ ವಿಚಾರದಲ್ಲಿ ಇಷ್ಟು ಆಯಿತು.. ನೀನು ಇನ್ನು ಪುನಃ ಆ ಯವನಿಯನ್ನನುಸರಿಸಿ ಹೋಗು, ಪರಹಿತವನ್ನು ಬಿಟ್ಟು ನಿನಗೆ ಬೇರೆ ವ್ರತವಿಲ್ಲವೆಂದು ಚೆನ್ನಾಗಿ ತಿದಿರು. ಶೈವಲಿನಿಯ ವಿಚಾರದಲ್ಲಿ ನೀನು ಚಿಂತಿಸಬೇಡ-ನಾನು ಇಲ್ಲಿರುವೆನು, ಆದರೆ ನೀನು