ಪುಟ:ಚಂದ್ರಶೇಖರ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪v ಚಂದ್ರಶೇಖರ. ಹಕೀಮನು ಔಷಧವನ್ನು ಕೊಟ್ಟನು. ಒಬ್ಬ ಹರಿಕಾರನು ಮಹಮ್ಮದತಕಿಯ ಬಳಿಗೆ ಹೋಗಿ, ಕರೀನಳು ಈಗತಾನೇ ಹಕೀಮನಿಂದ ವಿಷವನ್ನು ಕ್ರಯಕ್ಕೆ ತೆಗೆದು ಕೊಂಡು ಬಂದಿದ್ದಾಳೆಂದು ತಿಳಿಸಿದನು. ಮಹಮದತಕಿಯು ಕರೀವಳನ್ನು ಕರೆಯಿಸಿ ಕೇಳಲಾಗಿ, ಅವಳು ಒಪ್ಪಿಕೊಂಡು, ವಿಷವನ್ನು ದಳನಿಗೆ ಕೊಟ್ಟೆನೆಂದು ಹೇಳಿದಳು. ಕೇಳಿ, ತಕಿಯು ದಳವಿಯ ಬಳಿಗೆ ಬಂದನು. ನೋಡಲಾಗಿ, ದಳನಿಯು ಆಸನದಲ್ಲಿ ಕುಳಿತುಕೊಂಡು ಊರ್ಧ್ವಮುಖಿಯಾಗಿ ಊರ್ಧ್ವದೃಷ್ಟಿಯುಳ್ಳವಳಾಗಿ ಕೈಮುಗಿದು ಕೊಂಡಿದ್ದಳು. ವಿಸ್ಸಾರಿತವಾದ ಪದ್ಮಪಲಾಶ ಸದೃಶವಾದ ಕಣ್ಣುಗಳಿಂದ ಜಲಧಾರೆಯು ಬಂದರಮೇಲೆ ಬಂದು ಬಂದು ಗಂಡಸ್ಥಳದಿಂದ ಹರಿದು ಉಟ್ಟಿದ್ದ ಬಟ್ಟೆಯಮೇಲೆ ಬೀಳು ತಲಿತ್ತು. ಇದಿರಿಗೆ ಬಂದು ಬರೆದಾದ ಪಾತ್ರವಿತ್ತು. ದಳನಿಯು ವಿಷಪಾನ ಮಾಡಿ ದೃಳು. ಮಹಮದತಕಿಯು, ಬಿದ್ದಿರುವ ಈ ಪಾತ್ರವು ತರದೆಂದು ಕೇಳಿದನು. ದಳನೀ-ಅದು ವಿಷ, ನಾನು ನಿನ್ನ ಹಾಗೆ ನಿವುಕು ಹರಾಮಿದುಲ್ಲ, ಪ್ರಭುವಿನ ಆಪ್ಪಣೆಯನ್ನು ಪಾಲನ ಮಾಡಿದ್ದೇನೆ. ಈ ಉಳಿದಿರುವ ವಿಷವನ್ನು ನೀನು ನಾನಮಾಡಿ ನನ್ನೊಂದಿಗೆ ಬಾ. ಮಹಮದತಕಿಯು ನಿಶ್ಯಬ್ದವಾಗಿ ನಿಂತಿದ್ದನು. ದಳನಿಯು ಮೆಲ್ಲಮೆಲ್ಲಗೆ ಮಲ ಗಿದಳು, ಕಣ್ಣು ಮುಚ್ಚಿತು. ಎಲ್ಲಾ ಅಂಧಕಾರವಾಯಿತು. ದಳನಿಯು ಹೊರಟು ಹೋದಳು. ಮಾಂಗೀರಕೋಟೆಯಲ್ಲಿ ಕುಳಿತುಕೊಂಡು ನಬಾಬನು ಮಾಡುತಲಿದ ಗಣಿತದ ಫಲವು ಇದೆ ? •