ಪುಟ:ಚಂದ್ರಶೇಖರ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಪರಿಚ್ಛೇದ. ಪುನಃ ವೇದಗ್ರಾಮದಲ್ಲಿ, megames ಚಂದ್ರಶೇಖರನು ಬಹು ಕದಿಂದ ಕೈವಲಿನಿಯನ್ನು ಸ್ವದೇಶಕ್ಕೆ ಕರೆತಂ ದಿದ್ದನು. ಬಹಳ ಕಾಲದಮೇಲೆ ಪುನಃ ಗೃಹಕ್ಕೆ ಪ್ರವೇಶಮಾಡಿದನು. ನೋಡಲಾಗಿ ಆ ಗೃಹವು ಆಗ ಅರಣ್ಯಕ್ಕಿಂತಲೂ ಭಯಂಕರವಾ ಗಿದ್ದಿತು. ಮನೆಯ ಮೇಲೆ ಹುಲ್ಲು ಹೊದಿಸಿರಲಿಲ್ಲ: ಗಾಳಿಗೆ ಎಲ್ಲಾ ಹಾರಿಹೋಗಿತ್ತು, ಒಂದೆರಡು ಕಡೆ ಬಿದ್ದು ಹೋಗಿತ್ತು. ಛಾವ ೬ಣಿಯ ಹುಲ್ಲನ್ನೆಲ್ಲಾ ದನಕರುಗಳು ಮೇಯಿದು ಹೋಗಿದ್ದವು, ಗಳಗಳು ಕಟ್ಟುಬಿಚ್ಚಿ ಬಿದ್ದು ಹೋಗಿದ್ದವು, ಅಂಗಳದಲ್ಲೆಲ್ಲಾ ಹುಲ್ಲ ಗಿಡಗಳ ಬೆಳೆದಿದ್ದವು. ಹಾವೂ ಹುಳು ಗಳ ನಿರ್ಭಯವಾಗಿ ಓಡಾಡುತಲಿದ್ದವು, ಮನೆಯ ಕದಗಳನ್ನು ಕಳ್ಳರು ಹೊತ್ತು ಕೊಂಡು ಹೋಗಿದ್ದರು. ಮನೆಯು ಬೈಲಾಗಿತ್ತು. ಸಾಮಾನು ಯಾವದೂ ಇರಲಿಲ್ಲ. ಕಳ್ಳರು ಕೆಲವನ್ನು ಹೊತ್ತಿದ್ದರು. ಕೆಲವನ್ನು ಸುಂದರಿಯು ತೆಗೆದುಕೊಂಡು ಹೋಗಿ ತನ್ನ ಮನೆಯಲ್ಲಿಟ್ಟಿದ್ದಳು. ಮನೆಯೊಳಗೆ ಮಳೆಬಂದು ನೀರು ನಿಂತಿತ್ತು, ಕೆಲವು ಕಡೆ ಕೊಳೆತು ಹೋಗಿತ್ತು, ಕೆಲವು ಕಡೆ ನುಗ್ಗಿ ನಾಯಿಕೊಡೆಗಳು ಬೆಳೆದಿದ್ದವು. ಇಲಿ, ಜಿರಲೆ, ಚೇಳು, ಹಲ್ಲಿ ಮುಂತಾದವು ತಂಡತಂಡವಾಗಿ ಓಡಾಡುತಲಿದ್ದವು, ಚಂದ) ಶೇಖರನು ದೀರ್ಘನಿಶ್ವಾಸವನ್ನು ಬಿಟ್ಟು ಶೈವಲಿನಿಯ ಕೈ ಹಿಡಿದುಕೊಂಡು ಆ ಗೃಹ ದೊಳಗೆ ಪ್ರವೇಶಮಾಡಿದನು. ಚಂದ್ರಶೇಖರನು, ಪುಸ್ತಕಗಳನ್ನು ರಾತಿಮಾಡಿ ಅವುಗಳನ್ನು ಭಸ್ಮಮಾಡಿದ ಸ್ಥಳದಲ್ಲಿ ನಿಂತು ನೋಡಿದನು. ಅನಂತರ, ಶೈವಲಿನಿ ! ಎಂದು ಕೂಗಿದನು. ಕೈವಲಿನಿಯು ಮಾತನಾಡಲಿಲ್ಲ. ಕೊರಡಿದು ಬಾಗಿಲಲ್ಲಿ ಕುಳಿತುಕೊಂಡು ಪೂರ್ವ ಸ್ವಪ್ನ ದೃಸ್ಮವಾಗಿದ್ದ ಹೂವಿನ ಗಿಡವನ್ನು ನೋಡುತಲಿದ್ದಳು. ಚಂದ್ರಶೇಖರನು ಎಷ್ಟು ಮಾತನಾಡಿಸಿದರೂ ಒಂದಕ್ಕೂ ಪ್ರತ್ಯುತ್ತರವನ್ನು ಕೊಡಲಿಲ್ಲ. ವಿಸ್ತಾರಿತ ಲೋಚನ ಗಳುಳ್ಳವಳಾಗಿ ನಾಲ್ಕು ಕಡೆಯೂ ನೋಡುತ್ತಿದ್ದಳು. ಸ್ವಲ್ಪ ಸ್ವಲ್ಪ ನಗುತಲಿದ್ದಳು. ಒಂದೊಂದು ತಡವೆ ಗಟ್ಟಿಯಾಗಿ ನಕ್ಕು ಬೆರಳಿನಿಂದ ಎನೋ ತೋರಿಸುತಲಿದ್ದಳು. ಇತ್ತಲಾಗಿ, ಗ್ರಾಮದಲ್ಲಿ, ಚಂದ್ರಶೇಖರನು ಶೈವಲಿನಿಯನ್ನು ಕರೆತಂದಿದ್ದಾನೆಂದು