ಪುಟ:ಚಂದ್ರಶೇಖರ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ೧೫೯ ಸುಂದರಿಯು ಬಂದು ಮೆಲ್ಲಮೆಲ್ಲಗೆ ಕಣ್ಣೀರೊರಿಸಿಕೊಳ್ಳುತ್ತ ಶೈವಲಿನಿಯ ಹತ್ತಿರ ಕುಳಿತುಕೊಂಡಳು-ಮೆಲ್ಲಮೆಲ್ಲಗೆ ಮಾತನಾಡಿಸಲಾರಂಭಿಸಿದಳು-ಮೆಲ್ಲಮೆಲ್ಲಗೆ ಹಿಂದಿನ ವೃತ್ತಾಂತಗಳನ್ನು ಜ್ಞಾಪಿಸಿಕೊಡುವುದಕ್ಕೆ ಪ್ರಯತ್ನ ಪಟ್ಟಳು, ಶೈವಲಿನಿಯು ಯಾವ ದನ್ನೂ ಜ್ಞಾಪಿಸಿಕೊಳ್ಳಲಾರಳು, ಶೈವಲಿನಿಯ ಸ್ಮೃತಿಶಕ್ತಿಯು ಶುದ್ಧವಾಗಿ ಲೋಪ ವಾಗಿರಲಿಲ್ಲ, ಹಾಗೆ ಲೋಪವಾಗಿದ್ದರೆ ಪಾರ್ವತಿಯ ಹೆಸರು ಜ್ಞಾಪಕಕ್ಕೆ ಬರುತ್ತಿರ ಲಿಲ್ಲ, ಆದರೆ ಪ್ರಕೃತದಮಾತು ಮನಸ್ಸಿಗೆ ಹತ್ತುವಹಾಗಿರಲಿಲ್ಲ, ಎಲ್ಲಾ ವಿಕೃತವಾಗಿ ವಿಪರೀತವಿಪರೀತವಾಗಿ ಸಂಲಗ್ನ ವಾಗಿ ಮನಸ್ಸಿಗೆ ಹೊಳೆಯುತ್ತಿದ್ದವು. ಸುಂದರಿಗೆ ಜ್ಞಾಪಕಶಕ್ತಿ ವುಂಟು, ಆದರೆ ಸುಂದರಿಯೆಂದು ಗುರುತಿಸಲಾರಳು. ಸುಂದರಿದು ಮೊದಲು ಚಂದ್ರಶೇಖರನನ್ನು ಸ್ಪಾ ನಾಹಾರಕ್ಕೋಸ್ಕರ ತನ್ನ ಮನೆಗೆ ಕಳುಹಿಸಿದಳು, ಅನಂತರ ಆ ಭಗ್ನ ಗೃಹವನ್ನು ಶೈವಲಿನಿಗೆ ನಾಸೋಪಯೋಗಿಯಾಗಿ ಮಾಡಲು ಪ್ರವೃತ್ತಿಸಿದಳು. ಕ್ರಮಕ್ರಮವಾಗಿ ನೆರೆದವರು ಒಬ್ಬೊಬ್ಬರಾಗಿ ಬಂದು ಅವಳಿಗೆ ಸಹಾಯಮಾಡಿದರು, ಬೇಕಾದ ಸಾಮಗ್ರಿಗಳು ಬಂದು ಬೀಳುವದಕ್ಕಾರಂಭ ವಾಯಿತು. ಇತ್ತಲಾಗಿ ಪ್ರತಾಪನು ವಾಂಗೀರಿಗೆ ಬಂದು ದೊಣ್ಣೆಯವರನ್ನೆಲ್ಲಾ ಯಥಾಸ್ಸುನ ದಲ್ಲಿಟ್ಟು ಒಂದು ತಡವೆ ಮನೆಗೆ ಬಂದಿದ್ದನು, ಮನೆಗೆ ಬಂದಮೇಲೆ ಚಂದ್ರಶೇಖರನು ಮನೆಗೆ ಬಂದಿದ್ದನೆಂದು ಕೇಳಿದನು. ಆ ಕೂಡಲೇ ಅವನನ್ನು ನೋಡುವುದಕ್ಕೆ ಜಾಗ್ರತೆ ಯಾಗಿ ವೇದಗ್ರಾಮಕ್ಕೆ ಬಂದನು. ಅದೇ ದಿನವೇ ರಮಾನಂದಸ್ವಾಮಿದ ಆ ಗ್ರಾಮಕ್ಕೆ ಮೊದಲೇ ಬಂದು ದರ್ಶನ ವನ್ನು ಕೊಟ್ಟಿದ್ದನು, ಸುಂದರಿಯು, ರಮಾನಂದಸ್ವಾಮಿಯ ಹೇಳಿಕೆಯ ಪ್ರಕಾರ ಚಂದ್ರಶೇಖರನು ಶೈವಲಿನಿಗೆ ಔಷಧವನ್ನು ಕೊಡಿಸುವನೆಂದು ಕೇಳಿ ಸಂತೋಷಪಟ್ಟಳು. ಔಷಧವನ್ನು ಕೊಡುವುದಕ್ಕೆ ಶುಭಲಗ್ನವು ಗೊತ್ತುಮಾಡಲ್ಪಟ್ಟಿತು.