ಪುಟ:ಚಂದ್ರಶೇಖರ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ಚಂದ್ರಶೇಖರ. ಚಂದ್ರ ಶೇಖರ-ಪ್ರತಾಪನು ನಿನ್ನ ಜಾರನೆ ? * ಶೈವಲಿನೀ – ! © ! ಚಂದ್ರಶೇಖರನು.ಮತ್ತೇನು ? ಶೈವಲಿನೀ – ನಾವಿಬ್ಬರೂ ಒಂದು ತೊಟ್ಟನ ಹೂವುಗಳು, ಒಂದು ವನದಲ್ಲಿ ಪ್ರನ್ನು ವಿತರಾದೆವು. ಕಿತ್ತು ಪ್ರತ್ಯೇಕ ಮಾಡಿದಿರೇತಕ್ಕೆ ? - ಚಂದ್ರಶೇಖರನು ದೀರ್ಘನಿಶ್ವಾಸವನ್ನು ಬಿಟ್ಟನು. ಅವನ ಅಪಾರವಾದ ಎದ್ದಿಗೆ ಯಾವದೂ ಮರೆಯಾಗಲಿಲ್ಲ. ಪುನಃ ಕೇಳಿದನು. ಚಂದ್ರಶೇಖರ .. ಯಾವದಿನ ಪ್ರತಾಪನು ಮೈತ್ಸರ ಹಡಗಿನಿಂದ ಓಡಿಹೋದನೋ ಅಂದು ಗಂಗೆಯಲ್ಲಿ ಈಜಾಡಿದ್ದುದು ಜ್ಞಾಪಕವಿದೆಯೆ ? ಶೈವಲಿನೀ-ಜ್ಞಾಪಕವಿದೆ. ಚಂದ್ರ ಶೇಖರ-ಏನೇನು ಮಾತನಾಡಿದಿರಿ ? ಕೈವಲಿನಿಯು ಆನುಪೂರ್ವಕವಾಗಿ ಎಲ್ಲವನ್ನೂ ಸಂಕ್ಷೇಪವಾಗಿ ಹೇಳಿದಳು. ಚಂದ ಶೇಖರನು ಪ್ರತಾಪನನ್ನು ಬಹಳವಾಗಿ ಶ್ಲಾಘಿಸಿದನು. ಚಂದ್ರಶೇಖರ-ಹಾಗಾದರೆ, ಭಾಸ್ಕರನ ಸಂಗಡ ವಾಸಮಾಡಲು ಏತಕ್ಕೆ ಹೋದೆ ? ಕೈವಲಿನೀ- ವಾಸವಾತ, ಪುರಂದರಪುರಕ್ಕೆ ಹೋದರೆ ಪ್ರತಾಪನು ಸಿಕ್ಕುವ ನೆಂಬ ಭರವಸೆಯಿಂದ ಹೋದೆ. ಚಂದ್ರಶೇಖರ-ವಾಸಮಾತ್ರ ಹಾಗಾದರೆ ನೀನು ಸಾಧಿಯೆ ? ಶೈವಲಿನೀ-ಪ್ರತಾಪನಿಗೆ ಮನಸಾ ಆತ್ಮ ಸಮರ್ಪಣೆ ಮಾಡಿದ್ದೆ. ಆದುದರಿಂದ ನಾನು ಸಾಧಿಯಲ್ಲ. ಮಹಾ ಸಾಮಿಪೈ. ಚಂದ್ರಶೇಖರ - ಇಲ್ಲದಿದ್ದರೆ ? ಕೈವಲಿನೀ-ಇಲ್ಲದಿದ್ದರೆ ಸಂಪೂರ್ಣವಾದ ಸುದ್ದಿ, ಚಂದ್ರಶೇಖರ-ಭಾಸ್ಕರನ ಸಂಬಂಧವೊ ಕೈವಲಿನೀ-ಕಾಯಮನೊವಾಕ್ಕಾಗಿಲ್ಲ. ಚಂದ್ರಶೇಖರನು ತೀವ್ರವಾದ ದೃಸ್ಟಿಯಿಂದ ನೋಡಿ ಕೈಯಿಂದ ತಡವಿ, ನಿಜವಾಗಿ ಹೇಳುತ್ತೀಯಾ ? - ನಿದ್ರಿತವಾಗಿದ್ದ ಯುವತಿಯು ಹುಬ್ಬು ಗಂಟುಹಾಕಿಕೊಂಡು, ಸತ್ಯವಾಗಿ ಹೇಳಿದ್ದೇ ನೆಂದಳು. ಚಂದ್ರಶೇಖರನು ಪುನಃ ನಿಶ್ವಾಸವನ್ನು ಬಿಟ್ಟು, ಬ್ರಾಹ್ಮಣಕನೈಯಾಗಿ ಜಾತಿಭ್ರಷ್ ಯಾದುದು ಏತಕ್ಕೆ? ಎಂದನು. ಕೈವಲಿನೀ-ತಾವು ಸರ್ವಶಾಸ್ತ್ರದರ್ಶಿಗಳು. ನಾನು ಜಾತಿಭ್ರಷ್ಮೆಯಾದೆನೆ ಅಥವಾ ಇಲ್ಲವೆ ? ತಾವೇ ಹೇಳಬೇಕು, ನಾನು ಅವನ ಅನ್ನವನ್ನು ತಿಂದಿಲ್ಲ, ಅವನು ಮುಟ್ಟಿದ್ದ