ಪುಟ:ಚಂದ್ರಶೇಖರ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರನೆಯ ಭಾಗ. ಇ ಗಳು ವಿನತವಾದುವು.ಆಗ ದಾರುಣವಾದ ನಿದ್ರೆಯಲ್ಲಿ ಅವನ ಶರೀರವು ಅವಶವಾಗುತ್ತ ಬಂದಿತು. ಆ ಜಟಾಜೂಟಧಾರಿಯ ಒಪ್ನಗಳು ಅಲ್ಲಾಡಿದಹಾಗೆ ಬೋಧೆಯಾಯಿತು. ಅವನು ಎನೋ ಹೇಳುವಹಾಗೆ ತೋರಿತು, ಕ್ರಮವಾಗಿ ಸಜಲವಾದ ಮೇಘದ ಗಂಭೀರ ಧ್ವನಿಯು ಭಾಸ್ಕರನ ಕಿವಿಗೆ ಬಿದ್ದ ಹಾಗಾಯಿತು. ಫಾಸ್ಟರನನ್ನು ಕುರಿತು, ನಿನ್ನನ್ನು ನಾಯಿಗಳ ದಂಶನದಿಂದ ಉದ್ಧಾರಮಾಡುವೆನು. ನನ್ನ ಮಾತಿಗೆ ಉತ್ತರವನ್ನು ಕೊಡು ನೀನು ಶೈವಲಿನಿಯು ಜಾರನೆ ?” ಎಂದು ಕೇಳಿದಹಾಗೆ ಕೇಳಿಸಿತು. ಫಾಸ್ಟರನು ಆ ಧೂಳಿಧೂಸರಿತೆಯಾದ, ಉನ್ಮಾದಿನಿಯಾದ ಶೈವಲಿನಿಯನ್ನು ನೋಡಿ, ಇಲ್ಲ, ಎಂದನು. ಎಲ್ಲರೂ ಕೇಳುವಹಾಗೆ, ಇಲ್ಲ ನಾನು ಕೈವಲಿನಿದು ಜಾರನಲ್ಲವೆ ಎಂದು ಹೇಳಿದನು. - ಅದೇ ವಜಗಂಭೀರವಾದ ಧ್ವನಿಯಿಂದ, ಪ್ರಶ್ನೆಯು ಪುನಃ ಹೊರಟಿತು. ಭಾಸ್ಟರ ನಿಗೆ ನಬಾಬನೋ ಅಥವಾ ಚಂದ್ರಶೇಖರನೋ, ಅಥವಾ ಮತ್ತಾರೋ, ಯಾರು ಈ ಪ್ರಶ್ನೆ ಯನ್ನು ಮಾಡಿದವರೆಂದು ಗೊತ್ತಾಗಲಿಲ್ಲ, ಗಂಭೀರವಾದ ಧ್ವನಿಯಿಂದ, ಹಾಗಾದರೆ, ಶೈವಲಿ ನಿಯು ನಿನ್ನ ನಿಕದಲ್ಲಿದ್ದಳೇತಕ್ಕೆ ? ಎಂಬ ಪ್ರಶ್ನೆಯು ಮಾತ್ರ ಕೇಳಿಸಿತು. ಪ್ರಶ್ನೆ ಕ ರ್ತರು ಯಾರೆಂದು ಗೊತ್ತಾಗಲಿಲ್ಲ. ಫಾಸ್ಟರನು ಉಚ್ಚಸ್ವರದಿಂದ ಹೇಳತೊಡಗಿದನು:- ಹೇಗೆಂದರೆ:- ನಾನು ಶೈಲಿ ನಿಯ ರೂಪದಿಂದ ಮುಗ್ಧನಾಗಿ ಅವಳನ್ನು ಅವಳ ಮನೆಯಿಂದ ಹರಣಮಾಡಿಕೊಂಡು ಹೋದೆನು. ನನ್ನ ಹಡಗಿನಲ್ಲಿ ಅವಳನ್ನು ಇಟ್ಟುಕೊಂಡಿದ್ದೇನು, ಅವಳು ನನ್ನಲ್ಲಿ ಆಸಕ್ಕೆಯಾಗಿದ್ದಳೆಂದು ತಿಳಿದಿದ್ದೆನು. ಆದರೆ ನೋಡಲಾಗಿ ಹಾಗಿರಲಿಲ್ಲ. ಆವಳು ನನ್ನ ಶತ್ರುವಾಗಿದ್ದಳು. ಹಡಗಿನಲ್ಲಿ ಪ್ರಥಮ ಸಂದರ್ಶನದಲ್ಲಿಯೇ ಅವಳು ಒಂದು ಚೂರಿಯ ನ್ನು ತೆಗೆದು ಹಿಡಿದುಕೊಂಡು ನನ್ನನ್ನು ಕುರಿತು, ನೀನು ನನ್ನ ಚಿಕ್ಕ ಮನೆಗೆ ಬಂದರೆ ಈ ಚೂರಿಯಿಂದ ಇಬ್ಬರೂ ಸಾಯುವೆವು, ನಾನು ನಿನ್ನ ತಾಯಿಗೆ ಸಮಾನವೆಂದು ತಿಳಿ ಯೆಂದು ಹೇಳಿದಳು, ನಾನು ಅವಳ ಹತ್ತಿರ ಹೋಗಲಾರದವನಾದನು, ಯಾವಾಗಲೂ ಅವಳನ್ನು ಸ್ಪರ್ಶಮಾಡಿಲ್ಲ, ಎಂದು ಹೇಳಿದನು. ಎಲ್ಲರೂ ಈ ಮಾತನ್ನು ಕೇಳಿದರು. - ಚಂದ್ರಶೇಖರ -ಈ ಶೈವಲಿನಿಯು ಮೈತ್ಮರು ಮುಟ್ಟಿದ ಅಥವಾ ಮಾಡಿದ ಅನ್ನ ವನ್ನು ತಿಂದಳೆ ? ಭಾಸ್ಟರನು ಕುಂಠಿತಭಾವದಿಂದ, ಒಂದು ದಿನವಾದರೂ ನಾನಾಗಲಿ ನನ್ನ ಜನರಾಗಲಿ ಮುಟ್ಟಿದ್ದ ಪದಾರ್ಥವನ್ನು ಅವಳು ಮುಟ್ಟಿಲ್ಲ, ಸ್ವಂತವಾಗಿ ಅಡಿಗೆ ಮಾಡಿಕೊಳ್ಳುತ್ತಿ ಈಳಂದನು. ಪ್ರಶ್ನೆ-ಏನೇನು ಅಡಿಗೆ ಮಾಡಿಕೊಳ್ಳುತ್ತಿದ್ದಳು ? - ಫಾಸ್ಟರ-ಕೇವಲ ಅಕ್ಕಿಯನ್ನು ಮಾತ್ರ ; ಅನ್ನದೊಂದಿಗೆ ಹಾಲನ್ನು ಮಾತ್ರ ಹಾಕಿ ಕೊಳ್ಳುತ್ತಿದ್ದಳು. 22