ಪುಟ:ಚಂದ್ರಶೇಖರ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಚಂದ್ರಶೇಖರ, ಪ್ರಶ್ನೆ-ನೀರೋ ? ಫಾಸ್ಟರ-ಗಂಗೆಯಿಂದ ತಾನೇ ತೆಗೆದುಕೊಳ್ಳುತ್ತಿದ್ದಳು, ಈ ಸಮಯದಲ್ಲಿ 'ದಡಂ? ಆಡಂ' ಎಂದು ಶಬ್ದವಾಯಿತು. ನಬಾಬ-ಅದೇನು ಅದು ? ಇರಫಾನನು ಕಾತರ ಸರದಿಂದ, ಮತ್ತೇನು ? ಇಂಗ್ಲೀಷರ ಫಿರಂಗಿ ಗುಂಡಿನ ಶಬ್ದು. ಅವರು ಶಿಬಿರವನ್ನು ಆಕ್ರಮಣವಾಡಿದ್ದಾರೆಂದನು. ಇದ್ದಕ್ಕಿದ್ದ ಹಾಗೆ ಎಲ್ಲರೂ ಶಿಬಿರದಿಂದ ಹೊರಗೆ ಹೊರಟರು. ಡಂ ಡಂ ಎಂದು ಪುನಃ ಫಿರಂಗಿ ಗುಂಡಿನ ಶಬ್ಬ ವಾಗಲಾರಂಭಿಸಿತು. ಪುನಃ ! ಅನೇಕ ಫಿರಂಗಿಗಳ ಶಬ್ದವಾಯಿತು. ಭೀಮನಾದವು ಹಾರಿ ಹಾರಿ ಹತ್ತಿರ ಬರಲಾರಂಭವಾಯಿತು. ರಣವಾದ್ಯವಾಯಿತು. ನಾಲ್ಕು ಕಡೆಯಲ್ಲಿಯ ತುಮುಲ ಕೋಲಾಹಲವು ಎದ್ದಿತು. ಅಶ್ಚಗಳ ಪದಾಘಾತದ ಶಬ್ದ. ಅಸ್ತ್ರಗಳ ಝಂಝನಾ ಶಬ್ದ-ಸೈನಿಕರ ಜಯಧ್ವನಿ-ಸಮುದ್ರದ ತರಂಗದಹಾಗೆ ಗರ್ಜ ನೆಯಾಗುತ್ತ ಎದ್ದಿತು. ಧೂಮರಾಶಿಯಿಂದ ಗಗನವೆಲ್ಲಾ ಆವರಿತವಾಯಿತು-ದಿಗಂತ ವ್ಯಾಪ್ತವಾಯಿತು. ಮಲಗಿದ್ದಾಗ ಜಲೋಭ್ಯಾಸದಿಂದ ಉಲಿತವಾಗಿ ಕ್ಷುಬ್ಧ ವಾದ ಸಾಗರವೇ ಬಂದು ಸುತ್ತಿಕೊಂಡ ಹಾಗಾಯಿತು. ಇದ್ದಕ್ಕಿದ್ದಹಾಗೆ ನಬಾಬನ ಮಂತ್ರಿಗಳ ನೃತ್ಯರೂ ಹಿಗ್ಗು ನುಗ್ಗಾಗಿ ಒಬ್ಬರನ್ನು ಒಬ್ಬರು ತಳ್ಳಿಕೊಳ್ಳುತ್ತ ತಿಬಿರದಿಂದ ಹೊರಗಾದರು. ಕೆಲವರು ಸಮರಾಭಿಮುಖವಾ ಗಿದು, ಕೆಲವರು ಪಲಾಯನಾಭಿಮುಖವಾಗಿಯೂ ಓಡಿದರು, ಕುಲಸಂಬಿ, ಚಂದ ) ಶೇಖರ, ಶೈವಲಿನಿ, ಫಾಸ್ಟರ ಇವರು ಹೊರಗೆ ಬಂದರು. ನಬಾಲನೊಬ್ಬನೇ ಬಂದಿಯಾ ಗಿದ್ದ ತಕಿಯೊಡನೆ ಶಿಬಿರದಲ್ಲಿದ್ದನು.

  • ಆ ಸಮಯದಲ್ಲಿ ಫಿರಂಗಿಗುಂಡುಗಳು ತಿವಿರದೊಳಗೆ ಬಂದು ಬೀಳಲಾರಂಭವಾ ದವು. ಆಗ ನಬಾಬನು ತನ್ನ ಕೈಯಿಂದ ಅಸಿಯನ್ನು ಬರೆಯಿಂದ ಕಿತ್ತು ಅದರಿಂದ ತಕಿಯ ವಕ್ಷವನ್ನು ಇರಿದನು. ತಕಿಯ ಪುಣವನ್ನು ಬಿಟ್ಟನು. ನಬಾಬನು ಶಿಬಿರ ದಿಂದ ಹೊರಗೆ ಹೊರಟನು.

.