ಪುಟ:ಚಂದ್ರಶೇಖರ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರಣಿಯು ಭಗೆ. ಶೈವಲಿನೀ-ನೀನು ಈ ಸೃಥಿವಿಯಮೇಲೆ ಇದ್ದರೆ, ನನ್ನನ್ನು ಪುನಃ ನೋಡಬೇಡ. ಹೆಂಗಸರ ಚಿತ್ರವು ಅತಿ ಅಪಾರವಾದುದು ಎಷ್ಟು ದಿನತಾನೇ ವಶದಲ್ಲಿರುವುದು ? ನೀನು ಈ ಜನ್ಮದಲ್ಲಿ ನನ್ನನ್ನು ನೋಡಬೇಡ. ಪ್ರತಾಪನು ಪುನಃ ಏನೂ ಹೇಳಲಿಲ್ಲ, ಬೇಗನೆ ಹೋಗಿ ಕುದುರೆಯನ್ನೇರಿ, ಕುದು ರೆಯನ್ನು ಕಶಾಘಾತಮಾಡಿ ಮುದ್ದ ಕ್ಷೇತ್ರಾಭಿಮುಖವಾಗಿ ಓಡಿಸಿಕೊಂಡು ಹೋದನು. ಅವನ ಸೈನ್ಯವು ಅವನನ್ನು ಗುರ್ತಿಸಿತು. ಹೋಗುವಾಗ ಚಂದ್ರಶೇಖರನು ಕೂಗಿ, ಎಲ್ಲಿಗೆ ಹೋಗುತ್ತಿ? ಎಂದನು. ಪ್ರತಾಪ - ಯುದ್ಧಕ್ಕೆ. ಚಂದ್ರ ಶೇಖರನು ವ್ಯಗ್ರಭಾವದಿಂದ ಗಟ್ಟಿಯಾಗಿ, ಹೋಗಬೇಡ, ಹೋಗಬೇಡ, ಇಂಗ್ಲೀಷರ ಯುದ್ಧದಲ್ಲಿ ಉಳಿಯುವುದು ಕಷ್ಟ್ಯವೆಂದನು. ಪ್ರತಾಪ - ಫಾಸ್ಟರನು ಇನ್ನೂ ಬದುಕಿದ್ದಾನೆ. ಅವನ ವಧೆಗೋಸ್ಕರ ಹೋಗು ತೇನೆ. ಚಂದ್ರಶೇಖರನು ಓಡಿಬಂದು ಅವನ ಕುದುರೆಯು ಲಗಾಮನ್ನು ಹಿಡಿದುಕೊಂಡು, ಫಾಸ್ಟರನ ವಧೆಯಿಂದಾಗುವುದೇನು ? ದುಷ್ಯನಾದವನಿಗೆ ಭಗವಂತನು ದಂಡವಿಧಾನ ವನ್ನು ಮಾಡುತ್ತಾನೆ. ನೀನೂ ನಾನೂ ದಂಡವಿಧಾಯಕರೆ ? ಅಧಮನಾದವನು ಶತು) ವಿನ ಪ್ರತಿಹಿಂಸೆ ಮಾಡುತ್ತಾನೆ. ಉತ್ತಮನಾದವನು ಶತ್ರುವನ್ನು ಕ್ಷಮಿಸುತ್ತಾ ನೆಂದನು. - ಪ್ರತಾಪನು ವಿಸ್ಮಿತನಾಗಿ ಪುಳಕಿತನಾದನು. ಇಂತಹ ಮಹತ್ತಾದ ಉಕ್ತಿಯನ್ನು ಜನರ ಬಾಯಿಯಿಂದ ಅವನು ಯಾವಾಗಲೂ ಕೇಳಿರಲಿಲ್ಲ, ಕುದುರೆಯಿಂದಿಳಿದು ಚಂದ್ರ ಶೇಖರನ ಪಾದಧೂಳಿಯನ್ನು ಗ ಹಣಮಾಡಿ, ನೀನೇ ಮನುಷ್ಯರಲ್ಲಿ ಧನ್ಯನು, ನಾನು ಫಾಸ್ಟರನನ್ನು ಏನೂ ಮಾಡುವುದಿಲ್ಲವೆಂದನು. ಹೀಗೆಂದು ಹೇಳಿ ಪ್ರತಾಪನು ಪುನಃ ಕುದುರೆಯನ್ನೇರಿ ಯುದ್ದ ಕ್ಷೇತ್ರಾಭಿಮುಖ ವಾಗಿ ಹೊರಟನು. ಚಂರ್ದಶೇಖರನು, ಪ್ರತಾಪ ! ಯುದ್ಧಕ್ಷೇತ್ರಕ್ಕೆ ಹೋಗಬೇಕಾದು ದೇತಕ್ಕೆ? ಎಂದನು. ಪ್ರತಾಪನು ಬೇರೆ ಕಡೆಗೆ ಮುಖವನ್ನು ತಿರುಗಿಸಿಕೊಂಡು ಅತಿ ಕೋಮಲವಾದ, ಅತಿ ಮಧುರವಾದೆ ನಗುವನ್ನು ನಕ್ಕು, ನನಗೆ ಅವಶ್ಯಕವಿದೆಯೆಂದು ಹೇಳಿ, ಕುದುರೆಯನ್ನು ಕಶಾಘಾತ ಮಾಡಿ ವೇಗದಿಂದ ಹೊರಟುಹೋದನು. ಆ ನಗುವನ್ನು ನೋಡಿ ರಮಾನಂದಸ್ವಾಮಿಯು ಉದ್ವಿಗ್ನನಾಗಿ, ಚಂದ್ರಶೇಖರನನ್ನು ಕುರಿತು, ನೀನು ಹೆಂಡತಿಯನ್ನು ಕರೆದುಕೊಂಡು ಮನೆಗೆ ಹೋಗು. ನಾನು ಗಂಗಾ ಸ್ನಾನಕ್ಕೆ ಹೋಗುತ್ತೇನೆ, ಒಂದೆರಡು ದಿನದಲ್ಲಿ ಬಂದು ನೋಡುತ್ತೇನೆಂದನು. ಚಂದ್ರಶೇಖರ - ಪ್ರತಾಪನಿಗೋಸ್ಕರ ಮನಸ್ಸು ಕಳವಳಗೊಳ್ಳುತ್ತಿದೆ.