ಪುಟ:ಚಂದ್ರಶೇಖರ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

cy ಚಂದ್ರಶೇಖರ. ಡುವುದು, ನೀವು ಆಗ ಈ ದುರ್ಭಾವನೆಗಳನ್ನು ಕಂಡು ಪವನದೇವನಿಗೆರಗಿ, ಬಿಟ್ಟರೆ ಸಾಕೆಂದು ಹಡಗನ್ನು ತಂದು ದಡಕ್ಕೆ ಕಟ್ಟಬಿಡುವಿರಿ, ಆದುದರಿಂದ ಎಂತಹ ದುಷ್ಯ ನನ್ನು ನಂಬಿದರೂ ತಂಗಾಳಿಯನ್ನು ನಂಬಬಾರದು. - ಶೈವಲಿನಿಯು ಹಡಗಿಗೆ ಇದೇ ದಶೆಯುಂಟಾಯಿತು. ಸ್ವಲ್ಪ ಹೊತ್ತಿನಲ್ಲಿ ಗಾಳಿಯು ಪ್ರಬಲವಾಗಿ, ಆ ದೊಡ್ಡದಾದ ಹಡಗು ಪ್ರತಿಕೂಲವಾದ ಗಾಳಿಗಿದಿರಾಗಿ ಮುಂದೆಸಾಗದೆ ನಿಂತುಹೋಯಿತು. ಹಡಗನ್ನು ನಡೆಸುತಲಿದ್ದ ಅಂಬಿಗರು ಹಡಗನ್ನು ಛದ ಘಾಟು ದಡಕ್ಕೆ ತಂದು ನಿಲ್ಲಿಸಿದರು. ಅಲ್ಲಿ ನಿಂತ ಸ್ವಲ್ಪಹೊತ್ತಿನೊಳಗೆ ಹಡಗಿನ ಹತ್ತಿರಕ್ಕೆ ಒಬ್ಬ ನಾಪಿತೆಯು ಬಂದಳು. ಅವಳು ಸಧವೆ, ಸೊಗಸಾದ ರಂಗಿನ ಸೀರೆಯನ್ನುಟ್ಟಿದಳು, ದೊಡ್ಡ ಅಡ್ಡಗಂಬಿ ಯುಳ್ಳ ಸೆರಗು, ಕೈಯಲ್ಲಿ ಗೋರಂಟಸೊಪ್ಪು, ಸೊಂಟದಮೇಲೆ ಹಚ್ಚೆ ಹುಯ್ಯುವ ಸೊಪ್ಪು ತುಂಬಿದ್ದ ಕುಕ್ಕೆ-ನಾಪಿತೆಯು ನಕದಮೇಲೆ ಅನೇಕ ಕಪ್ಪಾದ ದಾಡಿ ಗಳನ್ನು ಕಂಡು ಮುಖದ ಪರದೆಯನ್ನು ಸ್ವಲ್ಪ ಓರೆಮಾಡಿದಳು. ದಾಡಿಯನುಳ್ಳ ಅಧಿ ಕಾರಿಗಳು ಅವಾಕ್ಕಾಗಿ ಆ ನಾಮಿತೆಯನ್ನು ನೋಡುತಲಿದ್ದರು. ಅಲ್ಲಿ ಬಂದು ಹಳ್ಳದಲ್ಲಿ ಅಡಿಗೆಯಾಗುತಲಿತ್ತು, ಅದು ಶೈವಲಿನಿಗೋಸ್ಕರ. ಶೈವಲಿ ನಿಯು ಇನ್ನೂ ಹಿಂದೂ ಆಗಿಯೇ ಇದ್ದಳು. ಒಬ್ಬ ಬ್ರಾಹ್ಮಣನು ಅಡಿಗೆಯನ್ನು ಮಾಡುತಲಿದ್ದನು. ಇನ್ನೂ ದೊರಸಾನಿಯಹಾಗೆ ಅಂಗಾ ಮೋಚಾ ಚಡಾಯಿಸಿ ಕೊಂಡಿ ರಲಿಲ್ಲ. ಭಾಸ್ಕರನು ಮನಸ್ಸಿನಲ್ಲಿ, ಶೈವಲಿನಿಯು ಓಡಿಹೋಗದೆ ಅಥವಾ ಪ್ರಾಣತ್ಯಾಗ ವನ್ನು ಮಾಡದೆ ಇದ್ದರೆ ಅವಳು ಅವಶ್ಯಕವಾಗಿ ಯಾವದಾದರೂ ಒಂದು ದಿನ ತನ್ನ ಸಂಗಡ ಒಂದೇ ಮೇಜಿನಮೇಲೆ ದುವನರು ಮಾಡಿದ ಅಡಿಗೆಯನ್ನು ಭೋಜನಮಾಡುವು ಳೆಂದೂ, ಈಗಲೆ ಅವಸರ ಪಟ್ಟರೆ ಎಲ್ಲಾ ಕೆಟ್ಟುಹೋಗುವುದೆಂದೂ ತಿಳಿದುಕೊಂಡು ತನ್ನ ನೃತ್ಯರು ಕೊಟ್ಟ ಪರಾಮರ್ಶೆಯ ಪ್ರಕಾರ ಶೈವಲಿನಿಗೆ ಅಡಿಗೆ ಮಾಡುವುದಕ್ಕೆ ಬ್ರಾಹ್ಮಣನನ್ನೇ ಗೊತ್ತು ಮಾಡಿದ್ದನು. ಬಾ ಹ್ಮಣನು ಅಡಿಗೆಮಾಡುತಲಿದ್ದನು. ಅವನ ಹತ್ತಿರ ಒಬ್ಬ ದಾಸಿಯು ಸಾಮಾನುಗಳನ್ನು ತೆಗೆದು ಕೊಡುತಲಿದ್ದಳು. ನಾವಿತೆಯು ಹೋಗಿ ಆ ದಾನಿಯನ್ನು ಕುರಿತು, ಏನು, ತಾಯಿ ! ನೀವು ಎಲ್ಲಿಂದ ಬಂದವರು ? ಎಂದು ಕೇಳಿದಳು. ದಾನಿಯು ಕೋಪಗೊಂಡು, ಎಲ್ಲಿಂದ ಬಂದರೆ ನಿನಗೇನು ಆದಹಾಗಾಯಿತು ! ಕಾತಿ ರಾಮೇಶ್ವರದಿಂದ ಬಂದೆವು. ಇವಳಿಗೇನೊ ! ಎಲ್ಲಿಂದಲೋ ಬಂದೆವು ಎಂದಳು. - ನಾಮಿತೆಯು ಸ್ವಲ್ಪ ಅಪ್ರತಿಭೆಯುಳ್ಳವಳಾಗಿ, ಅದಕ್ಕಲ್ಲಮ್ಮ ! ನಾವು ನಾವಿತರು. ಹಚ್ಚೆಗಿಚ್ಛೆ ಹಾಕಿಸಿಕೊಳ್ಳುವವರು ನಿಮ್ಮ ಹಡಗಿನಲ್ಲಿದ್ದರೆ ಹಚ್ಚೆಯೆರಿಯುತ್ತೇನೆ. ಅದ ಕ್ರೋಸ್ಕರ ಕೇ ದೆನೆಂದು ಹೇಳಿದಳು. ದಾಸಿಯು ಸ್ವಲ್ಪ ಕೋಪತಗ್ಗಿದವಳಾಗಿ, ಒಳ್ಳೆಯದು, ಕೇಳಿಬರುವೆನೆಂದು ಹೇಳಿ ಶೈವಲಿನಿಯನ್ನು ಕೇಳಿಬರುವುದಕ್ಕೆ ಹೋದಳು. ಹೋಗಿ ಶೈವಲಿನಿಯನ್ನು ಕೇಳಿದಳು.