ಪುಟ:ಚಂದ್ರಶೇಖರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Now ಚಂದ್ರಶೇಖರ. - ಸುಂದರಿ-ಗೊತ್ತಿದೆ. ಈ ಪ್ರಪಂಚದಲ್ಲಿ ನಿನ್ನಂತಹ ಪವಿದ್ಯೆ ಇನ್ನೂ ಹುಟ್ಟಿಲ್ಲ. ಭೂಮಂಡಲದಲ್ಲೆಲ್ಲಾ ದುರ್ಲಭನಾದ ಸ್ವಾಮಿಯು ನಿನಗೆ ದೊರಕಿದ್ದಾನೆ. ಅಂತಹ ಸ್ವಾಮಿಯ ಪ್ರೀತಿ, ಸ್ನೇಹ, ವಿಶ್ವಾಸಗಳಲ್ಲಿ ನಿನ್ನ ಮನಸ್ಸು ಮರುಗದೆ ಇದೆ. ಏತಕ್ಕೊ ಗೊತ್ತಾಗುವುದಿಲ್ಲ. ಅವನಿಗೆ, ಹುಡುಗರಾಡುವ ಬೊಂಬೆಗಳನ್ನು ಆದರಿಸುವಹಾಗೆ ಆದರಿಸುವುದಕ್ಕೆ ಬರುವುದಿಲ್ಲವೋ, ಅಥವಾ ದೇವರು ಅವನನ್ನು ಕಲ್ಲಿನಲ್ಲಿ ಮಾಡಿ ರಂಗು ಹಾಕಿ ಇಡದೆ, ಮನುಷ್ಯನನ್ನಾಗಿ ಮಾಡಿರುವುದರಿಂದಲೋ, ಏತಕ್ಕೋ, ನಿನ್ನ ಮನಸ್ಸು ಮರುಗದೆ ಇದೆ. ಗೊತ್ತಾಗುವುದಿಲ್ಲ. ಆತನು ಧರ್ಮಾತ್ಮ, ಪಂಡಿತ,-ನೀನು ಪಾಪಿಷ್ಠ. ಅಂತಹವನಲ್ಲಿ ನಿನ್ನ ಮನಸ್ಸು ಸೇರುವುದುತಾನೇ ಹೇಗೆ ? ನೀನು ಅಂಧರಿಗಿಂತಲೂ ಹೆಚ್ಚಾದ ಅಂಧೆ. ಆದುದರಿಂದಲೆ ನಿನ್ನ ಸ್ವಾಮಿಯು ನಿನ್ನನ್ನು ಹೇಗೆ ಪ್ರೀತಿಸುತ್ತಾನೆ, ಹಾಗೆ ಪ್ರೀತಿಸುವ ಸ್ವಾಮಿಯು ನಾರಿಯ ಜನ್ಮವನ್ನೆ ತಿದವಳಿಗೆ ದುರ್ಲಭವೆಂದು ನೋಡ ಲಾರೆ. ನಿನ್ನ ಅನೇಕ ಜನ್ಮಗಳ ಪುಣ್ಯಫಲದಿಂದ ಹೀಗೆ ಪ್ರೀತಿಸುವ ಸ್ವಾಮಿಯು ನಿನಗೆ ಸಿಕ್ಕಿದ್ದಾನೆ. ಅದು ಹೋಗಲಿ, ಈಗ ಆ ಮಾತು ಬೇಡ, ಆತನು ಪ್ರೀತಿಸದಿದ್ದರೂ ಆತನ ಚರಣ ಸೇವೆಯನ್ನು ಮಾಡುತ್ತ ಕಾಲಹರಣ ಮಾಡಬಲ್ಲೆ ಯಾದರೆ ನಿನ್ನ ಜನ್ಮವು ಸಾರ್ಥ ಕವಾಗುವುದು ! ಇನ್ನು ಸಾವಕಾಶ ಮಾಡಿ ಪ್ರಯೋಜನವೇನು ? ಇನ್ನು ನನಗೆ ಕೋಪ ಬರುವುದು. ಕೈವಲಿನಿ--ಈಗ ನೋಡು ; ಮನೆಯಲ್ಲಿ ಹೋಗಿದ್ದರೆ, ಮಾತಾಪಿತೃಗಳ ಕುಲಗ ಇಲ್ಲಿ ಯಾರಾದರೂ ಇದ್ದರೆ ಅವರನ್ನು ವಿಚಾರಿಸಿ ಅವರ ಮನೆಗೆ ಹೋಗಿರಬೇಕೆಂದು ಯೋಚಿಸುವೆನು. ಹಾಗೆ ಯಾರೂ ಇಲ್ಲದಿದ್ದರೆ ಕಾವೇಗೆ ಹೋಗಿ ಭಿಕ್ಷಾಟನದಿಂದ ಹೊಟ್ಟೆ ಹೊರೆಯುವೆನು, ಅದೂ ಆಗದಿದ್ದರೆ ಕೆರೆ ಕುಂಟೆಗಳಲ್ಲಿ ಬಿದ್ದು ಸಾಯುವೆನು, ಈಗ ಮಾಂಗೀರಿಗೆ ಹೋಗುವೆನು, ಹೋಗಿ, ವಾಂಗೀರು ಹೇಗೆ ಇರುವದೊ ನೋಡುವೆನು. ರಾಜಧಾನಿಯಲ್ಲಿ ಭಿಕ್ಷೆಯು ದೊರಕುವುದೊ ಇಲ್ಲವೊ ನೋಡುವೆನು, ಸಾಯಬೇಕಾಗಿ ದೈರೂ ಸಾಯುವೆನು, ಸಾಯುವುದೇನೋ ನನ್ನ ಕೈಯ್ಯಲ್ಲಿಯೇ ಇದೆ. ಈಗ ಮರಣ ಹೊರತು, ನನಗೆ ಬೇರೆಯುವಾಯುವೇನಿದೆ, ಹೇಳು ? ಆದರೆ ಸತ್ತರೂ ಸಾಯದಿದ್ದರೂ ಮನೆಗೇನೊ ಹಿಂದಿರುಗಿ ಹೋಗಕೂಡದೆಂದು ಪ್ರತಿಜ್ಞೆಯನ್ನು ಮಾಡಿಕೊಂಡಿದ್ದೇನೆ. ನೀನು ಅನರ್ಥವಾಗಿ ನನಗೋಸ್ಕರ ಇಷ್ಟು ಕೈಶಪಡತಿ, ಹಿಂದಿರುಗಿ ಹೊರಟುಹೋಗು, ನಾನು ಬರುವುದಿಲ್ಲ. ನಾನು ಇದ್ದೇನೆಂತಲೇ ಮನಸ್ಸಿನಲ್ಲಿ ತಿಳಿದುಕೊಂಡಿರು, ನಾನು ಸಾಯುವುದೇನೋ ನಿಜ, ಅದು ಚೆನ್ನಾಗಿ ಗೊತ್ತಿರಲಿ, ನೀನು ಹೊರಟುಹೋಗು. ಅನಂತರ ಸುಂದರಿಯು ಮತ್ತೇನೂ ಹೇಳಲಿಲ್ಲ. ಅಳುವನ್ನ ಡಗಿಸಿಕೊಂಡು ಎದ್ದು, ನೀನು ಶೀಘ್ರವಾಗಿ ಸಾಯುವೆ ಎಂದು ಭರವಸೆಯುಳ್ಳವಳಾಗಿದ್ದೇನೆ. ದೇವರ ಹತ್ತಿರ ತಾಯನುನೋವಾಕ್ಯಗಳಿಂದ ನಿನಗೆ ಸಾಯುವುದಕ್ಕೆ ಸಾಹಸ ಉಂಟಾಗಲೆಂದು ಪ್ರಾರ್ಥಿ ಸುತ್ತೇನೆ. ಮಾಂಗೀರಿಗೆ ಹೋಗಿ ಸೇರುವುದಕ್ಕೆ ಮುಂಚಿತವಾಗಿಯೇ ನಿನಗೆ ಮರಣವು