ಪುಟ:ಚಂದ್ರಶೇಖರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನದು ಭಾಗ. ಹೀಗೆ ಯಾರನ್ನು ಕುರಿತು ಯೋಚಿಸುತಲಿದ್ದನೊ ಅವಳೇ ಅವನಿಗಿದಿರಾಗಿ ಬಂದು ನಿಂತಳು, ಗುರಗಣಖಾನನು ಅವಳಿಗೆ ಬೇರೆ ಬಂದು ಆಸನವನ್ನು ಕೊಟ್ಟನು, ಅವಳು ದಳನೀಚೇಗಂ ! ಗುರಗಣರ್ಖಾ - ಬಹಳ ದಿನಗಳ ಮೇಲೆ ನಿನ್ನನ್ನು ನೋಡಿದ್ದು ತುಂಬ ಸಂತೋಷ ವಾಯಿತು. ನೀನು ನಬಾಬನ ಅಂತಃಪುರವನ್ನು ಸೇರಿದ ಮೊದಲ್ಗೊಂಡು ನಿನ್ನನ್ನು ನೋಡಲಿಲ್ಲ. ಆದರೆ ನೀನು ಈ ದುಸ್ಸಾಹಸಿಕವಾದ ಕೆಲಸವನ್ನು ಮಾಡಿದುದೇತಕ್ಕೆ? ಯಾರಿಗೆ ಹೇಗೆ ದುಸ್ಸಾಹಸಿಕವಾದುದು ? ಗುರಗಣರ್ಖಾ-ನೀನು ನಬಾಬನ ಬೇಗವಾಗಿ ರಾತ್ರಿ ಗೋಪನವಾಗಿ ಕಳ್ಳತನದಿಂದ ನನ್ನ ಹತ್ತಿರ ಬಂದೆ. ಇದು ನಬಾಬನಿಗೆ ತಿಳಿದರೆ ನಿನ್ನನ್ನೂ ನನ್ನನ್ನೂ ಇಬ್ಬರನ್ನೂ ವಧೆ ಮಾಡುವನು. ದಳನೀ-ಇದು ಅವನಿಗೆ ಗೊತ್ತಾಗುವುದಾದರೆ ನಿನಗೂ ನನಗೂ ಇರುವ ಸಂಬಂಧ ವನ್ನು ಪ್ರಕಾಶ ಮಾಡುವೆನು. ಅದು ಗೊತ್ತಾದರೆ ಅನಂತರ ಅವನು ಕೋಪ ಮಾಡ ಅ) ಕಾರಣವಿರುವುದಿಲ್ಲ. ಗುರಗಣ-ನೀನು ಹುಡುಗಿ, ಆದುದರಿಂದಲೆ ನೀನು ಹೀಗೆ ನಂಬುತ್ತಿ. ನನ್ನ ಸಂಬಂಧವನ್ನು ಇದುವರೆಗೂ ನಾನವನಿಗೆ ತಿಳಿಸಲಿಲ್ಲ, ನೀನು ನನ್ನನ್ನು ಬಲ್ಲೆ? ದಾಗಲಿ, ನಾನು ನಿನ್ನನ್ನು ಎಲ್ಲೆ ಯೆಂದಾಗಲಿ ಅವನಿಗೆ ನಮ್ಮಿಬ್ಬರಲ್ಲಿ ಯಾರೂ ಅವನಿಗೆ ತಿಳಿಸಿಲ್ಲ. ಈಗ ವಿಪತ್ತಾ ಲದಲ್ಲಿ ತಿಳಿಸಿದರೆ ಮಾರುತಾನೇ ನಂಬುವರು ? ಹೇಳಿದರೆ ಇದು ತಲೆಯನ್ನುಳಿಸಿಕೊಳ್ಳುವ ಮಾತೆಂದು ತಿಳಿಯುವರು. ನೀನು ಇಲ್ಲಿಗೆ ಬಂದುದು ಸರಿ ಯಾದ ಕೆಲಸವಲ್ಲ. ದಳನೀ-ನವಾಬನಿಗೆ ತಿಳಿಯುವ ಬಗೆ ಹೇಗೆ ? ಪಹರೆಯವರೆಲ್ಲರೂ ನಿನ್ನ ಆಜ್ಞ ಕಾರಿಗಳು ನೀನು ನನಗೆ ಕಳುಹಿಸಿದ್ದ ಗುರುತನ್ನು ಕಂಡು ನನ್ನನ್ನು ಬಿಟ್ಟರು. ನಾನು ಬಂದು ಮಾತನ್ನು ಕೇಳುವುದಕ್ಕೆ ಎಂದೆನು. ಇಂಗ್ಲೀಷರ ಸಂಗಡ ಯುದ್ಧನಾ ಗುವುದು ನಿಜವಾದ ಸಮಾಚಾರವೋ ? ಗುರಗಣರ್ಖಾ--ನೀನು ದುರ್ಗದಲ್ಲಿಯೇ ಇದ್ದುಕೊಂಡು ಈ ಸಮಾಚಾರವನ್ನು ಕೇಳಲಿಲ್ಲವೆ ? ದಳನೀ-ಕೇಳಿದೆ. ದುರ್ಗದಲ್ಲಿ ಇಂಗ್ಲಿಷರ ಸಂಗಡ ಯುದ್ಧವು ಸನ್ನದ್ಧವಾಗಿದೆ ಯೆಂದು ಪ್ರಚಾರಗೊಂಡಿದೆ, ಮತ್ತು ನೀನೇ ಈ ಯುದ್ಧಕ್ಕೆ ಕಾರಣನೆಂತಲೂ ಹೇಳು ತ್ತಾರೆ. ಅದೇತಕ್ಕೆ ? ಗುರಗಣರ್ಖಾ-ನೀನು ಬಾಲೆ. ಹೇಗೆತಾನೇ ಅದನ್ನೆಲ್ಲಾ ತಿಳಿದುಕೊಳ್ಳಬಲ್ಲೆ ? ದಳ ನೀ-ನಾನು ಹುಡುಗಿಯಹಾಗೆ ಮಾತನಾಡುವನೆ ? ಅಥವಾ ಹುಡುಗಿಯ