ಪುಟ:ಚಂದ್ರಶೇಖರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರನೆಯ ಪರಿಚ್ಛೇದ. ದಳನಿಗೆ ಏನಾಯಿತು ? ಕೈsk –..., ನಿ ತೀಥ ಕಾಲದಲ್ಲಿ ಸಂಗಡ ಒಬ್ಬಳನ್ನು ಮಾತ್ರ ಉಳ್ಳವಳಾಗಿ ರಾಜನಹಿ ಪಿಯು ರಾಜಮಾರ್ಗದಲ್ಲಿ ನಿಂತು ರೋದನವನ್ನು ಮಾಡುತಲಿ ದೃಳು, ಕುಲಸಂ, ಈಗ ಏನು ಮಾಡುವೆಯೆಂದು ಕೇಳಿದಳು. - ದನಿಯು ಕರಸಿಕೊಂಡು, ಬಾಈ ಮರದ ಕೆಳಗೆ ನಿಂತಿರುವೆನು. ಬೆಳಕು ಹರಿಯಲಿ ಎಂದಳು. ಕುಲಸಂ-ಇಲ್ಲಿ ನಿಂತು ಪ ಭಾತವಾದರೆ ನಮ್ಮನ್ನು ಹಿಡಿದುಕೊಂಡು ಹೋಗುವರು. ದಳನೀ-ಅದರಿಂದ ಭಯವೇನು ? ಭಯಪಡುವುದಕ್ಕೆ ನಾನು ಅಂತಹ ದುಸ್ಮ ರ್ಮವನ್ನು ಮಾಡಿರುವುದೇನು ? ಕುಲಸಂ--ನಾವು ಕಳ್ಳರಹಾಗೆ ಪುರಿಯನ್ನು ಬಿಟ್ಟು ಬಂದಿದ್ದೇವೆ. ಏತಕ್ಕೊಸ್ಪರ ಬಂದೆವೋ ಅದನ್ನು ನೀನು ಬಲ್ಲೆ. ಆದರೆ ಜನರು ಏನು ಹೇಳುವರು ? ಅಥವಾ ನಬಾ ಬನು ಏನು ತಿದು ಕೊಳ್ಳುವನು ? ಅದನ್ನು ಯೋಚಿಸಿ ನೋಡು. ದಳನೀ-ಏನಾದರೂ ತಿಳಿದುಕೊಳ್ಳಲಿ, ಈಶ್ವರನು ನಮ್ಮ ವಿಚಾರಕರ್ತನಾಗಿ ದ್ದಾನೆ. ನಾನು ಮತ್ಯಾವುದಕ್ಕೂ ಒಪ್ಪುವುದಿಲ್ಲ, ಬೇಕಾದರೆ ಸಾಯುವುದಕ್ಕೂ ಸಿದ್ಧ ವಾಗಿದ್ದೇನೆ. ಕುಲಸಂ-ಆದರೆ ಇಲ್ಲಿ ನಿಂತುಕೊಂಡರೆ ಏನು ಕಾರಂತ ಹಾಗಾಗು ವುದು ? ದಳನೀ-ಇಲ್ಲಿ ನಿಂತಿದ್ದರೆ ಹಿಡಿದುಕೊಂಡು ಹೋಗುವರು. ಆ ಉದ್ದೇಶದಿಂದಲೇ ಇಲ್ಲಿ ನಿಂತಿರುವೆನು. ಹಿಡಿದುಕೊಂಡು ಹೋಗಲೆಂಬುದೇ ನನ್ನ ಆಕೆಯಾಗಿರುವುದು. ನನ್ನನ್ನು ಹಿಡಿದುಕೊಂಡು ಹೋದರೆ ಎಲ್ಲಿಗೆ ಕರೆದುಕೊಂಡು ಹೋಗುವರು ? ಕುಲಸಂ-ದರಬಾರಿಗೆ. ದಳನೀ-ಪ್ರಭುವಿನ ಹತ್ತಿರಕ್ಕೆ ? ಅಲ್ಲಿಗೆ ಹೋಗಬೇಕೆಂತಲೇ ನನ್ನ ಆಶೆ. ಬೇರೆ ಕಡೆ ನನಗೆ ಸ್ಥಾನವಿಲ್ಲ, ಪ್ರಭುವು ನನ್ನನ್ನು ವಧೆ ಮಾಡಬೇಕೆಂದು ಅಪ್ಪಣೆಯನ್ನು ಕೊಟ್ಟರೆ ಸಾಯುವಾಗಲಾದರೂ ನಾನು ನಿರಪರಾಧಿನಿಯೆಂದು ಆತನಿಗೆ ತಿ 'ಸುವೆನು. ಇಲ್ಲಿಗಿಂತಲೂ ನಾವು ಹೋಗಿ ದುರ್ಗದ್ವಾರದಲ್ಲಿ ಕುಳಿತಿದ್ದರೆ ಬೇಗನೆ ಹಿಡಿದುಕೊಂಡು ಹೋಗುವರು.