ಪುಟ:ಚಂದ್ರಶೇಖರ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಭಾಗ, ಜಿಗೆ ಅರ್ಧಾಂಗೀಕಾರನಾಗಿ ಕಡೆಗೆ ಆಗಲೆಂದೊಪ್ಪಿಕೊಂಡನು. ಸುಂದರಿಯು ರೂಪಸಿಯ ಅತ್ತೆಯ ಮನೆಗೆ ಹೋದಳು. ಶ್ರೀನಾಥನು ಸ್ವಂತ ಮನೆಗೆ ಹೊರಟುಹೋದನು. ರೂಪನಿಯ ಗಂಡನು ಯಾರು ? ಆ ಪ್ರತಾಪ ! ಶೈವಲಿನಿಯು ಮದುವೆಯಾದಮೇಲೆ ಚಂದಶೇಖರನು ನೆರೆದು ಮನೆಯಲ್ಲಿದ್ದ ಪ್ರತಾಪನನ್ನು ಪ್ರತೃಹವೂ ನೋಡುತಲಿದ್ದನು. ಅವನು ಪ್ರತಾಪನ ನಡತೆ ಚರಿತ್ರೆಗಳನ್ನು ನೋಡಿ ಬಹಳ ಪ್ರೀತಿಸುತಲಿದ್ದನು. ಸುಂದ ರಿಯ ಸೋದರಿಯು ವಯಸ್ಟೆದಾಗುತ್ತಲೆ ಅವಳನ್ನು ಪ್ರತಾಪನಿಗೆ ಕೊಟ್ಟು ವಿವಾಹ ವಾಯಿತು, ಅದು ಚಂದ್ರಶೇಖರನ ಪ್ರಯತ್ನದಿಂದಲೆ ಆಯಿತು. ಅಷ್ಟು ಮಾತ್ರವೆ ಅಲ್ಲ. ಚಂದ್ರಶೇಖರನು ಕಾಸೀಂ ಅಲಿಖಾನನಿಗೆ ಜೋತಿಷ್ಯವನ್ನು ಹೇಳಿಕೊಟ್ಟ ಗುರುವಾಗಿದ್ದನು. ಅವನಿಗೆ ಚಂದ್ರಶೇಖರನಲ್ಲಿ ವಿಶೇಷ ಭಕಿ ಬಿತ), ಅದು ಕಾರಣ ಚಂದ್ರಶೇಖರನು ಪ್ರತಾ ಸನಿಗೆ ನವಾಬನ ಸಾರದಲ್ಲಿ ಚಾಕರಿಯನ್ನು ಮಾಡಿಸಿದನು. ಪ್ರತಾಪನು ತನ್ನ ಸ್ವಂತ ಸಾಮರ್ಥ್ಯದಿಂದ ಉನ್ನತವಾದ ಪದವಿಗೆ ಬಂದನು. ಪ್ರಕೃತ, ಸ ತಾಸನು ಒಬ್ಬ ಜಮೀನುದಾರನಾಗಿದ್ದನು. ಅವನ ವನೆಯು ದೊಡ್ಡ ಉಪ್ಪರಿಗೆಯ ಮನೆಯಾಗಿತ್ತು. ದೇಶದಲ್ಲೆಲ್ಲಾ ಅವನ ಹೆಸರು ಖ್ಯಾತಿಗೊಂಡಿತ್ತು. ಸುಂದರಿದು ಪಲ್ಲಕ್ಕಿಯು ಆ ಮನೆಯು ಅಂತಃಪುರಕ್ಕೆ ಹೋಯಿತು, ರೂಪಸಿಯು ಅಕ್ಕನನ್ನು ನೋಡಿ ರ್ಪಾಮವನ್ನು ಮಾಡಿ ಸಾದರದಿಂದ ಒಳಕ್ಕೆ ಕರೆದುಕೊಂಡು ಹೋದಳು. ಪ್ರತಾಪನೂ ಹೋಗಿ ನಾದಿನಿ ಯನ್ನು ಮಾತಾಡಿಸಿದನ.. - ಅನಂತರ ಅವಕಾಶವಾದಾಗ ಸುಂದರಿಯನ್ನು ವೇದಗ್ರಾಮದ ಸಮಾಚಾರವನ್ನು ಕುರಿತು ವಿಚಾರಿಸಿದನು, ಬೇರೆ ಸಮಾಚಾರಗಳೆಲ್ಲಾ ಆದಮೇಲೆ ಚಂದ)ಲೇಖರನ ಸಮಾ ಚಾರವು ಬಂದಿತು. ಪ್ರತಾಪನು ಪ್ರಶ್ನೆ ಮಾಡಿದುದಕ್ಕೆ ಸುಂದರಿಯು, ನಾನೂ ಅದೇ ಸಮಾ ಕಾರವನ್ನೆ ಹೇಳುವುದಕ್ಕೆ ಬಂದನೆಂದು ಹೇಳಿ, "ವಲಿನಿದ ಚಂದ್ರಶೇಖರನೂ ಊರುಬಿ ಟ್ಟ ಹೋದ ವೃತ್ತಾಂತವನ್ನೆಲ್ಲಾ ತಿಳಿಸಿದಳು. ಕೇಳಿ ಪ್ರತಾಪನು ಆಶ್ಚಪಟ್ಟು ಇಲ್ಲ ನಾದನು. - ಸ್ವಲ್ಪ ಹೊತ್ತಿನವೆಲೆ ತಲೆಯನ್ನೆ ತಿ ಪ್ರತಾಪನು ಸ್ವಲ್ಪ ರುಕಭಾವವನ್ನು ತಾ? ಸುಂದರಿಯನ್ನು ಕುರಿತು, ಇಷ್ಟು ದಿನಗಳ ವರೆಗೂ ನನಗೇತಕ್ಕೆ ಈ ಸಮಾಚಾರವನ್ನು ಹೇ ಕಳುಹಿಸಲಿಲ್ಲವೆಂದು ಕೇಳಿದನು. ಸುಂದರಿ-ಹೇಳಿ ಕಳುಹಿಸಿದ್ದರೆ ಏನುತಾನೇ ಮಾಡುತಲಿದ್ದೆ ? ಪ್ರತಾಪ ಏನು ಆಗುತಲಿತ್ತೆ ? ನೀನು ಹೆಂಗಸು, ನಿನ್ನಿ ದಿರಿಗೆ ಬಡಾಯಿ ಕೊಚ್ಚಿ ಕೊಳ್ಳುವುದಿಲ್ಲ, ನನಗೆ ಹೇಳಿಕಳುಹಿಸಿದರೆ ಸ್ವಲ್ಪ ಅನುಕೂಲವಾಗುತಲಿತ್ತು, ನಾನೂ ಕೈಲಾದಮಟ್ಟಿಗೆ ಏನಾದರೂ ಉಪಕಾರಮಾಡುತಲಿದ್ದೆನು. - ಸುಂದರಿ-ನೀನು ಉಪಕಾರವನ್ನು ಮಾಡುವುದೂ ಇಲ್ಲದ್ದೂ ನನಗೆ ಗೊತ್ತಾಗುವ ಬಗೆ ಹೇಗೆ ?