ಪುಟ:ಚಂದ್ರಶೇಖರ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Ho ಚಂದ್ರ ಶೇಖರ. ಸದೆ ಬಿಟ್ಟರೆ ಸನು, ಇಲ್ಲವಾದರೆ ಸಂಸ್ಕೃರನು ಆಯುಧಗಳ ಹಡಗನ್ನು ಅಲ್ಲಿಯೇ ಬಿಟ್ಟು ಮುಂದಕ್ಕೆ ಪಟ್ಟಾಕ್ಕೆ ಹೊರಟು ಹೋಗಬೇಕೆಂದು ಗೊತ್ತಾಗಿತ್ತು. - ಭಾಸ್ಕರನ ಎರಡು ಹಡಗುಗಳ ಮಾಂಗೀರಿನ ಘಾಟಿಯಲ್ಲಿ ನಿಂತಿದ್ದವು. ಬಂದು ಈ ನೀರು ಹರಗು, ದೊಡ್ಡದಾಗಿತ್ತು, ಮತ್ತೊಂದು ಅದಕ್ಕಿಂತಲೂ ಚಿಕ್ಕ ಹಡಗು. ದೊಡ್ಡ ಹಡಗಿನಮೇಲೆ ನವಾಬನ ಕೆಲವು ಸಿಪಾಯಿಗಳು ಪಹರೆ ಕೊಡುತ್ತಿದ್ದರು. ತೀರ ದಲ್ಲಿಯೂ ಕೆಲವು ಜನ ಸಿಪಾಯಿಗಳಿದ್ದರು. ಇದರಲ್ಲಿ ಆಯುಧಗಳು ಭರ್ತಿಯಾಗಿದ್ದವು. ಇದನ್ನೆ ಗುರಗಣಖಾನನು ಅಡ್ಡಿ ಮಾಡಿ ನಿಲ್ಲಿಸಿದ್ದನು. ಚಿಕ್ಕ ಹಡಗಿನಲ್ಲಿ ಅಸ್ತ್ರ ಗಳಿರಲಿಲ್ಲ. ಅದು ದೊಡ್ಡ ಹಡಗಿನಿಂದ ಇವತ್ತು ಮಾರು ದೂರದಲ್ಲಿತ್ತು, ಅದರಲ್ಲಿ ನಬಾಬನ ಸಿಪಾಯಿಗಳಿರಲಿಲ್ಲ. ಹಡಗಿನ ಮೇಲ್ಬಾಗದಲ್ಲಿ ತೆಲಂಗಿ ಸಿಪಾಯಿಯೊಬ್ಬನು ಇಂಗ್ಲೀಷರ ಕಡೆಯವನು ನಿಂತು ನೋಡಿಕೊಂಡಿದ್ದನು. ರಾತಿ) ಎರಡೂವರೆ ಪ್ರಹರವಾಗಿತ್ತು, ಅಂಧಕಾರ: ಆದರೂ ಪರಿಷ್ಕಾರವಾಗಿತ್ತು. ಚಿಕ್ಕ ಹಡಿಗಿನ ಮೇಲಿದ್ದ ತೆಲಂಗಿ ಸಿಪಾಯಿದು ಬಂದು ತಡವೆ ಏಳುತ್ತಾನೆ, ಒಂದು ತಡವೆ ಕೊಡುತ್ತಾನೆ, ಒಂದೊಂದು ತಡವೆ ತೂಗಡಿಸಿ ಬೀಳುತ್ತಾನೆ. ತೀರದಲ್ಲಿ ಒಂದು ಕುರುಡು ಕಾಡು, ಅಲ್ಲಿ ಮರೆಯಲ್ಲಿ ಒಬ್ಬ ಮನುಷ್ಯನು ನಿಂತುಕೊಂಡು ಸಿಪಾಯಿ ಯನ್ನು ನೋಡುತಲಿದ್ದನು. ನೋಡುತಲಿದ್ದವನು ಸ್ವಯಂ ಪ್ರತಾಪನಾಗಿದ್ದನು. ನಿವಾಯಿಯು ತೂಗಡಿಸುತಲಿದುದನ್ನು ಕಂಡು ಸತಾಪರಾಯನು ಬಂದು ಮೆಲ್ಲ ಮೆಲ್ಲಗೆ ನೀರಿನಲ್ಲಿಳಿದನು. ಸಿಪಾಯಿಯ) ನೀರಿನ ಶಬ್ದವನ್ನು ಕೇಳಿ ತೂಗಡಿಸುತ್ತ, “ ಹುಕ್ಕಂದಾರೆ - 17 ( Vh (One the'? ಅಲ್ಲಿ ಬರುವವರು ಯಾರು ? ) ಎಂದು ಕೂಗಿ ಹೇಳಿದನು. ಪ್ರತಾಪನು ಪ್ರತ್ಯುತ್ತರವನ್ನು ಕೊಡಲಿಲ್ಲ. ಪ್ರಹರಿದು ಪುನಃ ತೂಗಡಿಸುವುದಕ್ಕೆ ಪ್ರಾರಂಭಿಸಿದನು. ಹಡಗಿನೊಳಗೆ ಭಾಸ್ಕರನು ಎಚ್ಚರದಿಂದಿ ದನು. ಅವನೂ ಪಹರಿದ ಪ್ರಶ್ನೆಯನ್ನು ಕೇಳಿ, ಅತ್ತಿತ್ತ ನೋಡಿದನು, ನೋಡ ಲಾಗಿ ಒಬ್ಬ ಮನ ಸ್ಮನು ನೀರಿನಲ್ಲಿ ಸ್ನಾನಕ್ಕೆ ಇಳಿದಿದ್ದನು. - ಈ ಸಮಯದಲ್ಲಿ ಕುರುಡು ಕಾಡಿನಿಂದ ಅಕಸ್ಮಾತ್ತಾಗಿ ಬಂದು ಬಂದೂಕಿನ ಶಬ್ಬ ವಾಯಿತು, ಚಿಕ್ಕ ಹಡಗಿನ ಮೇಲಿದ್ದ ಪಹರಿದು ಗುಂಡಿನ ಪಟ್ಟನಿಂದ ಆಹತನಾಗಿ ನೀರಿನಲ್ಲಿ ಬಿದ್ದನು, ಅಹ್ಮರೊಳಗೆ ಪ್ರತಾಪನು ಹಡಗಿನ ಛಾಯೆಯು ಬಿದ್ದು ಕಪ್ಪು ಗಿದ್ದ ಸ್ಥಳಕ್ಕೆ ಹೋಗಿ ನೀರಿನಲ್ಲಿ ಮೂಗಿನವರೆಗೂ ಮುಣುಗಿಕೊಂಡು, ನಿಂತುಕೊಂಡನು. ಬಂದೂಕಿನ ಶಬ್ದವನ್ನು ಕೇಳಿ, ದೊಡ್ಡ ಹಡಗಿನಲ್ಲಿದ್ದ ಸಿಪಾಯಿಗಳು ' ಕ್ಯಾ ಹೋ ಯರೆ! ( ಏನಾಯಿತರೋ ? ) ಎಂದು ಕೂಗಿದರು. ಹಡಗಿನಲ್ಲಿದ್ದವರೆಲ್ಲರೂ ಎಚ್ಚರವಾ ದರು. ಫಾಸ್ಟ್ರನು ಬಂದೂಕನ್ನು ತೆಗೆದುಕೊಂಡು ಹೊರಗೆ ಬಂದನು. ಲಾರ್ರೆಸೆ ಫಾಸ್ಯರನು ಬಂದೂಕನ್ನು ತೆಗೆದುಕೊಂಡು ಹೊರಗೆ ಬಂದು ನಾಲ್ಕು ದಿಕ್ಕುಗಳನ್ನೂ ನೋಡಿದನು. ನೋಡಲಾಗಿ ತೆಲಂಗಿ ಪಹರಿದು ಅಂತರ್ಹಿತನಾಗಿದ್ದನು.

- -