ಪುಟ:ಚಂದ್ರಶೇಖರ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಭಾಗ. ೬೩ ಆತನ ಮನೋಮೋಹಿನಿಯಾದ, ವಾಗೈಖರಿಯಿಂದ ಅನಂತನಾದ, ಅಪರಿಕ್ಷೇಯನಾದ ವಿಧಾತೃವಿನ ಹೃದಯದ ಮಧ್ಯದಲ್ಲಿ ಅನುಸಂಧಾನ ಮಾಡಿ, ಯಾವನು ಸರಜ್ಞನಾಗಿರು ವನೊ ಅವನೂ ಈ ದುಃಖಮಯವಾದ ಅನಂತವಾದ ಸಂಸಾರದ, ಅನಂತವಾದ ದುಃಖ ರಾತಿಯನ್ನು ಅನಾದಿಯಿಂದ ಅನಂತಕಾಲಾವಧಿ ಹೃದಯದಲ್ಲಿ ಅನಿವಾರವಾಗಿ ಅನುಭವ ಮಾಡುತಲಿದ್ದಾನೆಂದು ತೋರಿಸಿದನು. ಯಾವನು ದಯಾಮಯನೋ ಅಂತಹವನು ಆ ದುಃಖವಾತಿದುನ್ನು ಅನುಭವ ಮಾಡಿ ದುಃಖಿತನಾಗುವುದಿಲ್ಲವೇನು ? ಹಾಗಿಲ್ಲದಿದ್ದರೆ ಅವನ ದಯಾಮಯನು ಹೇಗಾದಾನ ? ಆಗುವನ, ದುಃಖದೊಂದಿಗೆ ದೆಯ್ದು ಸಂಬಂಧವು ನಿತ್ಯವಾದುದು, ದುಃಖವುಂಟಾಗದಿದ್ದರೆ ದಯೆಯು ಸಂಚಾರವು ಹೇಗಾ ದೀತು ? ಯಾವನು ದಯಾಮಯನೋ ಅವನು ಅನಂತವಾದ ಸಂಸಾರದ ಅನಂತವಾದ ದುಃಖದಲ್ಲಿ ದುಃಖಿಯಾಗಿದ್ದಾನೆ. ಹಾಗಿಲ್ಲದಿದ್ದರೆ ಅವನು ದಯಾಮಯನಾಗುವುದಿಲ್ಲ. ಒಂದುವೇಳೆ ಅವನು ನಿರ್ವಿಕಾರವಾದವನು ; ಅವನಿಗೆ ದುಃಖವಿಲ್ಲವೆಂದು ಹೇಳುವೆಯಾ ದರ, ನಿರ್ವಿಕಾರವಾದವನು ಸೃಷ್ಟಿ ಸ್ಥಿತಿ ಸಂಹಾರಗಳಲ್ಲಿ ಸೃಹಾಶೂನ್ಯನಾಗಿರುವನು. ಅಂತಹವನನ್ನು ಸಮ್ಮಾ, ವಿಧಾತಾ ಎಂದು ಹೇಳಲಾಗುವುದಿಲ್ಲ. ಯಾವನು ಸಮ್ಮಾ, ವಿಧಾತಾ ಎಂದು ಹೇಳಿಸಿಕೊಳ್ಳುವನೋ ಅಂತಹವನು ನಿರ್ವಿಕಾರನೆಂದು ಹೇಳಿಸಿಕೊಳ್ಳಲಾ ರನು, ಅದು ತಾರಣ ಅವನೂ ದುಃಖವುದನ), ಹೀಗಿರುವಾಗ ನಾನೂ ನೀನೂ ದುಃಖವುಂಟಾದರೆ ಅಳುಬಹುದೆ ? ಎಂದು ಹೇಳಿದನು. - ರಮಾನಂದಸಾಮಿಯು ಪುನಃ ಹೇಳತೊಡಗಿದನು :- ಈ ಸರ್ವವ್ಯಾಪಿಯಾದ ದುಃಖದ ನಿವಾರಣೆಗೆ ಉಪಾಯವೇ ಇಲ್ಲವೆ ? ಉಪಾಯವಿಲ್ಲ. ಆದರೆ ಎಲ್ಲರೂ ಪರಸ್ಪರ ದುಃಖನಿವಾರಣೆಗೋಸ್ಕರ ನಿಂತರೆ ಸ್ವಲ್ಪಮಟ್ಟಿಗೆ ನಿವಾರಣೆಯಾಗಬಹದು. ಈಗ ನೋಡು ; ವಿಧಾತನು ತಾನೇ ಹಗಲೂ ರಾತ್ರಿ ಜೀವಜಂತುಗಳ ದುಃಖನಿವಾರಣೆಯಲ್ಲಿ ನಿಯುಕ್ತನಾಗಿದ್ದಾನೆ. ಅದರಿಂದಲೇ ಅವನಿಗೆ ಸುಖ. ಇಲ್ಲದಿದ್ದರೆ ಇಂದ್ರಿಯಾದಿಗಳ ವಿಕಾರ ಶೂನ್ಯರಾದ ದೇವತೆಗಳಿಗೆ ಬೇರೆ ಸುಖವಿಲ್ಲವೆಂದು ಹೇಳಿದನು. ಅನಂತರ ಗಳ ಲೋಕಹಿತೈಷಿತೆಯನ್ನು ಕುರಿತು ಕೀರ್ತನೆ ಮಾಡಿ, ಭೀಷ್ಮಾದಿ ವೀರರ ಪರೋಪಕಾ ರಗಳನ್ನು ವರ್ಣಿಸಿ ಹೇಳಿ, ಯಾವನು ಪರೋಪಕಾರಿಯೊ ಅವನೇ ಸುಖಿಯೆಂದೂ ಮತ್ತಾರೂ ಸುಖಿಗಳಲ್ಲವೆಂದೂ ತೋರಿಸಿದನು. ಅನಂತರ ರಮಾನಂದಸಾಮಿಯು ಶತಮುಖವಾಗಿ ಪರೋಪಕಾರ ಧರ್ಮದ ಗುಣಕೀರ್ತನೆಯನ್ನು ಮಾಡಲಾರಂಭಿಸಿದನು. ಧರ್ಮಶಾಸ್ತ್ರ ), ವೇದ, ಪುರಾಣೇತಿಹಾಸ ಮುಂತಾದವುಗಳನ್ನು ಮಥನವಾಡಿ ಅನರ್ಗ ಳವಾಗಿ ಅನೇಕಾನೇಕ ಪ್ರಮಾಣಗಳನ್ನು ದಹರಿಸಿ, ಶಬ್ದಸಾಗರವನ್ನು ವತನವಾಡಿ ಕತ ಶತ ಮಹಾರ್ಘವುಳ್ಳ ಶ್ರವಣಮನೋಹರವಾದ ವಾಕ್ಯ ಪರಂಪರೆಯನ್ನು ಕುಸುಮಮಾ ಲೆಹಾಗೆ ಪೋಣಿಸಲಾರಂಭಿಸಿ, ಸಾಹಿತ್ಯ ಭಾಂಡಾರವನ್ನು ಸೂರೆಮಾಡಿ, ಸಾರವತ್ತಾದ, ರಸಸರಿಪೂರ್ಣವಾದ, ಸದಲಂಕಾರ ವಿಸ್ಮವಾದ, ಕವಿತಾನಿಚಯವನ್ನು ಚಲ್ಲಿ, ಇದರ 10 |