ಪುಟ:ಚಂದ್ರಶೇಖರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vy ಚಂದಶೇಖರ. ಪ್ರತಾಪನ ಕೈತೊಳೆದುಕೊಂಡನು. ಆಗ ಕೈವಲಿನಿಯು ಕಿವಿಯಲ್ಲಿ, ಈಗ ಓದಿ ಹೋಗು, ಪ್ರವಾಹದಲ್ಲಿ ಅತ್ತಕಡೆ ಮಲೆ ತಿರುಗುತ್ತಲೆ, ಅಲ್ಲಿರುವ ಹಡಗು ನಿನಗೋ ಸ್ಥರ ಕಾದಿರುವುದೆಂದಳು. - ಪ್ರತಾಪನೂ ಮೆಲ್ಲಮೆಲ್ಲಗೆ, ಮೊದಲು ನೀನು ಹೋಗು, ಇಲ್ಲದಿದ್ದರೆ ನೀನು ಕಮ್ಮ ದಲ್ಲಿ ಸಿಕ್ಕಿಕೊಳ್ಳುವೆ ಎಂದನು. ಕೈವಲಿನೀ--ಈ ಸಮಯದಲ್ಲಿ ಓಡಿಹೋಗು. ಕೈಕೋಳಗಳನ್ನು ಪುನಃ ತೊಡಿ ನಿದರೆ ಹೋಗಲಾರೆ. ಈಗ ನೀರಿನಲ್ಲಿ ಧುಮುಕಿಬಿಡು, ಸಾವಕಾಶವಾಡ:ಡ, ಬಂದು ದಿನವಾದರೂ ನನ್ನ ಮಾತನ್ನು ಕೇಳು. ನಾನು ಹಚ್ಚಿ - ನೀರಿನಲ್ಲಿ ಬಿದ್ದುಬಿಡುವೆನು . ನೀನು ನನ್ನನ್ನು ನೀರಿನಿಂದ ಎತ್ತುವುದಕ್ಕೆ ಧುಮುಕಿಬಿಡು. ಹೀಗೆಂದು ಹೇಳಿ ಕೈವಲಿನಿಯು ಗಟ್ಟಿಯಾಗಿ ನಕ್ಕಳು. ನಗುತ ನಗುತ, ನಾನು ಅನ್ನ ವನ್ನು ತಿನ್ನುವುದಿಲ್ಲವೆಂದು ಕೂಗಿದಳು. ಪುನಃ ಅಳ ವುದಕ್ಕೆ ತೊಡಗಿದಳು. ಅಳುತ ಅಳುತ ಹೊರಗೆ ಬಂದು ನನಗೆ ಮುಸಲ್ಮಾನರ ಅನ್ನವನ್ನು ತಿನ್ನಿಸಿಬಿಟ್ಟರು. ನನ್ನ ಜಾತಿಯು ಹೋಯಿತು.-ತಾಯಿ, ಗಂಗೆ ! ನನ್ನ ನ್ನು ಹಿಡಿದುಕೊ ಎಂದು ಕೂಗುತ್ತ ಗಂಗೆಯ ಪ್ರವಾಹದಲ್ಲಿ ಧುಮುಕಿಬಿಟ್ಟಳು. ಏನಾಯಿತು ! ಏನಾಯಿ ತ, ! ಎಂದು ಪ್ರತಾಪನು ಚೀತ್ಕಾರ ಮಾಡುತ್ತ ಹಡ ಗಿನ ಹೊರಗೆ ಓಡಿಬಂದನು. ಸಂತ್ರಿಸು ಇದಿರಿಗೆ ನಿಂತಿದ್ದವನು ನಿಷೇಧಿಸಿದನು. ಪ್ರತಾಪನು, ಹರಾ ಮಜಾದ ! ಹೆಂಗಸು ಬಿದ್ದು ಸಾಯುತ್ತಾಳೆ, ನೋಡಿಕೊಂಡು ನಿಂತಿ ದ್ವೀಯಾ ? ಎಂದು ಹೇಳಿ ಅವನಿಗೆ ಒಂದು ಒದೆಯನ್ನು ಕೊಟ್ಟನು. ಸಂತಿಯು, ಅಯ್ಯೋ ! ಎಂದು ಪ್ರತಾಪನ ಪದಾಘಾತದಿಂದ ಹಡಗಿನಿಂದ ಬಿದ್ದು ಹೋದನು. ಅವನು ನದಿಯ ದಡದ ಕಡೆಯಲ್ಲಿ ಬಿದ್ದನು. ಹೆಂಗಸನ್ನು ರಕ್ಷಿಸು ಎಂದು ಕೂಗುತ್ತೆ ಮತ್ತೊಂದು ಕಡೆಯಲ್ಲಿ ಪ್ರತಾಪನು ನೀರಿನಲ್ಲಿ ಧುಮುಕಿದನು, ಈಜುವುದರಲ್ಲಿ ಸಮುರ್ಘ ಯಾದ ಶೈವಲಿನಿಯು ಮುಂದೆ ಮುಂದೆ ಈಜಿಕೊಂಡು ಹೊರಟುಹೋದಳು. ಸ ತಾ ಪನು ಅವಳ ಹಿಂದೆಹಿಂದೆ ಈಜಿಕೊಂಡು ಹೋದನು. ಕೈದಿಯು ಓಡಿಹೋದನೆಂದು ಹಿಂದೆ ಇದ್ದ ಸಂತ್ರಿದು ಕೂಗಿಕೊಂಡನು, ಮತ್ತು ಪ್ರತಾಪನಿಗೆ ಗುರಿಯಿಟ್ಟು ಬಂದೂಕನ್ನು ಎತ್ತಿ ಹಿಡಿದನು. ಆಗ ಪ್ರತಾಪನು ಈಜಿ ಕೊಂಡು ಹೋಗುತಲಿದ್ದನು. - ಪ್ರತಾಪನು, ಭಯವಿಲ್ಲ ಓಡಿಹೋಗಲಿಲ್ಲ.ಈ ಹೆಂಗಸು ಸಾಯುತ್ತಾಳೆ-ನೀರಿ ನಿಂದ ಮೇಲಕ್ಕೆತ್ತುತ್ತೇನೆ. ಹತ್ಯವಾಗುತ್ತಿರುವುದನ್ನು ನೋಡಿಕೊಂಡಿರುವುದು ಹೇಗೆ : ಅಣ್ಣ ನೀನು ಹಿಂದೂ_ತಿಳಿದು ತಿಳಿದು ಬಹ್ಮಹತ್ಯೆ ಮಾಡುವೆಯಾ ? ಎಂದು ಕೂಗಿ ಹೇಳಿದನು. - ಸಿಪಾಯಿಯು ಎತ್ತಿದ್ದ ಬಂದೂಕನ್ನು ಇಳಿಸಿದನು.