ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ. ಮಹಾಶಯರೇ! ನಾನು ಅತಿಶಯವಾದ ವೈದಗ್ಧವನ್ನೂ, ಕಾವ್ಯರಚನಾ ಕೌಶಲ್ಯನ ನ್ಯೂ ಹೊಂದಿದವನಲ್ಲ; ಆದರೂ ದೈವವಶಾತ್ ಒದಗಿದ ಅಲ್ಪವಾದ ಕವಿತಾ ಜ್ಞಾನವನ್ನು ತನ್ಮಾರ್ಗದಲ್ಲಿ ಪ್ರಯೋಗಿಸದಿದ್ದರೆ, ಕಾನನಕೌಮುದಿಯಂತೆ ನಿಷ್ಪಲವಾಗುವುದೆಂದೂ, ಮಹತ್ಸಥಾನುಸರಣವು ಶ್ರೇಯಸ್ಕರವೆಂದೂ ಎಣಿಸಿ, ಶ್ರೀ ಕೃಷ್ಣನು ಪರದಾರಾಭಿಗಮನವನ್ನು ಮಾಡಿದನೆಂಬ ಅಪವಾದಾ ರೋಪಣಕ್ಕೆ ಕಿವಿಗುಡುವವರ ಮನೋರೋಗ ನಿವಾರಣಾರ್ಥವಾಗಿ “ಚಂ. ದಾವಳಿ ವಿಲಾಸಂಎಂಬ ಈ ಗ್ರಂಥವನ್ನು ಗದ್ಯರೂಪವಾಗಿ ಬರೆದಿರುವೆನು. ಇದು ಅದ್ಭುತರಾಮಾಯಣ (ರಾಮಾಶ್ವಮೇಧ”ಗಳೆಂಬ ಆರಾಮಗಳಲ್ಲಿ ವಿಹರಿಸಲಿಚ್ಛಿಸುವವರಿಗೆ ಪ್ರವೇಶ ದ್ವಾರವಾಗಿದೆ, ಮತ್ತು ಸರಳಪದಗರ್ಭಿತವಾಗಿಯೂ, ಶೃಂಗಾರ ರಸಪ್ರಧಾನವಾಗಿಯೂ, ಪ್ರಥಮಾ ವಲೋಕನದಲ್ಲಿ ವಾಚಕರ ಮನಸ್ಸಿಗೆ ಅವಗಾಹವಾಗುವಂತೆಯೂ ಇದೆ. ಇದರ ಮುದ್ರಣ ವಿಷಯದಲ್ಲಿ ಪೂರ್ಣ ಸಹಾಯವನ್ನು ಮಾಡಿ ನನ್ನ ಪ್ರಯ ತ್ನವನ್ನು ಸಫಲವನ್ನಾಗಿ ಮಾಡಲು ಪ್ರೋತ್ಸಾಹಿಸಿದ ಮ. ರಾ. ರಾ. ಮುನ್ಸಿ ಪಲ್ ಕೌನ್ಸಿಲರ್ ಪಿ. ಭೋಜರಾಯರು, ಬಿ. ಎ., ಇವರ ಉಪಕೃತಿಯು ಚಿರಸ್ಮರಣೀಯವಾಗಿದೆ, ಮತ್ತು ಇದರ ಶುದ್ದಾ ಶುದ್ಧ ಪತ್ರಿಕೆಯನ್ನು ಸಿದ್ದ ಪಡಿಸಲಿಕ್ಕೂ ಅಲ್ಲಲ್ಲಿನ ವಿಷಯಸ್ಯಾಲಿತ್ಯಗಳನ್ನು ಸರಿಪಡಿಸಲಿಕ್ಕೂ ತನ್ನ ಅಮೌಲ್ಯವಾದ ಸಮಯವನ್ನು ಉಪಯೋಗಿಸಿ ಸಹಾಯಮಾಡಿದ ಮಂ ಗಳೂರು ಕೆನರಾ ಹೈಸ್ಕೂಲ್ ಉಪಾಧ್ಯಾಯರು, ಮ. ರಾ. ರಾ. ಕೆ. ಪಿ. ಪದ್ಮನಾಭಯ್ಯನವರು ಬಿ. ಎ., ಎಲ್‌, ಟಿ., ಇವರಿಗೆ ತುಂಬಾ ಕೃತಜ್ಞನಾ