ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 7 - ಗಳ ದೊಡ್ಡಿದನಾಗಿ ಇರ್ಪೆಯ? ಅದರಿo ಆ ಹೆಂಡತಿಯಪ್ಪ ಎನ್ನ ತಂಗೆಯನುಂ, ಪಲವುಂ ಪಣಂಗಳನುಂ, ಅಲ್ಲಿಂದಿಲ್ಲಿಗೆ ತರಿಸಿ ಸೊಗದಿಂ ಇರಲಕುಮಿ?” ಕಲಾವತಂಸಂ-ಕಾಂತೆ! ಆಂ ಪೂರ್ವಾಗ್ಡೆಯನಿದಂ ಪೊಂದಿ ದೊಡೆ ಪಣಮಿರ್ಕೆ, ಒಂದು ತೃಣಮುಮಂ ಈಯರ್ ; ಮೇಣೇಂ ವಿಪ್ರರ ಪೆಸ್ಟೋರ್ವಳೆ ಅಧೋಗತಿಯನೊದವಿಸಿದನೆಂದು ಮುನಿಗಳೆಲ್ಲ ರುಂ ಕೂಡಿ ಸಾಪಮಂ ಈವುದು ನಿಜಂ.* ಪೊಲೆಯಿತಿ-“ನಲ್ಲ! ಅದೆಂತಾನುಂ ಇರ್ಕೆ-ನೀನಿರ್ದೊದೆ ಎನ್ನ ಐಸಿರಿ ಎಂಟುನುಂಟು, ಅದುಂ ಪೋಕೆ ನೀನಗಲ್ಲ ಸಜ್ಜೆ ಗೋಣೆಗೆ ಇನಿಸುಮಲಂಕಾರಮಿಲ್ಲ೦, ಅದರಿo ನಿನ್ನನೆ ಇದಿರ್ಗೊಡುತಿರ್ಪದು” (ಎಂದು ಮರುಗಿಯುಂ, ಬೆಡಂಗಿಂ ಮರುಳಾಡಿಯುಂ, ಎಂತಾನುಂ ತನ್ನ ತಡಿಕೆವನೆಗೆ ಎಳದುದ್ಗಳ್), “ಪಿರಿದೇಂ, ಆರ್ಗು೦ ಸಂಸಾರಪಾಶಂ ಪಿರಿದಲ್ಲವೆ?” - ಕಲಾವತಂಸಂ-ತನ್ನೊಳೆ ತಾಂ “ಹಾ ಏಂ ಮಾಳ್ಳೆಂ! ಕೈವಿಡಿ | ದಳ ನಿವಳುಮಂ, ಈ ಮಕ್ಕಳುಮಂ, ತೊರೆವುದೆಂದೊಡೆ ಸ್ವಾಮಿಯುಂ ಭೂಮಿಯುಂ ಮೆಚ್ಚದ ಕೆಲಸ, ಅತಿ ನಿಪುಣೆಯಂ, ತ್ರಿಲೋಕಸುಂದರಿ ಯಂ, ತ್ರಿಕರಣಪೂರ್ವಕಂ ಎನ್ನನೆ ನಂಬಿದ ವೇಣುವಂ ಮರೆತೋದೆ ಇಹ ಪರವಿಹೀನನಪ್ಪುದೇ ಗತಿ, ಹುಂ, “ತಲೆಯೊಳ್ ಬರೆದುದು ಎಲೆಯೊಳ್ ಪೂಸೆ ಮಾಸುವುದೆ?” ಎಂಬ ನಾಣ್ಣುಡಿಯಂತೆ ಬಂದುದಂ ಅನುಭವಿಸು ವೆಂ” (ಎಂದವಳೊಡನೆ ಪಲವುಂ ಕಾಲದಲ್ಲಿ ರ್ದ೦). ಅಂತಿರಲ್ ಬ್ರಹ್ಮತೇಜಂಗಳೆಲ್ಲವುಂ, ಕೃಷ್ಣ ಪಯೋಧರಂ ಅಮರ್ದ ಕಾರ್ಗಾಲದ ದೆವಸಂಗಳಂತೆ ಮಾಸಿದುವು. ಮೊಗಮೋ, ಚಂಡಾಳಿ ಪೀರ್ದ ಬೆಳ್ಳಾವರೆಯಂತೆ ವಿರಸವಾಯ್ತು. ಬಳಿಯಂ ಪಲವುಂ ಪಗಲುಂ ಕಳೆಯ ಆ ಪೊಲೆಯಂ ತನ್ನ ಅವಸ್ಥೆಯಂ ತಿಳಿಯದೆ ಸೊಡರಂ ಪಸ್ಥೆಂದು ಬಗೆವ