- 8 - ಪತಂಗದಂತೆ ವೇಣುವನೆ ನೆನೆದು, ಮನೆಯಳ ಕಣ್ಮರೆ ಮನೆಗೆ ಬಂದನೆ ಬಂದಂ, ಅಂತು ಬಂದು ಮಟ್ಟಿನೇರ್ದು ಜಗಲಿಗೆ ಅಡಿ ಯಿಡುವುದುಂ. - ಸುಶರ್ಮ೦-(ಉರಿದೇಳು) “ಚಿ ಪೊಲೆಯ, ನೀನಾರ್? ಏಕೈ ತಂದೆ? ಇದೇಂ ಬೊಮ್ಮಣರ ಮನೆಯೆಂಬುದಂ ಅರಿಯೆಯ? ತೊಲ ತೊಲಗು, ಅಂತುಂ ಏನಾನುಂ ಕಜ್ಜ ಮಿರ್ದೊಡೆ ದೂರಮಿರ್ದು ಗಳಪಿ ಪೋಗು” ಎಂದು ದಕ್ಷಿಸಿದಂ. ಚಂಡಾಲ-(ಆ ನುಡಿಗೇಳು ಬೆದರ್ದು ಅಚ್ಚರಿವಟ್ಟು) “ಮಾವ! ಏನಾಂ ಕಲಾವತಂಸನಲ್ಲ ವೆ? ಇನಿತರೊಳುಂ ಮರವೆಯೆ? ಬಿಸಿಲೆ ಅತಿ ದೂರಂ ನಡೆದು ಮೈ ಇನಿಸುಂ ಕರಿದಾಯ್ತಂದು ಇಂತೆಲ್ಲಂ ಪೊಲ್ಲ ದುದಂ ನುಡಿವುದೆ? 'ಕರ್ಬು ಡೊಂಕಾದೊಡೆ ಸೀಯುಂ ಡೊಂಕೆ?' ಎಂಬ ನಾಣ್ಣು ಡಿಯನರಿಯೆಯ ? ಹಿಂದೆ ಹಿಮಕರುಕುಲಶೇಖರನಪ್ಪ ನಳಭೂಸನ ಮೈಯುಂ ಇಂತೆಯೆ ಕರಿದಾದೊಡುಂ ಬಳಿಯಮೇಂ ಕೀಳಾದನೆ?” ಸುಶರ್ಮ೦-(ಆ ಮಾತಂ ಕೇಳು ಸಂದೆಗದಿಂ ಭಯಕೊ ಪಂಗಳೆರಡುಂ ಒಟ್ಟಿಗೆ ಆ೦ ತಾನೆನೆ ಮಗಳಂ ಕರೆದು) ಎಲೆ ಮಗಳೆ, ಇವಂ ಆವೊಂ? ಏ೦ ನಿನ್ನೆರೆಯಂ?” ಎಂದು ಕೇಳ್ತಂ. ವೇಣು- (ದಿಟ್ಟಿಸಿ ಮರುಕದಿಂ), “ಅಪ್ಪ, ಅಪ್ಪುದು; ಆದೊಡೆ ಇವನಂ ಪರೀಕ್ಷಿಸಿದೊಡೆ ನಿಕ್ಕುವಂ ಈಗಲ್ ಪೊಲೆಯನಾಗಿರ್ಪಂ.” ಚಂಡಾಲ೦-“ ಓ ಎನ್ನ ಕಾಂತಾಶಿಖಾಮಣಿ ! ಏಂ ನೀನು ಮಿಂತೆಲ್ಲಂ ಎನ್ನೊಳ್ ಅಪವಾದಾರೋಪಣಂ ಗೆಯ್ದ ಪುದೆ ?” (ಎಂದು ಮೆಲ್ಲನೆ ಆಕೆಯ ಸಮೀಪಕೆ ಅಡಿಯಿಡಲ್ !) - (ಆ ಕಾಂತೆ ತೊಟ್ಟನೆ ತೊಲಗಿದೂರವಿರ್ದು, ಅಪ್ಪಂಗೆ ಒರೆದು, ಭಟರಂ ಕರೆಯಿಸಿ, ಆತನ ಕಾಪಿಗೆ ಸಮನಿಸಿ) “ನಿನ್ನ ಪರಿ ಏತರಿಂ ಈತೆರನಾಯ್ತು? ಪೇಳ್, ಅಲ್ಲದೊಡೆ ನಿನ್ನ ಜೀವಿತಕೆಯ ಕಡೆಯಾ
ಪುಟ:ಚಂದ್ರಾವಳಿ ವಿಲಾಸಂ.djvu/೧೯
ಗೋಚರ