ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 17 - ಗೊಂಡು ಕೋಪಿಸಿ ಅಸಹ್ಯವಾಗಿ ಬಡಿದು ಎರರ್ದವಸಂ ವಿಮು ಖನಾಗಿರ್ದo ಕಾಂತನೆಂದು ನಿನ್ನ ಗಂಡನ ಪರಿಯಂ ನೆನ್ನೆ ಇರುಳ್ ನೀನೆ ಪೇಳ್ವಿರ್ಪಯಲ್ಲೆ? ಅದರಿಂ ಉದ್ಯಾನದಗಮನಮಂ ಮಾಣ್‌, ಎಂತುಂ ಸೆಕೆಯಂ ತಾಳಲಾರೆಯಾದೊಡೆ ಕೆಳದಿಯರೊಡನೆ ಅಂತಃಪುರದೊಳೆ ಹನಿ ನೀರ ಕೊಪ್ಪರಿಗೆಯೊಳ್ ಜಲಕವಾಡಿ ಕುಳಿರ್ಗೊಳಲಕ್ಕುಂಎಂದು ಬುದ್ಧಿವೇಶ್ವತಾಯೆ. ಚಂದ್ರಾವಳಿ-ಅಬ್ಬೆ, ಆ ಮೇಪಿನ ತರಳಂ ಕೃಷ್ಣನೆನಿಸರವಂ. ಅವಂಗೆಯೆ ಬೆದರ್ದಪುದು ? ಪೂಗಳೊಳೆಲ್ಲ ತಿರುಂಗಿದೊಡುಂ ತುಂಬಿ ಸಂಪಗೆಯಂ ಸೋಂಕುಗುಮೆ? ನಿನ್ನ ಕೃಷ್ಣಂ ಏನೆನ್ನ ಕಣ್ಣೆರೆದೀಕ್ಷಿ ಪಂ? ಅಕ್ಕನಂ ವಶೀಕರಿಸಿದುದರ್ಕೆ (ಬಸಿರೊಂದಾದೊಡುಂ ಬಾಯಿ ಎರಡುಮ?' ಎಂಬ ನಾಣ್ಣುಡಿಯಂತೆ ರಾಧೆ ಅವನಂ ಪೊಂದಿದಳ್. ಅದಿರ್ಕೆ, ಪಗಲಿನ ಗುಮ್ಮನಂತೆ ಮನೆಯೊಳಗೆ ಎಂತಿರ್ದೊಡುಂ ಅದಾ ವಸೆಗಂ ? ಮೇಣಂ, ಪಞ್ಚಳಗಂ ಇನಿತುಂ ಇರ್ಪಾಗಳ ಅವಂ ಗೈವುದೇಂ ? ಆಂ ಪೋಗಿ ಬರ್ಪೆo." ಕುಲವತಿ-ಕೇಳೆನ್ನ ಕೊಂಡಾಟದ ಬೊಂಬೆ, ಈ ಸೆಣ್ಣಳು ಮಂ ನಂಬುವುದೆ ? ಇವರೆಲ್ಲರುಂ ಕೃಷ್ಣನ ಮೆಯ್ದಾಳಿ ಬಡಿದೊಡನೆಯೆ ನಿನ್ನ ಬಿಟ್ಟು ಅವನೆಡೆಗೆಯೆ ಪಾರ್ವ‌್ರ.” - ಚಂದ್ರಾವಳಿ-“ಪುಟ್ಟು ಮೊದಲ್ ಎನಗೆ ಕೆಳದಿಯರ್ಕಾಳಾದಿ ವರ್‌ ಎನ್ನಂ ಬಿಡರ್; ಅಂತುಂ ಬಿಟ್ಟೂಡುಂ, 'ದಾರವಂದಂ ಬಲಮಾ ಗಿರೆ ಚೋರನೇಂಗೈವಂ ? ಎಂಬಂತೆವೊಲ್ ಎನ್ನ ಮನಂ ದೃಢಮಿರ್ಪಾ ಗಳ್ ಅವಂ ಗೆಯ್ದುದೇಂ ?” | ಕುಲವತಿ- “ಮಗಳೆ, ನೀನಾಕೃಷ್ಣನಂದಮನರಿಯದೆ ಅವನಂ ಪುಲ್ಲೆ ಬಗೆವೆ; ಆತನೆಂತಾದೊಡುಂ ಗಂಡು, ನೀಂ ಸೆಣ್ಣು, ಅಂತಿರೆ ನಿನ್ನ ಸಾಸಮೆಲ್ಲ ಮವನೊಳ್ ಬಿರುಗಾಳಿಯ ಪಳ್ಳಿಯೆನಿಜಂ, ಅಂತುಮಲ್ಲದೆ .ಪೆಣ್ಣಳಂ ಮರುಳೆಲ್ವೆಡೆ ಮಾರಂ ಗೈದೊಂದು ವಶ್ಯ ಯಂತ್ರಮೆನಲಿರ್ಪo