- 18 - ಪಲವೇ೦, ಆ ನಂದಸುತಂ ನಿನ್ನಂ ಕಂಡರೆ ಎಂತಾನುಂ ಬಿಡಂ ಸಂದೆ ಗವಿಲ್ಲ೦, ಅಲ್ಲದೊಡೆ ನಿಕ್ಕುವಂ ಬೆಂದ ಭತ್ತಮಂ ಪಟ್ಟ ಪಂ, ಪಿರಿಯರ ಮಾತಂ ವಿರಲಾಗದೆಂಬರ್ ತಿಳಿದವರ್, ಅದರಿo ಜಲಕೇಳಿಗೆಂದೆಯ್ದು ಅಪವಾದದ ಬಿತ್ತಿಗೆ ನೀರಂ ಪೊಯ್ಯದಿರೆನ್ನ ಮಗಳೆ.” - ಚಂದ್ರಾವಳಿ-ಉಃ ಸಾಲ್ಕು ಮಾತನ ಪೊಗಳ್ಳೆಯೆಲ್ಲಂ, ನಿನ್ನ ಮಾತಾಡಿ ಜಯಿಸಲ್ ಆ೦ ಸಮರ್ಥಳಲ್ಲಂ, ಅದೆಂತಾನುಮಿರ್ಕೆ (ಎಂದು ಚಲವಿಡಿದು ಪೊರಡಲ್ ಉಜ್ಜು ಗಿಪುದುಂ,) ಕುಲವತಿ-“ಮಕ್ಕಳ್ ತನ್ನಿಂ ದೊಡ್ಡಿದರಾಗೆ ಅವರ ಮಾತನ ಕೇಳ್ವುದು, ಮತ್ತೆಂ ಗೆಯ್ಯುದು? ಆದೊಡೆ ಬನದೊಳ್ ಕಳಕಳಧ್ವನಿ ಯಂ ಗೈಯದಿರಿಂ , ಕಂಕಣಮಂ ಅಲುಗಿಸದಿ೦೦, ಮಯ್ಯಪರಿಮಳಂ ಪಸರಿಸದಂತ ಘೋಷಮಂ ಬಲಿದು ಮುರ್ಚುವುದು ಪೆರ್ಚೆಂ? ಕಾಲ ಮಂ ಕಳೆಯದೆ ಜತನದಿಂ ಬರ್ಪುದು” ಎಂದು ಬುದ್ದಿ ವೇಳು ಕೆಳದಿಯ ಥಂ ಒದವಿಸಿದಳ್. ಚಂದಾ ವಳಿ-“ಅಬ್ಬೆಯ ನುಡಿಗೆ ಬಾಯೊಳ್ ಆಯ್ತು” ಎಂದು ಕೆಳದಿಯರೊಡನೆ ದಂಡಿಗೆಯೊಳೆದಿದಳ್. ಅನ್ನೆಗಮಾ ಶ್ರೀಕೃಷ್ಣನ ವಿದೂಷಕನೆನೆ ಚರಿಸುತಿರ್ದ ಮಂದ ಮಾರುತಂ, ಇದೋ ಸಮೀಪ ಕೈತಂದಿರ್ಪಳ್ ಆ ಬಾಲೆಯೆಂದು ತಿಳಿಸುವಂತೆ, ಪೆಣ್ಣಳೊಡಂಬರದ ಚಂದ್ರಾವಳಿಯ ಮೆಯ್ಯ ಪರಿಮಳ ಮಂ ಕೊಂಡು ಗೋಪಾಲನಾಥನ ಮೂಗಿಗೆ ನಾಂಟಿಸಲೋಡಂ, ಆ ಕೃಷ್ಣಂ “ಓವೋ! ಇದೇಂ ಪರಿಮಳದೊಂದೇಳರಂ? ಆ ಚಂದ್ರಾವ ಳಿಯ ಶರೀರ ಗಂಧಮಂ ಕೊಂಡು ಪರಮಾನಂದದಿಂ ನೀನುಂ ಇನಿಸುಂ ಪರೀಕ್ಷಿಸೆಂದು ತಣ್ಣೆಲರೆ ತಂದಿತ್ತನೆ? ಅಂತಾದೊದೆ ಓ ನಲ್ಲೆ ಳೆಯ ತಂಗಾ ಳಿಯೆ! ಆ ನಲ್ಲೆ ಯಂ ಫುಲ್ಲಾ ಕ್ಸಿಯಂ ಮುಟ್ಟಿದ ನೀನೆ ಕೃತಾರ್ಥಂ; ನಿನ್ನ ಸದಾಗತಿತ್ವಂ ಸಫಲವಾಯ್ತು; ಆರುಂ ಪೆಣ್ಣಳ ಬಿಸಯದೊಳ್ ಮಚ್ಚರಂಗಡ, ಮೇಣೆಂ ಎನಗುಂ ಮಚ್ಚರಮೆ, ಅಂತಿರೆ ನೀನೆನ
ಪುಟ:ಚಂದ್ರಾವಳಿ ವಿಲಾಸಂ.djvu/೨೯
ಗೋಚರ