ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 31 -- ಗೋವಳರ್-(ಚಿಂತೆಯಂ ನಟಿಸಿ) “ಆ ಎಮ್ಮ ಕೆಳೆಯಂಗೆ ಈಯವಸ್ಥೆ ಯುನಾಯ್ತಿ! ಆಣೆಗೆಟ್ಟು ಉಸಿರ್ದ ಮಾತಿಗುಂ ತಿಲೋ .ದಕಮ? ಅದೆಂತಾನುಮಿರ್ಕೆ ತಲೆವೋಪಾಗಳ್ ಮುಂಡಾಸಿನ ಆಸೆಯೆ? ಎಂಬಂತೆ, ಮಯ್ದೆ ಬಂದಿರಲ್, ಮಾತಿನ ಅವಮಾನಮದೇಂ? ಎಲೆ ಕೃಷ್ಣ, ಮರ್ಯಾದೆಯೆಸಗದಿರ್, ಮೈವೇನೆಗೆ ಮರ್ದ೦ ಗೈಸಲ್ವೆಳ್ಳುಮೆ?” ಗುಣಂ-“ಕೃಷ್ಣಂಗೆ ಔಷಧವೇಕೆ? ಬೆಣ್ಣೆಯಂ ಕಳ್ಳಾಗಳುಂ, ಪೆಣ್ಣಳಂ ಕೆಣಕುವಾಗಳುಂ, ಇಂತಪ್ಪ ಪೆಟ್ಟಿನನಿತಂ ತಿಂದನೆ? ಎನಿತಂ ತಿನಲಿರ್ಕುಮೊ? ಅದೆಲ್ಲಂ ಅವನ ಶರೀರ ಲಾಘವಕೆಯ ಕಾರಣಂ,” ಕೃಷ್ಣಂ-(ಕೋಪಿಸಿ) ಆಇರ್ಕೆ ನಿಮ್ಮ ಪರಿಹಾಸ್ಯಂಗಳೆಲ್ಲವು .ಮಿರ್ಕೆ, ಕೇಳಿ೦, ಎಂಟನೆಯ ದಿನದೊಳಗೆ ಸೂರ್ಯನಸ್ತಂಗತನಪ್ಪುದರಿಂ ಮುನ್ನಮೆ ಈ ಕೃಷ್ಣಂ ಆ ಚಂದ್ರಾವಳಿಯಂ ಒಡಂಗೂಡಿದನೆಂಬ ವಾರ್ತೆ ಯ ನಿಮ್ಮ ಹಾಸ್ಯವೆಂಬ ರೋಗಕ್ಕೆ ಮರ್ದಂ ಮಾಳ್ಳುದು; ಇಲ್ಲ ದೊರೆ, ಕೆಳೆಯನಾದ ಈ ನಂದಾತ್ಮಜನ ಮೊಗಮಂ ಕನಸಿನೊಳಲ್ಲದೆ ಜಾಗ್ರದ ವಸ್ಥೆಯೊಳೆಂದುಂ ಕಾಣಲಾರಿರಿ.” ಎಂದಾಣೆಗೊಟ್ಟು ನುಡಿಯೆ, ಮಣಏಂ ತರತರದ ಆಣೆಗಳ್ ಪುಟ್ಟು ಗುಂ? ಈಗಲ್ ಆಣೆಯ ಬೆಲೆ ಕಿರಿದೆ?” ಕೃಷ್ಣಂ-“ ಕಿರಿದೋ, ಪಿರಿದೋ, ಎಂಬುದನರಿಯಲಕ್ಕುಂ ಕೆಲದಿನ ದೊಳ್‌, ಏಂ ಮೂಗಿಂ ಬಾಯ್ದೆ ದೂರಮೆ?” ಎಂದವರೊಡನೆ ಅಲ್ಲಿಂ ತಳರ್ದo. ಎಂಬಲ್ಲಿಗೆ ಚಂದ್ರಾವಳೀ ವಿಲಾಸದೊಳಗೆ ದ್ವಿತೀಯಶ್ವಾಸಂ. •°*** ಇತ್ತಮಾ ಚಂದ್ರಾವಳಿ ಅಬ್ಬೇವನೆಯಿಂ ಒತ್ತಂಬದಿಂ ನೀರಾಶಯ ಕಿಳಿವ ಗೋವಿನಂತೆ ಗಂಡನ ಮನೆಗೆ ಬಂದು, ಅಸ್ವಸ್ಸಮೆಂದುಂ ಇನ್ನು