ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 33 - ನವರ್ ಕಳಲೆದಾರಿಯಂ ಕಾಣ‌, ಅಂತಾಪರಿಯಿಂ, ದೊಡ್ಡಿದರಿರಮಂ ಬಡವರ್ ತಿಳಿವರ್‌, ಅವರ್‌ ಬಡತನದ ಪೊಲಬನೆ ತಿಳಿಯರ್, ಇನ್ನುಂ ಪಲಂಬರ್ ಬೆಕ್ಕು ಪಿಟ್ಟೆಯಂ ಬೈತಿಡುವಂತೆ ಧನಮನಡಂಗಿಸುವರಲ್ಲದೆ, ಬಡವರ್ಗಿನಿತಾನುಮಿಯರ್ ಅಂತುಮಲ್ಲದೆ ಕಂ|| ಕಾಲು ಹಿಡಿದು ಧರಿಸೆ ತಲೆ ಮೇಲಕೆ ನೆರಲಂ ಕೂಡುವುದು ಕೊಡೆಕೊಡೆನೆನದೆ || ಓಲಗಿಸಿದೊದಂತುಂದು ಶ್ರೀಲಂತಾನೀಯನೆಳ್ಳಿನನಿತುಮನಹಹಾ | ಎಂದು ಕಬ್ಬಿಗರುಸಿರ್ವುದುಂ ನಿಜವಾಯ್ತು-ಅದಿರ್ಕೆ, ಇನ್ನೆ ಮಂತಿರ್ಪವರ್ ಸಂಸಾರದ ಪೊಡೆಯಂ ಪೊರೆವುದೆಂತೊ? ಆ8 ಬಡವ ರ್ಗೆಯೆ, ಮನದುಂಬಿ ಮರಿಮಕ್ಕಳನೀವ ಬಿದಿಯ ಮಾಟಮನೇನೆಂಬೆನೋ!” ಎಂದು, ಪರಿಪರಿಯಿಂ ಪಳಯಿಸುತ್ತಿರಲ್. ಚಂದಾ-“ಬರಿದೆ ಚಿಂತಿಸಿ ಏಳರದ ಮುದುಪನಿದಂ ಇರ್ಮಡಿ ಗೈಯದಿರ್; ಇದೆ ಕೊಳ್, ಪೊರಲಾರ್ಪನೀತುಮಕ್ಕಿಯುಮಂ, ಪಣ ಮುಮಂ ಈವೆಂ; ಮನೆಯವರ್ ಬೈವರ್, ಅದರಿo ಅವರ್ ಬರ್ಪುದರಿಂ ಮುನ್ನಮೆ ಪೋಗು.” ಎಂದು ಅಂತೆಯೆ ಕೊಟ್ಟು ಕಾಲ್ವಿಡಿದು, “ನೀನಿನಿತಂ ಎನಗೆ ಒಳ್ಳೆತನೆಸಗಲೋಳ್ಳುಂ, ಎಳವರಯದ ಪೆಣ್ಣಿಕೆ ಪಳೆ ಮುದುಕನಪ್ಪೆನ್ನೊಳ್ ಊಳಿಗಮಂ ಪೇಳ್ವಳೆಂದೆಣಿಸದಿರ್”. ವಿ ಪ್ರ-" (ಮಗಳೆ) ಅಂತೆನ್ನೊಳ್ ಕವಲೆಣಿಕೆಯನೂರದಿರ್ ಮೈಕೈಗಳಿನಪ್ಪುದನೆಂತಾನುಂ ಗೈವೆಂ, ಅದೇಂ ಪೇಳ್”. ಚಂದ್ರಾ- ಪಾರ್ವರಗ್ಗಳ ! ಪೆರ್ಚೆನುಮಿಲ್ಲ೦, ನೀನಿನ್ನು ಪೋಗಲುಳಿದ ಗೋಕುಲಕ್ಕದಲುಂಟೋ?” ವಿಪ್ರಂ-“ಹುಂ, ಉಂಟು; ನಿನಗೇನಾನುಂ ಕಾಠ್ಯಮಿರ್ದೊಡೆ ಅತ್ಯವಶ್ಯಂ.”