ವಿಷಯಕ್ಕೆ ಹೋಗು

ಪುಟ:ಚಂದ್ರಾವಳಿ ವಿಲಾಸಂ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 36 ಬಂದಳ್' ಎಂದು ಪೇರ್ಸರದಿಂ ಕರೆದುಸಿರ್ದು, ರಾಧೆಗೆ ಪರಿಪರಿಯ ಸತ್ತಾ ರಂ ಗೆಯ್ದ ಲ್, ಒಡನಾ ಚಂದ್ರಾವಳಿಯುಂ ಓಡಿ ಎಂದು ಅಕ್ಕಂಗೆಗೆ ಕೃತ್ರಿಮೆ-ಓ ಪರಮಪ್ರಿಯೆಯಪ್ಪ ತಂಗೆ! ಸೊಬಗಿನ ಕಣಿ ಯಪ್ಪನಲ್ಲ ನೊಡನೆ ಸೊಗಂ ಬಾಳ್ವೆ (ಎಂದು ಪರಸಿದಳ್.) ಚಂದ್ರಾ-ಅಕ್ಕ! ಆ೦ ನಿನ್ನ ಕಾಣದೆ ಎನಿತ್ತೋ ಬರಿಸ ಮಾಯ್ತು, ಕಣ್ಣಳಿವು ನಿನ್ನನೆ ಪುಡುಕುತಿರ್ದುವು, ಇಂದಿಗೆ ಸಫಲ ಮಾಯ್ತು. ಕೃತಿಮೆ-(ನಕ್ಕು) ಹುಂ ಸಾಲ್ದುಂ, ನಿನ್ನ ನಿಯೆಲ್ಲ ವಂ ಆನರಿಯೆನೆ? ಆ ಬಿತ್ತರವೆಲ್ಲ ಒಂದೆಡೆಯೊಳೆ ಇರ್ಕೆ. - ಚಂದ್ರಾ)-ಅಕ್ಕ, ಇದೇ ನಿನ್ನ ನುಡಿಯೊಳ್ ಕೊಂಕು? ಅಂತೇ ನಾನುಂ ತಪ್ಪಿತಮಿರ್ದೊದ ಕಿರಿಯಳೊಳ್ ಪೇಳಲಾಗದೆ? ಕೃತಿಮೆ-ಪೇಳ್ವುದೇಂ? ಮೊನ್ನೆ ಅಬ್ಬೆವನೆಗೆ ನೀನೆಯ್ತಂದುಂ ಎನ್ನಂ ಲಕ್ಷಿಸದೆಯೆ ಇತ್ತಲ್ ಬಂದುದರಿನೇ, ಪ್ರೀತಿಯ ತೆರನೆಲ್ಲಂ ನಿರ್ಣ ಯಮಾಯ್ತು. ಆನೋ ನೀಂ ಬಂದಿರ್ಪೆಯೆಂದು ಎನಿತ್ಯಾತುರದೊಳ್ ಇರ್ದೆನೆಂಬುದಂ ಬಲ್ಲರೆ ಬಲ್ಲರ್. ಸುಮುಖಿ-ರಾಧೆ! ಅವಳ್ ಮೊದಲೇ ಪೇಳ ಳಿ, ಆ೦ ಕಿರಿ ಯಳೆಂದು ಅದರಿಂ ಆಕೆಯ ತಪ್ಪಂ ಕ್ಷಮಿಸಿ, ತಂಗೆಯಂ ನೀನಾದೆ ಡುಂ ನೋಡಿ ಬಿನದಿಸಲೇನಾಯ್ತು? ಕೃತಿಮೆ-ಅತ್ತೆ! ನೀಂ ಸೊಸೆಗೆ ಸಾಯಮಂ ಗೆಯ್ದ ಪೆ ಹುಂ ಇರ್ಕೆ, ಕಳೆದ ಬಿಸಯಂಗಳೆಲ್ಲವುಮಿರ್ಕೆ, (ಈ ಪರಿಯಿಂ ಸರಸ ಸಲ್ಲಾಪಂಗಳಿಂ ಪೊಳ್ಳಿನಿಸುಂ ಕಳೆಯೆ,) | ಕೃತಿಮೆ-- ಎರಳ್ಳರ್ದೆವಸಕೆ ಒರ್ಮೆಯಾದೊಡುಂ ನಿಮ್ಮಂ ನೋಡಿ ಮುದಂದಾಳ್ಳೆನೆಂದೊಡುಂ ಅದೃಷ್ಟವಶದಿಂ ಮನೆಯಿದು ಇನಿತ್ತಂ ದೂರವಾಯ್ತು.