- 37 - ಸುಮುಖಿ-ಮನೆ ದೂರವಾದೊಡೇಂ ಮನಂ ಸಮೀಪಮಿ? ಒರ್ಮೆ ಬಂದೊಡೆ ಪತ್ತುಂದಿನಮಿರ್ದು ಪೋದೊಡಾಯ್ತು, ಮತ್ತೇ? ಕೃತ್ರಿಮೆ--ಅಕ್ಕುಂ ಇನ್ನೆಂದು ಮಂತಕ್ಕುಂ. ಸುಮುಖಿ-ಎಂದು ಮೆಂದೇಂ, ಇಂದು ನಿನ್ನಂ ಪೋಗಲಾರ್ ಬಿಡುವಂ? ಕೃತಿಮೆ-ಆಂ ಬರ್ಪಾಗಳ್ ಮನೆಯೊಳ್ ಪೇಳ್ವೆ ನಿಲ್ಲ೦, ಅದ ರಿಂ ಪೋಗದೊಡೆ ಬೈವರ್. ಸುನಖಿ-ನಿನ್ನಂ ಬೈವುದೆಲ್ಲ ಮಿರ್ಕೆ, ಅಂತುಂ ಪೋಗಲ್ವೇ ಳ್ಳುಮಾದೊಡೆ ಎರಳೂರ್ವಗಲಾದೊಡುಮಿರ್ದು ಪೋಪುದು, ಮನೆವಾ ಧೈಯಂ, ನಾಡಿನಂದಮ, ಬಂಧುಗಳ ಪರಿಯಂ, ಒಂದುಮಂ ಕೇಳ್ಳೆ ನಿಲ್ಲಂ. ಕೃತಿಮೆ-(ಒಳಗಣ ಗುಟ್ಟಂ ಶಿವನೇ ಬಲ್ಲಂ” ಎಂಬಂತೆ) ಎಮ್ಮ ಮನೆಯಂದಂ ಆರ್ಗುಮರಿಯದು, ಅದರಿನೀಗಲ್ ಪೋಪೆಂ ಇನ್ನೊರ್ಮೆ ಬರ್ಪೆ೦, ಮೇಣೇಂ ಆನಿಂದಿಲ್ಲಿ ಕೂಂತೊಡೆ ಮುಳ್ಯ ಮೇಲೆ ಕೂಂತಂತೆಯೆ ವಲಂ. ಸುಮುಖಿ-ಓವೋ ಮಾತಿನ ಪುರುಳೆ, ನಿನ್ನೊಳ್ ನುಡಿಯಲ್ ಈ ಪಳ್ಳಿಯ ಹೆಣ್ಣಳೆಂತು ನೆರೆವರ್? ಅದೆಲ್ಲ ಮಿರ್ಕೆ, ನಿನ್ನ ತಂದೆಗೆ ಕನ ಸಿನೊಳುಂ “ಅಕ್ಕಂ ಅಕ್ಕಂ” ಎಂಬೊಂದು ಮಂತ್ರಂ, ಅದರಿಂ ಪೋಪೊಡೆ ಅವಳನೊಪ್ಪಿಸಿ ಪೋಗು, - ಚಂದ್ರಾ-ಅಕ್ಕ! ಮನೆಯೊಳ್ ನಿನಗಿರ್ಪ ಕಜ್ಜಂಗಳನೆಲ್ಲ ನಂ ಆನರಿವೆ, ಅದಿರ್ಕೆ, ನೀನಿಂದು ಪೋದೊಡೆ ಎನ್ನ ಎಂದಿನ ಕನಸಿನಂತೆ ಇದುಮೊಂದು ಕನಸೇ. ಕೃತಿಮೆ-ಕೇಳೆನ್ನ ಮನೋರಮೆ! ನೀನುಮಿಂತುಟು ಚಲವಿಡಿ ಯಲಾಗದು. ನಿನಗೆ ಮಾತ್ರವಲ್ಲ, ನಿನ್ನಿಂ ಪತ್ತುಂಮಡಿ ನಿನ್ನ ನೋಡ ಲಾಸ ಈ ರಾಧೆಗುಮುಂಟು, ಆ ನುಡಿಯಿರ್ಕೆ, ಪೆಣ್ಣ೪ ಮನೆಯೊಳ್
ಪುಟ:ಚಂದ್ರಾವಳಿ ವಿಲಾಸಂ.djvu/೪೮
ಗೋಚರ