– 39 | (ಎಂದು ಆಲಿಂಗನಂಗೆಯ್ದು ಪರಮಾನಂದದಿಂ ಬಗೆಯೊಳ್ ನಕ್ಕು ಬಿಸಿ ಳೆಯಂತೆ ಕಣ್ಣೀರು ಸುರಿಸಿ) ಓ ಅತ್ತೆ! ಎನ್ನಂತಿರ್ಪ ಗಣಿಕೆಯರ್ ನಿಮ್ಮ ನ್ಯರ ಮನೆಯಂ ಪುಗಲಾಗದು, ಆ೦ ಬಂದುದು ತಪ್ಪಿತವಾಯ್ತು, ಈ ಬಾಲಕಿಯಾಳನಟ್ಟಿದಳೆಂದು ಮುಂದರಿಯದೆ ಬಂದುದರ್ಕೆ ಕೋಪಿಸದಿರಿ, (ವಿಂದು ಪೊರಟಳ್), ಚಂದಾ)--ಮನೆಯವರ ಭಯದಿಂ ರಾಧೆಯಂ ಎವೆಯಿಕ್ಕದೆ ನೋಡುತ್ತಂ ಮರುಗುತಿರ್ದಳ್ ಈ ಕೃತಿಮೆ-ಎಲೆ ಬಾಲೆ! ನೀನೇಕೆ ಅಳಪೆ? “ಕೊಟ್ಟ ಕೂಸು ಕುಲದಿಂ ಸೆರಗೆ” ಎಂಬ ನಾಣ್ಣುಡಿಯಂ ತಿಳಿಯೆಯ? ಬರಿದೆ ಚಿಂತಿಸಿ ಮದುಮೆಯ್ಯಂ ದಂಡಿಸದಿರ್ (ಎಂದು ಹಿಂದೆ ನೋಡದೆ ಪೋದಳ್). ಒಡನಾಸುಮುಖಿ--(ಓಡಿವಂದು ಕೃತ್ರಿಮೆಯಿದಿರೊಳ್ ನಿಂದು) ಎಲೆ ರಾಧೆ! ಚಂದನ ಪರಿಯಂ ನೀನಿನ್ನು ತಿಳಿಯದವಳೆ? ಅವಂ ಯೋಚಿಸಿ ನುಡಿವುದಲ್ಲ, ನುಡಿದು ಯೋಚಿಪುದು, ಅದರಿಂ ಅವನ ಮಾತಿರ್ಕೆ; ಎನ್ನನುಂ, ನಿನ್ನ ತಂಗೆಯನುಂ, ನೋಡಿಯಾದೊಡುಮಿಂದು ಪೋಗಲಾ ಗದು, ಕೃತ್ರಿಮೆ-ಅತ್ತೆ! ನಿನ್ನ ಮನದಿರಮುಂ ಆನರಿಯೆನೆ? ನಿನಗಿದೋ ಸಾಸಿರಸೂಳ್ ವಂದಿಳಿ೦, ಅದು ಪೋಕೆ, ಮರದ ಬಂದಣಿಕೆಯಂತೆ ಯುಂ, ತನ್ನೊಳದ ಪಾವಸೆಯಂತೆಯುಂ, ನಿನ್ನ ಬಸಿರೊಳ್ ಪುಟ್ಟದ ಈ ಕಳಂ ಇರ್ದಡೆಯೊಳಿರ್ದೊಡೆ ಬಳಿಯನನ್ನಂ ಮನೆಯಂ ಪುಗಿಸರ್, ಅದರಿನಿವನಿರ್ಪ ಮಾದೊಳ್ ನೀರಂ ಮುಟ್ಟೆಂ. ಸುಮುಖಿ--ಎಲೆ ಚಂದ! ಮನೆಯವರೆಂದಿಲ್ಲ೦, ಬಂದವರೆಂದಿ ೪೦, ಬಾಯ್ದೆ ವಂದಂತೆ ಗಳಪಿ ಎಮ್ಮ ಕುಲಕೊಂದು ಬಹುಮಾನಮಂ ತಂದೆ; ಸಾಲ್ಲುಂ, ಇನ್ಯಾನುಂ ನಿನ್ನತ್ತಿಗೆಯಂ ಸಂತಯಿಸು. ಪಿರಿಯಳb ಬೇಡಿದೊಡೆ ನಿನ್ನ ಮಾನಂ ಕಿರಿದಾಗದು (ಎಂದು ಮೂದಲಿಸೆ)
ಪುಟ:ಚಂದ್ರಾವಳಿ ವಿಲಾಸಂ.djvu/೫೦
ಗೋಚರ