- 40 - ಕೃತಿಮೆ--ಅತ್ತೆ! ಇದೇತರ ಮಾತು? ನಿನ್ನ ಮಗಂ ಅತಿಸು ನೀತಂ, ಶಾಸ್ತ್ರಾದಿಗಳ ಆಚಾರಂಗಳಂ ಉದ್ಧರಿಪ ಮೈಮಂ, ಎನ್ನೊಳ್ ಬೇಡುವುದೆಂದೊಡೇಂ? ಆವುದುಂ ಬೇಡಂ, ಅವನಿರ್ದೆಡೆಗೆಯೆ ಕೈ ಮುಗಿ ಎಂ (ಎಂದು ಮೆಲ್ಲ ನಡಿಯಿದೆ) ಚ೦ ದಂ--(ಓಡಿವಂದು ಎರಗಿ) ಅತ್ತಿಗೆ! ಆ೦ ತರಳತೆಯಿಂ ಪಿಂಮುಂದರಿಯದೆ ನುಡಿದ, ಅಪರಾಧವನೆಲ್ಲಂ ಕ್ಷಮಿಸು, ನೀನೆನಗೆ ತಾಯ್ ಪಾಸಟ, ಅಂತುಮಲ್ಲದೆ ನೀನಿರ್ಪ ಮಾಡಿನ ಒಳಗಟ್ಟಿಗೆ ಆಂ ಬರ್ಪುದಿಲ್ಲ, ಎನ್ನ ಬೈಯಾಣೆ, ಕುಲದೈವದಾಣೆ, ಮೇಣೇಂ ಎಂತಾನು ಮಿಂದು ಪೋಗಲಾಗದು. ಕೃತಿಮೆ--(ತನ್ನೊಳೆ ತಾಂ) ಓ ಚಂದನಿವಂ ತನ್ನ ಕೊರಕ್ಕೆ ತಾನೇ ಉರುಲಂ ಬಿಗಿದಂ, “ಮೂಢ ಮೂರ್ಖ ಗರ್ದಭಶ್ಚಿಕ ರಾಶಿಃ” ಎಂಬೊಂದು ನುಡಿ ಈತಂಗೆಯ ನಿದರ್ಶನಂ. ಆ ಬಳಿಯಂ ಚಂದ್ರಾವಳಿಯುಂ, ಸುಮುಖಿಯುಂ, ಕೋಪವನಿಡದಿ ರೆಂದು ಕಾಡಿದರ್. - ಕೃತ್ರಿಮೆ- ಆಯ್ತು, ನೀವೆಲ್ಲರುಮಿಂತು ನುಡಿವುದಾದೊಡೆ ಎನಗಿ ನಿಸುಂ ಕೊಪಮಿಲ್ಲಂ, ಪೊಳ್ಳಾದೊಡೆ ಮೊರಿತು, ಈಗಲ್ ಪೋಗಿ ವರ್ಸೆ೦. ಚಂದಂ-ನೀನೀಗಲ್ ಪೋದೊಡೆ ಕೋಪದಿನೇ ಎಂದಾಯ್ತು, ಅಂತುಮಲ್ಲದೆ ಸಂಜೆಯುಮಿದೋ ಸನ್ನಣಮಂ ಗೆಯ್ಯಂ, ಮೇಣೇಂ ಏನ ಗೇನುಂ ಸಮಾಧಾನವಿಲ್ಲ, ಇದರಿಂ ಮೇಲೆ ನಿನ್ನ ಚಿತ್ತಂ, ಪೆರ್ಚೆಂ ಪೇಳ್ವುದು? (ಸುಮುಖಿಯಂ ನೋಡಿ) ಅಭೆ! ಅಂತ? ಕೃತಿಮೆ-(ತನ್ನೊಳ್) ಇದಂ ಬಿಟ್ಟೂಡೆ ಸಮಯಂ ಬೇರಿಲ್ಲ೦(ಎಂದು) ಚಂದ! ನಿಮ್ಮೆಲ್ಲರ ನುಡಿಯಂ ಮೀರಲುಂ, ಮರುಗುವೀ ಚಂದ್ರಾವಳಿಯಂ ನೋಡಿ ಸೃಸಲುಮಾರೇಂ, ಅಕ್ಕೆ, ಮನೆಯೊಳ್ ಬಂದು
ಪುಟ:ಚಂದ್ರಾವಳಿ ವಿಲಾಸಂ.djvu/೫೧
ಗೋಚರ